ಬಿಸಿಲಿನ ತಾಪ ಹೆಚ್ಚಳ; ಬಾರದ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ

| Published : Apr 20 2024, 01:03 AM IST

ಸಾರಾಂಶ

ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾದ ವರದಿಯಾಗಿತ್ತು. ಅದರಂತೆ ಹಲಗೂರು ಸಮುತ್ತಾ ಮಳೆ ಬರುವ ಸೂಚನೆ ಗುರುವಾರ ಕಂಡು ಬಂತು. ಎಲ್ಲ ರೈತರು ಮಳೆಯಾಗುತ್ತದೆ ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಸ್ವಲ್ಪ ತಂಪೆರದಂತಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ರೈತರು, ಜನರ ನಿರೀಕ್ಷೆ ಹುಸಿಯಾಗಿದೆ.

ಎಚ್.ಎನ್. ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ಬಿಸಿಲಿನ ತಾಪ ಹೆಚ್ಚಾಗಿದ್ದು ಮಳೆ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ರೈತರು ಹಾಗೂ ಸಾರ್ವಜನಿಕರಿಗೆ ಭಾರೀ ನಿರಾಸೆಯಾಗಿದೆ.

ಗುರುವಾರ ಸಂಜೆ ಹಲಗೂರಿನಲ್ಲಿ ಗುಡುಗು ಮತ್ತು ಗಾಳಿ ಬೀಸುತ್ತಿದ್ದು, ಮಳೆ ಬರುವ ಸೂಚನೆಯಲ್ಲಿ ರೈತರು, ಜನರು ಸಂತಸದಿಂದ ಕಾದು ಕುಳಿತಿದ್ದರು. ಆದರೆ, ಸಂಕೇತಿಕವಾಗಿ ನಾಲ್ಕೈದು ಹನಿ ಹಾಕಿ ಹಾಕಿ ಮಳೆ ಬಾರದೆ ಇರುವುದರಿಂದ ರೈತರಿಗೆ ನಿರಾಸೆ ಮೂಡಿಸಿತು. ಶುಕ್ರವಾರ ಸಂಜೆ ಮೋಡ ಮುಸುಕಿನ ವಾತಾವರಣವಿತ್ತು. ಆದರೆ, ಮಳೆ ಬೀಳುವ ಲಕ್ಷಣಗಳು ಇರಲಿಲ್ಲ.

ಕಳೆದ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ರೈತರು ಬೆಳೆ ಬೆಳೆಯದೆ ಕಂಗಾಲಾಗಿದ್ದಾರೆ. ಆದರೆ, ಹಲಗೂರು ಹೋಬಳಿ ನೀರಾವರಿಯಿಂದ ವಂಚಿತವಾಗಿದ್ದು ಮಳೆ ಆಸರೆಯಲ್ಲೇ ಬೆಳೆ ಬೆಳೆದು ತಮ್ಮ ಕುಟುಂಬದ ನಿರ್ವಹಣೆ ಮಾಡಬೇಕಾಗಿದೆ.

ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾದ ವರದಿಯಾಗಿತ್ತು. ಅದರಂತೆ ಹಲಗೂರು ಸಮುತ್ತಾ ಮಳೆ ಬರುವ ಸೂಚನೆ ಗುರುವಾರ ಕಂಡು ಬಂತು. ಎಲ್ಲ ರೈತರು ಮಳೆಯಾಗುತ್ತದೆ ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಸ್ವಲ್ಪ ತಂಪೆರದಂತಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ರೈತರು, ಜನರ ನಿರೀಕ್ಷೆ ಹುಸಿಯಾಗಿದೆ.

ತಾಪಮಾನ ಹೆಚ್ಚಾಗಿರುವುದರಿಂದ ಹಗಲು ಗಾಳಿ ಬೀಸದೆ ಇರುವುದು, ಬೆಳಗಿನ ಬಿಸಿ ತಾಪಮಾನ ಅತಿ ಹೆಚ್ಚಾವುದರಿಂದ ರಾತ್ರಿ ವೇಳೆ ಇದರ ಪರಿಣಾಮ ಎದುರಾಗುತ್ತಿದೆ. ಜನರು ಬಿಸಿ ತಾಪಮಾನವನ್ನು ತಡೆದುಕೊಳ್ಳಲಾಗದೆ ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಮನೆ ಮೇಲ್ಚಾವಣಿಗಳು ಸಹ ಬಿಸಿಲಿನ ತಾಪದಿಂದ ಕಾದಿರುವುದರಿಂದ ಮನೆಯೊ ಒಳಗೆ ವಾತಾವರಣವೂ ಬಿಸಿಯಾಗಿದೆ.ಒಂದು ತಿಂಗಳ ಹಿಂದೆ ಮಳೆ ಆಗಿದ್ದಾರೆ ಎಳ್ಳಿನ ಬೆಳೆ ಬೆಳೆಯಬಹುದಿತ್ತು. ಈಗ ಆ ಬೆಳೆಯು ತಪ್ಪಿದೆ. ಈಗ ಮಳೆ ಸುರಿದರೆ ರಾಗಿ ಹಾಕಲು ರೈತರು ತಮ್ಮ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಒಂದು ವೇಳೆ ಮಳೆಯಾಗದಿದ್ದರೆ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುತ್ತಾರೆ.

-ನಾಗರಾಜು, ರೈತರು, ತೊರೆಕಾಡನಹಳ್ಳಿ.ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಫ್ಯಾನ್ ಹಾಕಿಕೊಂಡು ಮಲಗುವುದಕ್ಕೂ ಆಗದೇ ಇರುವ ಪರಿಸ್ಥಿತಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬೀಳದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ.

- ಎಚ್.ಆರ್.ಇಂಧುದರ್ , ವರ್ತಕರು ಸ್ವೀಟ್ ಅಂಗಡಿ ರುದ್ರಪ್ಪನ ಪುತ್ರ