ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೇ ಮಾ.11 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ, ತಾಲೂಕಿನ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಯರು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೇ ಮಾ.11 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ, ತಾಲೂಕಿನ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಯರು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಮನವಿ ಸ್ವೀಕರಿಸಿ ಮಾತನಾಡಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಬೇಡಿಕೆಗಳು ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ ಅವರೊಂದಿಗೆ ಮಾತನಾಡಿದ್ದೇನೆ. ಇನ್ನೊಮ್ಮೆ ನಿಮ್ಮ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಬಹಳ ಪ್ರಾಮುಖ್ಯ ಹೀಗಾಗಿ ಮಾತುಕತೆಯ ಮೂಲಕ ನೀವು ಏನು ಬೇಡಿಕೆಗಳನ್ನು ಇಟ್ಟಿದ್ದೀರಿ ಅವುಗಳನ್ನು ಪರಿಶೀಲನೆ ಮಾಡಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.ಮಾ.11ರಿಂದ ಅನಿರ್ದಿಷ್ಟಾವಧಿ ಹಮ್ಮಿಕೊಳ್ಳಲಾಗಿದ್ದು, ತಾವುಗಳು ಸರ್ಕಾರದ ಗಮನಕ್ಕೆ ತಂದು ನಮ್ಮನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟನೆ ನೇತೃತ್ವದಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಹಾಗೂ ಆರೋಗ್ಯ ಇಲಾಖೆಯ ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಅವರಿಗೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ವೈದ್ಯಧಿಕಾರಿಗಳಾದ ಡಾ.ರಂಗನಾಥ ವೈದ್ಯ ಡಾ.ಬಿ.ಎಸ್.ಚೌದ್ರಿ, ಡಾ.ಅಬ್ಬಲಮಜೀದ್ ಬಾಗವಾನ ಡಾ. ರಿಪತ್ತಕೌಸರ್ ಇನಾಮದಾರ, ಡಾ.ಬಸವರಾಜ್ ಅಲಗೂರ, ಡಾ.ಸಂಗಮೇಶ ದಶವಂತ, ಡಾ.ತಹಸೀನ್ ಶಿವಣಗಿ, ಡಾ.ಸಂದೀಪ ಬಿರಾದಾರ, ಆಲ್ ಕೆಡರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದಗೌಡ ಎನ್.ಬಿರಾದಾರ, ತಾಲೂಕಿನ ಆರೋಗ್ಯ ಇಲಾಖೆಯ ನೌಕರರಾದ ಯಲ್ಲಪ್ಪ ಚಲವಾದಿ, ಎ.ಎಸ್.ತೆರದಾಳ, ಐ.ಸಿ.ಮಾನಕರ, ಎ.ಜಿ.ಆಳಗುಂಡಿ, ರೇಖಾ ಜಯಗೊಂಡರ, ಎಂ.ಎಸ್.ಗೌಡರ, ವ್ಹಿ ವಿ.ಪವಾಡಶೆಟ್ಟಿ, ವಿಠ್ಠಲ ಕಿಲಾರಟ್ಟಿ, ಸಂತೋಷ ಅಂಗಡಗೇರಿ, ಎಂ.ಬಿಬಾಗವಾನ, ಎಸ್.ಎಸ್.ಮಾಗಿ, ಎ.ಐ.ಕೇಸಾಪುರ, ಮಲ್ಲು ತುರುಡಗಿ, ಕಾಶೀನಾಥ ಯಲಗೂರೇಶ, ತೋನಸಶ್ಯಾಳ, ಸಂತೋಷ ನಾಗರಾಬೆಟ್ಟ, ಚೇತನ್, ಸಿ.ಜಿ.ಬಿದರಕುಂದಿ, ಐ.ಬಿ.ಹೂಗಾರ, ಶಶಿಧರ ಒತಗೇರಿ, ನಾಗರಾಜ ಪಾಟೀಲ, ವಿಶ್ವನಾಥ ಬಿರಾದಾರ, ಹಣಮಗೌಡ ಬಿರಾದಾರ, ಮಂಜುಳಾ ಪಾಟೀಲ, ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಹಾಗೂ ತಾಲೂಕಿನ ಎಲ್ಲ ವೃಂದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕಿನ ಸಮಸ್ತ ನೌಕರರ ಬಾಂಧವರು ಹಾಜರಿದ್ದರು.