ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ದೇಶದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಯವ, ನೈಸರ್ಗಿಕ ಪದ್ದತಿಯಲ್ಲಿ ಬೆಳೆದ ವಿವಿಧ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆದರೆ, ಈ ಪ್ರದರ್ಶನದಲ್ಲಿ ಇಂಡಿ ಲಿಂಬೆಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಹೇಳಿದರು.ದೆಹಲಿಯಲ್ಲಿ 3 ದಿನಗಳ ಕಾಲ ನಡೆಯುವ ಬಯೋಟೆಕ್ ಇಂಡಿಯಾ 2024ರಲ್ಲಿ ಒಂದೇ ಸೂರಿನಡಿಯಲ್ಲಿ ಸಾವಯವ, ನೈಸರ್ಗಿಕ ಮತ್ತು ಮಿಲ್ಲೆಟ್ಸ್ ಉತ್ಪನಗಳ ಪ್ರದರ್ಶನ ಮೇಳದಲ್ಲಿ ಇಂಡಿ ಲಿಂಬೆ ಪ್ರದರ್ಶನ ಕುರಿತು ವಿವರಿಸಿದ ಅವರು, ಸಾವಯವ ಉದ್ಯಮಕ್ಕಾಗಿ ಭಾರತವು ಪ್ರಮುಖ ವ್ಯಾಪಾರ ಮೇಳವು (ನ್ಯಾಚುರಲ್ ಎಕ್ಸಪೊ ಇಂಡಿಯಾ) ದೆಹಲಿ ಸ್ಥಳ ಹೊಂದಿದೆ. 200ಕ್ಕೂ ಹೆಚ್ಚು ಬ್ರ್ಯಾಂಡ್‌ಗಳಿಂದ ನೆಟ್‌ವರ್ಕ್ ಮತ್ತು ಭೇಟಿಯನ್ನು ಯೋಜಿಸಿ ನೋಂದಾಯಿಸುವುದು, ಜಾಗತಿಕ ತಜ್ಞರೊಂದಿಗೆ ಹೊಸ ಹೊಸ ಅವಿಷ್ಕಾರಗಳು ಕಲಿಯುವುದು ಮತ್ತು ಚರ್ಚಿಸುವುದು, ಉದ್ಯಮದ ಪ್ರವೃತ್ತಿಗಳು ತೆರೆದುಕೊಳ್ಳುವುದನ್ನು ವೀಕ್ಷಿಸುವುದು, ನಗರೀಕರಣ, ಆರೋಗ್ಯಕರ ಜೀವನ ಶೈಲಿ ಮೇಲೆ ಗಮನ ಹೆಚ್ಚಿಸುವುದು, ಉದ್ಯಮ, ಮಧ್ಯಸ್ಥಗಾರರನ್ನು ಭೇಟಿ ಮಾಡಲು ಬಯೋಪ್ಯಾಚ್ ಇಂಡಿಯಾ ಪರಿಪೂರ್ಣ ವೇದಿಕೆಯಾಗಿರುವುದು ಈ ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು.ದೆಹಲಿಯಲ್ಲಿ ರೈತ ಭೀಮರಾಯ ಬೆಳೆದ ಲಿಂಬೆ ಪ್ರದರ್ಶನ:
ದೆಹಲಿಯಲ್ಲಿ 3 ದಿನಗಳ ಕಾಲ ನಡೆಯುವ ಬಯೋಟೆಕ್ ಇಂಡಿಯಾ 2024ರಲ್ಲಿ ಒಂದೇ ಸೂರಿನಡಿಯಲ್ಲಿ ಸಾವಯವ, ನೈಸರ್ಗಿಕ ಮತ್ತು ಮಿಲ್ಲೆಟ್ಸ್ ಉತ್ಪನಗಳ ಪ್ರದರ್ಶನ ಮೇಳದಲ್ಲಿ ಇಂಡಿ ಲಿಂಬೆ ಪ್ರದರ್ಶನಗೊಂಡಿದೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲರು ದೆಹಲಿಯಲ್ಲಿ ನಡೆಯುವ ಈ ಮೇಳದಲ್ಲಿ ಇಂಡಿ ತಾಲೂಕಿನ ತಡವಲಗಾ ಗ್ರಾಮದ ರೈತ ಭೀಮರಾಯ ಹೀರಾಪೂರ ಅವರು ಜಮೀನದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿರುವ ಲಿಂಬೆ ಹಣ್ಣನ್ನು ಪ್ರದರ್ಶನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಭೌಗೋಳಿಕ ಮಾನ್ಯತೆ ಹೊಂದಿರುವ ಇಂಡಿ ಲಿಂಬೆ ರಾಷ್ಟ್ರಮಟ್ಟದ ಸಾವಯವ ಹಾಗೂ ನೈಸರ್ಗಿಕವಾಗಿ ಬೆಳೆದ ಹಣ್ಣುಗಳ ಪ್ರದರ್ಶನದಲ್ಲಿ ಬೇಡಿಕೆಯನ್ನು ತನ್ನದಾಗಿರಿಸಿಕೊಂಡಿದೆ. ಇಂಡಿ ಲಿಂಬೆಗೆ ಭೌಗೋಳಿಕ ಮಾನ್ಯತೆ ದೊರಕಿಸಿಕೊಡಬೇಕು, ರಾಜ್ಯದಲ್ಲಿಯೇ ಅತೀ ಹೆಚ್ಚು ಲಿಂಬೆ ಬೆಳೆಯುವ ಇಂಡಿ ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಸದುದ್ದೇಶದಿಂದ ಶಾಸಕ ಯಶವಂತರಾಯಗೌಡ ಪಾಟೀಲರು ಗಡಿಭಾಗದಲ್ಲಿರುವ ಇಂಡಿ ತಾಲೂಕು ಕೇಂದ್ರದಲ್ಲಿಯೇ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮನವನ್ನು ಮಂಜೂರು ಮಾಡಿಸಿ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.ರೈತರು, ಎಫ್‌ಪಿಒಗಳು, ಉತ್ಪಾದಕರು, ತಯಾರಕರು, ಖರೀದಿದಾರರು, ಆಮದುದಾರರು, ರಫ್ತುದಾರರನ್ನು ಒಗ್ಗೂಡಿಸಿ ವಿನಿಮಯ ಮಾಡಿಕೊಳ್ಳುವವರು ಈ ಮೇಳದಲ್ಲಿ ಭಾಗಿಯಾಗಿದ್ದಾರೆ.
-ಎಚ್.ಎಸ್.ಪಾಟೀಲ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು.