ಸಾರಾಂಶ
ಬೀದರ್ ನಗರದ ಕುಂಬಾರವಾಡದಲ್ಲಿರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಕುಮಾರಿ ಅಧ್ಯಾತಿಕ ಕೇಂದ್ರದ ಪಾರ್ವತಿ ಬಹೇನ ಅವರು ರಕ್ಷಾ ಬಂಧನ ಕಾರ್ಯಕ್ರಮ ಅಯೋಜಿಸಿದರು.
ಕನ್ನಡಪ್ರಭ ವಾರ್ತೆ ಬೀದರ್:
ಅಣ್ಣ-ತಂಗಿಯ ಸಹೋದರತ್ವ ಬಾಂಧವ್ಯ ಬೆಸೆಯುವ ಪ್ರೀತಿಯ ಹಬ್ಬವೇ ರಕ್ಷಾ ಬಂಧನ ಎಂದು ನವೀನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕಬಸೆ ನುಡಿದರು.ಶನಿವಾರ ನಗರದ ಕುಂಬಾರವಾಡದಲ್ಲಿರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಕುಮಾರಿ ಅಧ್ಯತ್ಮಿಕ ಕೇಂದ್ರದ ಪಾರ್ವತಿ ಬಹೇನ ಅವರು ಅಯೋಜಿಸಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಬಹೇನ ಅವರಿಂದ ರಾಕಿ ಕಟ್ಟಿಸಿಕೊಂಡು ಮಾತನಾಡಿ, ಬ್ರಹ್ಮಕುಮಾರಿಯ ಅಕ್ಕನವರು ಅಧ್ಯಾತ್ಮಿಕ ಲೋಕದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದವರು. ಇಂತಹವರಿಂದ ರಾಕಿ ಕಟ್ಟಿಸಿಕೊಳ್ಳುವುದು ನನ್ನ ಪುಣ್ಯ ಎಂದರು.
ಪವಿತ್ರ ಸಂಬಂಧ ಬೆಸಯುವ ರಕ್ಷಾ ಬಂಧನ ಹಬ್ಬ ನಾವೆಲ್ಲರೂ ಆಚರಿಸುವ ಮೂಲಕ ಸಂಬಂಧದ ಬೆಸುಗೆ ಇನ್ನಷು ಮತ್ತಷ್ಟು ಗಟ್ಟಿಗೊಳಿಸಿಬೇಕಾಗಿದೆ. ಹಬ್ಬದ ಬಾಂಧವ್ಯ ಪ್ರೀತಿ, ಒಂದು ದಿನಕ್ಕೆ ಸೀಮಿತವಾಗಿರಿಸದೆ ಸಂಬಂಧದ ಕೊಂಡಿ ಕಳಚದಂತೆ ಸದಾ ಜಾಗೃತವಹಿಸಬೇಕು ಎಂದರು.ಪಾರ್ವತಿ ಬಹೇನ ಮಾತನಾಡಿ, ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಾದರೆ ಪ್ರತಿಯೊಬ್ಬರು ದಿನದ ಒಂದಿಷ್ಟು ಸಮಯವಾದರೂ ಅಧ್ಯಾತ್ಮಿಕದಲ್ಲಿ ತೊಡಗಬೇಕು. ಸತ್ಯದರ್ಶನ ಮಾಡಬೇಕು. ಸಾತ್ವಿಕವಾದ ಆಹಾರ ಕ್ರಮ, ಸತ್ಯ ಶುದ್ಧ ಕಾಯಕದಿಂದ ಪ್ರಾಮಾಣಿಕವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಶಾಂತಿ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದರು.
ಈ ವೇಳೆ ಗೀತಾ ಬಹೇನ, ನವೀನ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಶೀಲಾ ಚಿಕಬಸೆ, ಪ್ರಾಂಶುಪಾಲರಾದ ರಾಜಪ್ಪಾ, ನಿರ್ವಾಹಕರಾದ ಸುನೀತಾ ರಾಮಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.