Indefinite sit-in in front of MLA's house on 27th

ಕಲಬುರಗಿ: ತಳವಾರ ಸಮಾಜದ ಸದಸ್ಯರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣಪತ್ರಗಳನ್ನು ತಕ್ಷಣ ನೀಡಬೇಕು ಹಾಗೂ ಅಫಜಲಪುರ ತಾಲೂಕಿನ ಗ್ರೇಡ್-೨ ತಹಸೀಲ್ದಾರರ ವಿರುದ್ಧ ಸೂಕ್ತ ತನಿಖೆ ನಡೆಸಿ ಅಮಾನತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಜುಲೈ ೨೭ರಂದು (ಸೋಮವಾರ) ಬೆಳಿಗ್ಗೆ ೧೦.೩೦ ಅಫಜಲಪುರ ತಹಸೀಲ್ದಾರ್‌ ಕಚೇರಿಯಿಂದ ನಗರದ ಶಾಸಕ ಎಂ.ವೈ. ಪಾಟೀಲ್ ಅವರ ನಿವಾಸದವರೆಗೆ ದೀರ್ಘದಂಡ ನಮಸ್ಕಾರ ಹೋರಾಟ ಹಮ್ಮಿಕೊಳ್ಳಲಾಗಿದೆ.

ಹೋರಾಟದ ಬಳಿಕ ತಮ್ಮ ಬೇಡಿಕೆಗಳಿಗೆ ನ್ಯಾಯ ದೊರೆಯುವವರೆಗೆ ಶಾಸಕರ ನಿವಾಸದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಸಂತೋಷ ತಳವಾರ ತಿಳಿಸಿದ್ದಾರೆ.