ಸಾರಾಂಶ
ನಾಯಿಗಳು ಹಾವಳಿಗೆ ಬ್ರೇಕ್ ಹಾಕಲು ನ್ಯಾಯಾಲಯ ಆದೇಶ ಉಲ್ಲಂಘಿಸಲಾದಂತಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳುತ್ತಿದ್ದಾರೆ. ಆದರೆ ನ್ಯಾಯಾಲಯ ಆದೇಶ ಪಾಲಿಸಲು ಜೊತೆಗೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪರ್ಯಾಯ ದಾರಿ ಹುಡಕಲಿ ಎಂದು ನಾಗರಿಕರು ಪುರಸಭೆಗೆ ಸಲಹೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ, ಗುಂಡ್ಲುಪೇಟೆ ನಾಯಿಗಳ ಪೇಟೆಯಾಗಿ ಮಾರ್ಪಾಡಾಗುತ್ತಿದೆಯೇ ಎಂದೆನಿಸಿದೆ. ಹೌದು ಎನ್ನಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಸದ್ಯ ಪಟ್ಟಣದ ನಿವಾಸಿಗಳಿಗೆ ಬಂದೊದಗಿದೆ, ಪಟ್ಟಣದಲ್ಲಿ ಸಂಚರಿಸುತ್ತಿರುವ ಬೀದಿ ನಾಯಿಗಳನ್ನು ನೋಡಿದರೆ ಇದು ಗುಂಡ್ಲುಪೇಟೆಯೋ, ನಾಯಿಗಳ ಪೇಟೆಯೋ ಎಂದು ನಾಗರಿಕರು ವ್ಯಂಗ್ಯವಾಡಿದ್ದಾರೆ.ಚಾಮರಾಜನಗರ ರಸ್ತೆ ಬದಿ ನಾಯಿಗಳ ಹಿಂಡು ಅಡ್ಡಾಡುತ್ತಿವೆ, ಅಲ್ಲದೆ ಟಿ.ಬಿ.ಬಡಾವಣೆಯ ಕೆಲ ರಸ್ತೆಗಳಲ್ಲೂ ನಾಯಿಗಳು ಹಿಂಡು ಸಂಚರಿಸುತ್ತಿವೆ, ಸದ್ಯ ಯಾರನ್ನು ಕಚ್ಚಿಲ್ಲ ಎಂಬುದು ಗಮನಾರ್ಹ ವಿಷಯ.
ಇನ್ನೂ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲೂ ನಾಯಿಗಳು ಹಿಂಡು ಹಿಂಡಾಗಿ ವಾಕಿಂಗ್ ಮಾಡುತ್ತಿವೆ. ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ನೂರಾರು ಮಂದಿ ವಿಹಾರಿಗಳು ಇದ್ದಾಗಲೂ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ.ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೇ ಬೀದಿ ನಾಯಿಗಳು ಹಿಂಡು ಹಿಂಡಾಗಿ ತೆರಳುತ್ತಿರುವುದನ್ನು ಕಂಡರೆ ನಾಗರಿಕರು ಹಾಗೂ ಗ್ರಾಮಾಂತರ ಪ್ರದೇಶದ ಜನರು ಬೆಚ್ಚು ಬೀಳುವಂತಾಗಿದೆ.
ನಾಯಿಗಳು ಹಾವಳಿಗೆ ಬ್ರೇಕ್ ಹಾಕಲು ನ್ಯಾಯಾಲಯ ಆದೇಶ ಉಲ್ಲಂಘಿಸಲಾದಂತಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳುತ್ತಿದ್ದಾರೆ. ಆದರೆ ನ್ಯಾಯಾಲಯ ಆದೇಶ ಪಾಲಿಸಲು ಜೊತೆಗೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪರ್ಯಾಯ ದಾರಿ ಹುಡಕಲಿ ಎಂದು ನಾಗರಿಕರು ಪುರಸಭೆಗೆ ಸಲಹೆ ನೀಡಿದ್ದಾರೆ.ಪಟ್ಟಣದ ರಸ್ತೆಗಳಲ್ಲಿ ಅತ್ತ ಇತ್ತ ನಾಯಿಗಳೂ ಅಡ್ಡಾಡುವಾಗ ಬೈಕ್ ಸವಾರರು ಎಚ್ಚರ ತಪ್ಪಿದರೆ ಆಯತಪ್ಪಿ ಬೀಳೋದು ಗ್ಯಾರಂಟಿ, ಹಾಗಾಗಿ ಪುರಸಭೆ ಅವಧಿ ಮುಗಿವ ಹಂತದಲ್ಲಾದರೂ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.
-------‘ಬೀದಿ ನಾಯಿಗಳನ್ನು ಹಿಡಿದರೆ ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಿ ಕಂಟ್ರೋಲ್ ಮಾಡಬೇಕು. ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ವಹಿಸಲಾಗುವುದು.’
ಎಸ್.ಶರವಣ,ಪುರಸಭೆ ಮುಖ್ಯಾಧಿಕಾರಿ-----
‘ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಬೀದಿ ನಾಯಿಗಳ ಹಾವಳಿಗೆ ಪುರಸಭೆ ಕೋರ್ಟ್ ಆದೇಶ ಉಲ್ಲಂಘಿಸದೆ ಕಡಿವಾಣ ಹಾಕಲು ಮುಂದಾಗಬೇಕು. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ?’-ಅಶ್ವಿನ್,ಗುಂಡ್ಲುಪೇಟೆ ನಿವಾಸಿ
;Resize=(128,128))
;Resize=(128,128))