ಸಾರಾಂಶ
ಕೊಪ್ಪ, ವಿದ್ಯಾರ್ಥಿಗಳ ಆನ್‌ಲೈನ್ ಕೋಚಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇಂಟರ್‌ನೆಟ್ ಸೌಲಭ್ಯ ಹೆಚ್ಚಿಸಲು ಸ್ಥಳದಲ್ಲೇ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿ ವಿದ್ಯುತ್ ಪೂರೈಕೆ ಸಮಸ್ಯೆ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಮುಂದಿನ ಒಂದು ತಿಂಗಳಿನ ನಂತರ ಮತ್ತೆ ಪ್ರಗತಿ ಪರಿಶೀಲಿಸುವುದಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ್ ಸೂಚನೆ
ಕನ್ನಡಪ್ರಭ ವಾರ್ತೆ, ಕೊಪ್ಪವಿದ್ಯಾರ್ಥಿಗಳ ಆನ್‌ಲೈನ್ ಕೋಚಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇಂಟರ್‌ನೆಟ್ ಸೌಲಭ್ಯ ಹೆಚ್ಚಿಸಲು ಸ್ಥಳದಲ್ಲೇ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿ ವಿದ್ಯುತ್ ಪೂರೈಕೆ ಸಮಸ್ಯೆ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಮುಂದಿನ ಒಂದು ತಿಂಗಳಿನ ನಂತರ ಮತ್ತೆ ಪ್ರಗತಿ ಪರಿಶೀಲಿಸುವುದಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಕೊಪ್ಪ ಬಾಳೆಹೊನ್ನೂರು ಗಡಿಭಾಗದ ಜವಾಹರ್ ನವೋದಯ ವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಕ್ಕಳನ್ನುದ್ದೇಶಿಸಿ ಮಾತಾನಾಡಿದ ಅವರು ಹಿಂದೆ ಹಾವಾಡಿಗರ ದೇಶ ಬಿಕ್ಷುಕರ ದೇಶ ಎಂದು ಕರೆಯುತ್ತಿದ್ದ ರಾಷ್ಟ್ರ ಇಂದು ಜಾಗತಿಕವಾಗಿ ಇತರೆ ದೇಶಗಳಿಗೆ ಸಾಲ ನೀಡುವ ಹಾಗೂ ಬ್ರಹ್ಮೋಸ್ ನಂತಹ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶವಾಗಿ ಬೆಳಿದಿದೆ. ಎಲ್ಲದಕ್ಕಿಂತ ದೇಶವೇ ಮೊದಲು ಎನ್ನುವ ವಿಚಾರದೊಂದಿಗೆ ಸಾಗಿದಾಗ ಮಾತ್ರ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ವಿದ್ಯಾರ್ಥಿ ಜೀವನ ದಿಂದಲೇ ನಾವು ಅದನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟ್ರದ ಅತ್ಯುತ್ತಮ ವಿದ್ಯಾಕೇಂದ್ರಗಳಲ್ಲಿ ಒಂದಾಗಿರುವ ನವೋದಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಏನಾದರೂ ಸಮಸ್ಯೆ ಗಳಿದ್ದರೆ ತಮಗೆ ತಿಳಿಸುವಂತೆ ಹೇಳಿದರು.ಪೋಷಕರ ಮತ್ತು ಶಿಕ್ಷಕರ ಪರಿಷತ್ತಿನ ಸದಸ್ಯರು ಕೆಲವು ಮೂಲಭೂತ ಸೌಕರ್ಯಗಳನ್ನು ಇನ್ನೂ ವಿಸ್ತರಿಸು ವಂತೆ ಮನವಿ ಮಾಡಿದರು. ಸಂಸದರು ಅದನ್ನು ಶೀಘ್ರವಾಗಿ ಪೂರೈಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದರು. ಹೊಸ ಹೆಚ್ಚುವರಿ ಬಾಲಕರ ವಸತಿ ನಿಲಯವನ್ನು ಶೀಘ್ರವಾಗಿ ತೆರೆಯುವುದಾಗಿ ತಿಳಿಸಿದರು.ಪ್ರಾಂಶುಪಾಲ ಡೇನಿಯಲ್, ಆಡಳಿತ ಮಂಡಳಿ ಕೆ.ಟಿ. ವೆಂಕಟೇಶ್ ಹಾಗೂ ನವೋದಯ ಪಿಟಿಸಿ ಸದಸ್ಯರಾದ ಪ್ರಭಾಕರ, ಉದಯಕುಮಾರ್, ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಬಿ.ಎಸ್.ಎನ್.ಎಲ್. ಸಲಹಾ ಸಮಿತಿ ಸದಸ್ಯರಾದ ವಿನೋದ್ ಬೊಗಸೆ, ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸಂತೋಷ್ ಅರನೂರ್, ಹೋಬಳಿ ಅಧ್ಯಕ್ಷ ಕಾರ್ತಿಕ್, ಪ್ರವೀಣ್, ಸಂಜಯ್ ಹಾಗೂ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.