ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಹೃದಯ ಮತ್ತು ಫಾರ್ಮಸಿ ದಿನಾಚರಣೆ ನಡೆಯಿತು.ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್. ನಿರಂಜನ್ ಕಾರ್ಯಕ್ರಮ ಉದ್ಘಾಟಿಸಿದರು.ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯ ರೋಗ ಜಾಸ್ತಿ ಆಗಿ ಕಾಣಿಸಿ ಕಾಣಿಸಿಕೊಳ್ಳುತ್ತಿವೆ ಕಾರಣ ಕೆಲಸದೊತ್ತಡ ಮತ್ತು ನಮ್ಮ ಜೀವನಶೈಲಿ ಮತ್ತು ತಿನ್ನುವಂತಹ ಆಹಾರದಿಂದ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದರು.ಡಾ. ಪ್ರಜ್ವಲ್ ಮಾತನಾಡಿ, ಈ ವರ್ಷದ ಹೃದಯ ದಿನಾಚರಣೆಯ ಧ್ಯೇಯ ಒಳ್ಳೆಯ ಹೃದಯದಿಂದ ಎಲ್ಲರನ್ನು ಗೆಲ್ಲೋಣ ಎಂಬ ವಾಕ್ಯವಾಗಿದೆ, ಹೃದಯಾಘಾತವೆಂದರೆ, ಹಾರ್ಟ್ ಅಟ್ಯಾಕ್, ಕಾರ್ಡಿಕ್ ಅರೆಸ್ಟ್, ಹೃದಯ ಸ್ತಂಬನ, ಹೃದಯ ಕಂಠ , ಹೃದಯ ಮಾಂಸ, ಈ ಮೂರು ರೀತಿಯಲ್ಲಿ ಹೃದಯಾಘಾತವಾಗುತ್ತದೆ, ಹೃದಯಾಘಾತವು ಹೆಚ್ಚು 30 ರಿಂದ 45 ವರ್ಷದ ಒಳಗಿನ ವಯಸ್ಸಿನವರಿಗೆ ಹೆಚ್ಚು ಆಗುತ್ತದೆ. ರಕ್ತದೊತ್ತಡ , ಮಧುಮೇಹ, ಧೂಮಪಾನ, ಮದ್ಯಪಾನ, ಹೃದಯ ಸಂಬಂಧಪಟ್ಟ ಕಾಯಿಲೆಗಳು, ಆಹಾರ ವ್ಯತ್ಯಾಸಗಳಿಂದ ಉಂಟಾಗುತ್ತದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಮಾತನಾಡಿ, ಮಾನಸಿಕ ಒತ್ತಡ , ಆಹಾರ ಪದ್ಧತಿ, ವ್ಯಾಯಾಮ ಮಾಡದೆ ಇರುವುದು ಈ ಕಾಯಿಲೆಗೆ ಕಾರಣವಾಗಬಹುದು, ಹಾಗೂ ಜೇಕ್ ಫುಡ್ ಗಳನ್ನು ಅತಿಯಾಗಿ ಸೇವಿಸಬಾರದು ಎಂದು ತಿಳಿಸಿದರು.ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧ ಕಾಯಿಲೆಗಳು ಜಾಸ್ತಿ ಆಗುತ್ತಾ ಇವೆ , ಕಾರಣ ನಾವು ತೆಗೆದುಕೊಳ್ಳುವ ಆಹಾರ ಇರಬಹುದು, ಹೃದಯ ಸಂಬಂಧ ಯಾವುದೇ ಕಾಯಿಲೆ ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದರು.ರೋಟರಿ ಅಧ್ಯಕ್ಷ ನಿರಂಜನ್ ಮಾತನಾಡಿ, ತಿಂಗಳ ಕೊನೆಯ ಗುರುವಾರ ನಾವು ಕಣ್ಣಿನ ತಪಾಸಣೆ ಯನ್ನು ಮಾಡುತ್ತಾ ಬಂದಿದೆ, ಇಲ್ಲಿ ಹೆಚ್ಚು ಬಾರಿ ಬಿ.ಪಿ. ಮತ್ತು ಶುಗರ್ ರೋಗಿಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ, ಅವರಿಗೆ ಹೃದಯ ಸಂಬಂಧಿ ಕಾಯಿದೆ ಬಗ್ಗೆ ಹೆಚ್ಚು ಆರೋಗ್ಯ ಶಿಕ್ಷಣ ಬೇಕಾಗಿದೆ ಎಂದು ತಿಳಿಸಿದರು.ರೋಟರಿ ಸಂಸ್ಥೆಯ ಕಾರ್ಯದರ್ಶಿ ಬಿ.ಎನ್. ಶಿವಣ್ಣ, ಸದಸ್ಯರಾದ ಆರ್ಮುಗಂ, ನಾರಾಯಣ್ ಲಾಲ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ, ಸುನಿಲ್, ಪರಿಮಳ, ರವಿರಾಜ್ ಲಕ್ಷ್ಮಿಭಟ್, ಅರ್ಚನಾ, ಉಮೇಶ್, ಸಿದ್ದರಾಜು, ಮಹೇಂದ್ರ, ಉಮೇಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಇದ್ದರು.