ಸಾರಾಂಶ
ಹೊಸಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳಲ್ಲಿ ನ್ಯಾಯಾಂಗದ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ನ್ಯಾಯಾಧೀಶರು ಉಳಿಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.
ಹೊಸಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳಲ್ಲಿ ನ್ಯಾಯಾಂಗದ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ನ್ಯಾಯಾಧೀಶರು ಉಳಿಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.
ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ಸನದಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ನ್ಯಾಯಾಧೀಶರು ಪ್ರಕರಣದ ಸತ್ಯಾಸತ್ಯತೆ ಅರಿತು ಅಂತಃಕರಣದಿಂದ ಕಕ್ಷಿದಾರರಿಗೆ ತೀರ್ಪು ಕೊಡಬೇಕು. ಆ ವಿಷಯದಲ್ಲಿ ಬಸವರಾಜ್ ಸನದಿ ಚಾಚೂ ತಪ್ಪದೆ ನಡೆದುಕೊಂಡಿದ್ದಾರೆ. ಅವರ ವೃತ್ತಿ ಜೀವನದ ಶಿಸ್ತು, ಸಂಯಮ ಇತರರಿಗೆ ಮಾದರಿಯಾಗಿದೆ ಎಂದರು.ಬಸವರಾಜ್ ಸನದಿ ಮಾತನಾಡಿ, ನನ್ನ ಮೂರು ವರ್ಷದ ಕರ್ತವ್ಯದ ಅವಧಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ವಕೀಲರ ಸಂಘದ ಎಲ್ಲಾ ಸದಸ್ಯರು ಹಾಗೂ ನನ್ನ ಸಹೋದ್ಯೋಗಿ ನ್ಯಾಯಾಧೀಶರು ನನ್ನನ್ನು ಕುಟುಂಬದ ಸದಸ್ಯನಂತೆ ಸತ್ಕರಿಸಿ ಅಗತ್ಯ ಸಹಕಾರ ಕೊಟ್ಟಿದ್ದಾರೆ. ಆಧ್ದರಿಂದ ನನ್ನ ವೃತ್ತಿ ಜೀವನದ ಅಂತ್ಯದವರೆಗೂ ಹೊಸಕೋಟೆಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಕೊಡುವೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್, ಹಿರಿಯ ವಕೀಲ ಹರೀಂದ್ರ, ಸುಬ್ರಮಣಿ, ರಮೇಶ್, ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್, ಪ್ರ.ಕಾರ್ಯದರ್ಶಿ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಮುನಿರಾಜು, ಖಜಾಂಚಿ ರವಿಕುಮಾರ್ ವಕೀಲರ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.ಫೋಟೋ: 16 ಹೆಚ್‌ಎಸ್‌ಕೆ 3
ಹೊಸಕೋಟೆ ಜೆಎಂಎಫ್ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ನ್ಯಾಯಾಧೀಶ ಬಸವರಾಜ ಸನದಿ ಅವರನ್ನು ವಕೀಲರು ಅಭಿನಂದಿಸಿ ಬೀಳ್ಕೊಟ್ಟರು.