ಸಾರಾಂಶ
ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಆಕ್ರೋಶ
ಕನ್ನಡಪ್ರಭ ವಾರ್ತೆ ಯಲಬುರ್ಗಾರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್, ಅಕ್ಕಿ ಬೇಳೆ, ತರಕಾರಿ, ಮುದ್ರಣ ಶುಲ್ಕ, ಬಾಂಡ್ ಬೆಲೆ ಸೇರಿದಂತೆ ಅಗತ್ಯ ವಸ್ತಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಗುರುವಾರ ತಾಲೂಕು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಾಜ್ಯ ಕಾಂಗ್ರೆಸ್ ಆಡಳಿತ ವೈಖರಿ ವಿರುದ್ಧ ಘೋಷಣೆ ಕೂಗಿದರು. ಚೆನ್ನಮ್ಮ ವೃತ್ತದಲ್ಲಿ ಸೇರಿ ಸಭೆ ನಡೆಸಿದರು. ಗ್ರೇಡ್-೨ ತಹಸೀಲ್ದಾರ ಮುರುಳೀಧರ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಸುಳ್ಳು ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲ ಅಗತ್ಯ ವಸ್ತಗಳ ಬೆಲೆ ಏರಿಸಿದ್ದು, ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ಬಡವರ ಹಿತ ಕಾಪಾಡಬೇಕಾದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ. ಬಡವರ ರಕ್ತ ಹೀರುವ ಈ ಪಿಕ್ ಪ್ಯಾಕೇಟ್ ಸರ್ಕಾರ ಅಧಿಕಾರದಲ್ಲಿ ಬಹಳ ದಿನ ಉಳಿಯುವುದಿಲ್ಲ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನಕುಮಾರ ಗುಳಗಣ್ಣನವರ್ ಹಾಗೂ ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿ, ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿದರೆ ಎಲ್ಲದಕ್ಕೂ ಸಹಕಾರ ನೀಡುತ್ತಿರುವ ಪೊಲೀಸ್ ಇಲಾಖೆಯವರು ಬಿಜೆಪಿಯ ಪ್ರತಿಭಟನೆ ತಡೆಯುವ ಕೆಲಸಕ್ಕೆ ಮುಂದಾರಾಗುತ್ತಿರುವುದನ್ನು ಗಮನಿಸಿದರೆ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಇದನ್ನು ಪೋಲಿಸ್ ಇಲಾಖೆಯವರು ಅರಿತುಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಗಾವರಾಳ, ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸಿ.ಎಚ್. ಪಾಟೀಲ, ಶರಣಪ್ಪ ರಾಂಪೂರ, ರತನ್ ದೇಸಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಯ್ಯನಗೌಡ ಕೆಂಚಮ್ಮನವರ್, ಪ್ರಭುಗೌಡ ಪಾಟೀಲ, ಶ್ರೀನಿವಾಸ ತಿಮ್ಮಾಪೂರ, ಸಿದ್ದು ಮಣ್ಣಿನವರ್, ಶಿವಣ್ಣ ವಾದಿ, ಬಸವರಾಜ ಗುಳಗುಳಿ, ಶಂಭು ಜೋಳದ, ಬಸನಗೌಡ ತೊಂಡಿಹಾಳ, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ವಸಂತ ಭಾವಿಮನಿ, ಬಸವಲಿಂಗಪ್ಪ ಕೊತ್ತಲ, ಅಶೋಕ ಅರಕೇರಿ, ಸಂತೋಷಿಯಾ ಜೋಶಿ, ಮಂಗಳೇಶ ಮಂಗಳೂರ, ಈರಪ್ಪ ಬಣಕಾರ, ಎಸ್.ಎನ್.ಶ್ಯಾಗೋಟಿ, ಅಯ್ಯಪ್ಪ ಗುಳೆ, ಗಾಳೆಪ್ಪ ಓಜನಹಳ್ಳಿ, ಶಿವಾನಂದ ಬಣಕಾರ, ಶಂಕರ ಭಾವಿಮನಿ, ಸಿದ್ರಾಮೇಶ ಬೇಲೇರಿ, ರುದ್ರಪ್ಪ ನಡುವಲಮನಿ, ಶಂಕ್ರಪ್ಪ ಭಾವಿಮನಿ, ಕಲ್ಲೇಶ ಕರಮುಡಿ, ಸುರೇಶ ಹೊಸಳ್ಳಿ, ಹನುಮಂತ ರಾಠೋಡ, ವಿಜಯ ಜಕ್ಕಲಿ ಇದ್ದರು.