ಜಿಲ್ಲೆಯಲ್ಲಿ ಶ್ರೀರಾಮಚಂದ್ರ ಭಕ್ತರಲ್ಲಿ ಹೆಚ್ಚಿದ ಸಂಭ್ರಮ

| Published : Jan 22 2024, 02:17 AM IST

ಜಿಲ್ಲೆಯಲ್ಲಿ ಶ್ರೀರಾಮಚಂದ್ರ ಭಕ್ತರಲ್ಲಿ ಹೆಚ್ಚಿದ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಸೋಮವಾರ ರಾಮಲಲ್ಲಾ ಪ್ರತಿಷ್ಠಾಪನೆ ಹಾಗೂ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ನಗರ, ಪಟ್ಟಣ ಸೇರಿದಂತೆ ಪ್ರತಿ ಹಳ್ಳಿಯೂ ಸಂಭ್ರಮ, ಸಡಗರ ಮನೆಮಾಡಿದೆ. ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಆಂಜನೇಯ ದೇವಸ್ಥಾನ ಸೇರಿದಂತೆ ನಗರದ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಸಿದ್ಧಪಡಿಸಲಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ರಾಮ ಭಜನೆ ಕಾರ್ಯಕ್ರಮವನ್ನು ಆಯೋಜಿಸಿವೆ. ನಗರದ ಗಲ್ಲಿಗಲ್ಲಿಗಳು ಶ್ರೀರಾಮನ ಫೆಕ್ಸ್‌ಗಳು ರಾರಾಜಿಸುತ್ತಿವೆ. ಶಿವಮೊಗ್ಗದ ಬಹುತೇಕ ಆರ್ಟ್ಸ್‌ಗಳು ಫುಲ್ ರಶ್ ಆಗಿವೆ.‌

(ಇಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ)- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಯೋಧ್ಯೆಯಲ್ಲಿ ಸೋಮವಾರ ರಾಮಲಲ್ಲಾ ಪ್ರತಿಷ್ಠಾಪನೆ ಹಾಗೂ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ನಗರ, ಪಟ್ಟಣ ಸೇರಿದಂತೆ ಪ್ರತಿ ಹಳ್ಳಿಯೂ ಸಂಭ್ರಮ, ಸಡಗರ ಮನೆಮಾಡಿದೆ.

ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಆಂಜನೇಯ ದೇವಸ್ಥಾನ ಸೇರಿದಂತೆ ನಗರದ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಸಿದ್ಧಪಡಿಸಲಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ರಾಮ ಭಜನೆ ಕಾರ್ಯಕ್ರಮವನ್ನು ಆಯೋಜಿಸಿವೆ.

ನಗರದ ಗಲ್ಲಿಗಲ್ಲಿಗಳು ಶ್ರೀರಾಮನ ಫೆಕ್ಸ್‌ಗಳು ರಾರಾಜಿಸುತ್ತಿವೆ. ಶಿವಮೊಗ್ಗದ ಬಹುತೇಕ ಆರ್ಟ್ಸ್‌ಗಳು ಫುಲ್ ರಶ್ ಆಗಿವೆ.‌

ರಿಪ್ಪನ್ ಪೇಟೆ, ಸಾಗರ, ಸೊರಬ ಮತ್ತು ಶಿವಮೊಗ್ಗದಿಂದ ನಗರದ ದುರ್ಗಿಗುಡಿಯ ಶ್ರೀನಿವಾಸ್ ಆರ್ಟ್ಸ್‌ಗೆ ಧಾವಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಫ್ಲೆಕ್ಸ್ ಪ್ರಿಂಟಿಂಗ್ ಮಿಷನ್‌ಗಳು ಫುಲ್‌ ಬ್ಯುಸಿಯಾಗಿವೆ. ಅದೂ ಅಧಿಕ ಹಣ ಕೊಟ್ಟು ಫ್ಲೆಕ್ಸ್ ಬಂಟಿಂಗ್ಸ್ ಮಾಡಿಸಲು ರಾಮಭಕ್ತರು, ಆಂಜನೇಯ ಭಕ್ತರು ತಾ ಮುಂದು ನಾ ಮುಂದು ಎಂಬಂತೆ ಅಣಿಯಾಗಿದ್ದಾರೆ.

ಸಾವಿರ ಲಡ್ಡು ವಿತರಣೆ:

ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯ ಮುಗಿಯುತ್ತಿದ್ದಂತೆ ಸಾರ್ವಜನಿಕರಿಗೆ ಹಂಚಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನೆರವಿನಿಂದ ಲಡ್ಡು ತಯಾರಿಸಲಾಗಿದೆ. ರಾಮ ಮಂದಿರ ಉದ್ಘಾಟನೆ ನಂತರ ಭಕ್ತರಿಗೆ ಲಡ್ಡು ವಿತರಿಸಲಾಗುತ್ತಿದೆ. ಶ್ರೀರಾಮ ಪ್ರತಿಷ್ಠ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಹಂಚಲು ವಿನೋಬನಗರದ ಶ್ರೀಧರ ಭಟ್ಟರ ಮನೆಯಲ್ಲಿ 5000 ಲಾಡುಗಳು ಸಿದ್ಧಪಡಿಸಲಾಗುತ್ತಿದೆ. ಲಡ್ಡು ವಿತರಣೆಯಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ‌ಮುರುಘರಾಜೇಂದ್ರ ಸ್ವಾಮೀಜಿ ಭಾಗಿಯಾಗಲಿದ್ದಾರೆ.

ಶ್ರೀರಾಮ ಸಂಕೀರ್ತನ ಮೆರವಣಿಗೆ:

ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ಹೊಸನಗರದಲ್ಲಿ ವೈಭವದ ಬ್ರಹತ್ ಶ್ರೀರಾಮ ಸಂಕೀರ್ತನ ಮೆರವಣಿಗೆ ನಡೆಯಿತು. ಮೆರವಣಿಗೆಯ ಶ್ರೀ ಗಂಗಾಧರ ದೇವಸ್ಥಾನದಿಂದ ಆರಂಭಗೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭಜನೆ ಜೈಕಾರ ರಾಮನ ಹಾಡುಗಳೂಂದಿಗೆ ಗಣಪತಿ ದೇವಸ್ಥಾನ ಶ್ರೀ ವಿರಾಂಜನೇಯ ದೇವಸ್ಥಾನದವರೆಗೆ ನಡೆಯಿತು.

ಶಾಸಕ ಆರಗ ಜಾನೇಂದ್ರ ಅವರು ಕೋರ್ಟ್ ಸರ್ಕಲ್‌ನಲ್ಲಿ ಮೆರವಣಿಗೆಯನ್ನು ಬರಮಾಡಿಕೊಂಡು ಜೊತೆಯಲ್ಲಿ ಸಾಗಿದರು. ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ರಾಮ ರಾಜ್ಯದ ಕನಸು ನನಸಾದವು ಎಂದು ಹೇಳಿದರು.

ಮೆರವಣಿಗೆಯಲ್ಲಿ ಮಕ್ಕಳು ಶ್ರೀರಾಮ, ಸೀತೆ, ಹನುಮಂತನ ವೇಷ ಧರಿಸಿದ್ದುದು ಜನತೆಯ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಪ್ರಮುಖರಾದ ಗಣಪತಿ ಪಂಡಿತ, ಕೆ.ಎಸ್. ಕನಕರಾಜ, ಶ್ರೀನಿವಾಸ ಕಾಮತ್ ಶ್ರೀಧರ ಉಡುಪ, ದೇವಾನಂದ, ಸದಾಶಿವ ಶ್ರೇಷ್ಠಿ, ಸುಧೀಂದ್ರ ಪಂಡಿತ, ಕೃಷ್ಣವೇಣಿ ಗಾಯತ್ರ ನಾಗರಾಜ, ಸುಧಾಕರ ಇನ್ನಿತರು ಇದ್ದರು.

- - - -21ಎಸ್‌ಎಂಜಿಕೆಪಿ10:

ರಾಮಮಂದಿರ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಗೆ ವಿತರಿಸಲು ಲಾಡು ಸಿದ್ಧಪಡಿಸುತ್ತಿರುವುದು.

- - - -21ಎಸ್‌ಎಂಜಿಕೆಪಿ09: ರಾಮಮಂದಿರ ಉದ್ಘಾಟನೆ ಹಿನ್ನೆಲೆ ಹೊಸನಗರದಲ್ಲಿ ಭಾನುವಾರ ಹೊಸನಗರದಲ್ಲಿ ವೈಭವದ ಬ್ರಹತ್ ಶ್ರೀರಾಮ ಸಂಕೀರ್ತನ ಮೆರವಣಿಗೆ ನಡೆಯಿತು.