ಸಾರಾಂಶ
ಸೂಲಿಬೆಲೆ: ಪ್ರತಿ ವಿದ್ಯಾರ್ಥಿಯಲ್ಲೂ "ನನ್ನ ದೇಶ ನನ್ನ ಮಣ್ಣು " ದೇಶಾಭಿಮಾನ ಬೆಲೆಸಬೇಕು ಎಂದು ನಿವೃತ್ತ ಸೈನಿಕ ಶ್ರೀನಿವಾಸ್ ಹೇಳಿದರು.
ಸೂಲಿಬೆಲೆ: ಪ್ರತಿ ವಿದ್ಯಾರ್ಥಿಯಲ್ಲೂ "ನನ್ನ ದೇಶ ನನ್ನ ಮಣ್ಣು " ದೇಶಾಭಿಮಾನ ಬೆಲೆಸಬೇಕು ಎಂದು ನಿವೃತ್ತ ಸೈನಿಕ ಶ್ರೀನಿವಾಸ್ ಹೇಳಿದರು.
ಪಟ್ಟಣದ ನ್ಯೂ ಅಕ್ಸ್‌ಪರ್ಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 3ನೇ ಶಾಲಾ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯೆ ಹಣದಿಂದ ಕೊಂಡುಕೊಳ್ಳುವ ಸರಕು ಅಲ್ಲ, ಕಠಿಣ ಪರಿಶ್ರಮದಿಂದ ಸಾಧಿಸುವಂತದ್ದು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಅನುಸಾರವಾಗಿ ಅವರಿಗೆ ಶಿಕ್ಷಣ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು. ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಹಾಸ್ಯ ನಟ ಡಿಂಗ್ರಿ ನಾಗರಾಜ್ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆಯಾಗಬೇಕು. ಸಂಸ್ಕಾರ ಮನೆಯಿಂದಲೇ ಬರಬೇಕು ಎಂದರು.
ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ತೆಗೆಯಲು ಪೋಷಕರು - ಶಿಕ್ಷಕರ ಸಹಕಾರ ಮುಖ್ಯ ಎಂದರು.ಶಾಲಾಧ್ಯಕ್ಷರಾದ ಸುಮಲತಾ, ಕಾರ್ಯದರ್ಶಿ ನಾಗೇಶ್, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಮುನಿಯಪ್ಪ, ಮೇಲ್ವಿಚಾರಕ ವಸಂತಕುಮಾರ್, ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಸೇಠ್, ಸಮಾಜ ಸೇವಕ ಮಧುಕರ್, ಸಂಸ್ಥಾಪಕ ಅಧ್ಯಕ್ಷ ಮುನಿಶಾಮಪ್ಪ, ಉಪಾಧ್ಯಕ್ಷ ಶಿವಕುಮಾರ್, ನಿರ್ದೇಶಕ ಜಯರಾಮ್, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಶಿಕ್ಷಕರಾದ ಮನುಜ, ಲಕ್ಷ್ಮೀ, ನಾರಾಯಣಸ್ವಾಮಿ ಶಿಲ್ಪಾ,ಶಾಹಿಸ್ತಾಪಿರೋದಸ್, ಗಗನ, ಸಹನಾ, ಸೌಂದರ್ಯ, ವೈಷ್ಣವಿ, ಯಶಸ್ವಿನಿ, ಮಂಜುಳಾ, ಪತ್ರಕರ್ತ ಎಂ.ಆರ್.ಉಮೇಶ್, ಪ್ರಶಾಂತ್, ಅತ್ತಿಬೆಲೆ ಮಂಜುನಾಥ್ ಹಾಜರಿದ್ದರು.