ಪಟ್ಟಣ ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಪೌರ ಸೇವಾ ವೃಂದದಲ್ಲಿ ವಿಲೀನಗೊಳಿಸಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಮುಂದೆ ಶುಕ್ರವಾರದಿಂದ ಅನಿರ್ದಿಷ್ಟ ಮುಷ್ಕರ ಕೈಗೊಂಡರು.

ರಟ್ಟೀಹಳ್ಳಿ:ಪಟ್ಟಣ ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಪೌರ ಸೇವಾ ವೃಂದದಲ್ಲಿ ವಿಲೀನಗೊಳಿಸಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಮುಂದೆ ಶುಕ್ರವಾರದಿಂದ ಅನಿರ್ದಿಷ್ಟ ಮುಷ್ಕರ ಕೈಗೊಂಡರು.

ಈ ವೇಳೆ ಮಾತನಾಡಿದ ಪಟ್ಟಣ ಪಂಚಾಯತ್ ನೌಕರ ರಾಜಕುಮಾರ ಹೇಂದ್ರೆ, ಇತ್ತೀಚೆಗೆ ಕೇಂದ್ರ ಕಚೇರಿ ಚಿತ್ರದುರ್ಗದಲ್ಲಿ ನಡೆದ ಸಭೆಯ ತೀರ್ಮಾನದಂತೆ ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಸೇರಿದಂತೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಪಟ್ಟಣದ ವಿವಿಧ ಸಂಘಟನೆಗಳಿಂದ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮುಂಜಾನೆಯಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಪಟ್ಟಣದ ಮೂಲಭೂತ ಸೌಲಭ್ಯಗಳಾದ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳ ಚರಂಡಿ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದ್ದು, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಸರಕಾರದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಪಟ್ಟಣ ಪಂಚಾಯತ್ ಪೌರ ನೌಕರರನ್ನು ಸರಕಾರಿ ನೌಕರರ ಜೊತೆ ವಿಲಿನಗೋಳಿಸಬೇಕು, ಆರೋಗ್ಯ ಸಂಜೀವಿನಿ ಸೌಲಭ್ಯ ನೀಡಬೇಕು, ಜೆಪಿಎಫ್, ಕೆಜಿಐಡಿ ಸೇರಿದಂತೆ ನಮ್ಮ ಪ್ರಮುಖ 20 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಪೌರ ನೌಕರ ಸಂಘದ ರಾಜ್ಯಾಧ್ಯಕ್ಷರ ಅಪ್ಪಣೆ ಮೇರೆಗೆ ಪಟ್ಟಣ ಪಂಚಾಯತ್ ಸರಕಾರಿ ನೌಕರರು ಹೋರಾಟವನ್ನು ಮೊಟಕುಗೊಳಿಸಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರು ಅನಿರ್ದಿಷ್ಟಾವಧಿ ಹೋರಾಟವನ್ನು ಮುಂದುವರೆಸಿದ್ದು ಅವರಿಗೆ ನೈತಿಕ ಬೆಂಬಲ ನೀಡಲಾಗುವುದು ಎಂದರು. ಮಾಜಿ ಸಚಿವ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಮಾಜಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಭೇಟಿ ನೀಡಿ, ಅವರ ಮನವಿ ಸ್ವೀಕರಿಸಿ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕೆಲ ಪೌರ ನೌಕರರನ್ನು ಸರಕಾರಿ ಸೇವೆಯಲ್ಲಿ ವಿಲೀನಗೊಳಿಸಲಾಗಿದ್ದು, ಉಳಿದ ನೌಕರರು ಕಾಯಂಗೊಳಿಸಲು ಆದೇಶ ನೀಡಿದ್ದು ಆದರೂ ಕಾಯಂ ಆಗಿಲ್ಲ, ಪ್ರತಿ ದಿನ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವ ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು ತಾವು ನೀಡಿದ ಮನವಿಯನ್ನು ಸಂಬಂಧ ಪಟ್ಟ ಸಚಿವ ರಹಿಂಕಾನ್ ಅವರಿಗೂ ಪತ್ರ ಬರೆಯಲಾಗಿದ್ದು ಹಾಗೂ ವಿರೋಧ ಪಕ್ಷದ ನಾಯಕರಿಗೆ ಮನವಿಯನ್ನು ಮುಟ್ಟಿಸಿದ್ದು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವು ಇದ್ದು ನಿಮ್ಮ ಜೋತೆ ನಾವಿದ್ದೇವೆ ಎಂದು ಭರಸವೆ ನೀಡಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸದಸ್ಯರಾದ ಬಸವರಾಜ ಆಡಿನವರ, ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಮಾಲತೇಶಗೌಡ ಗಂಗೋಳ, ಪ್ರಶಾಂತ ದ್ಯಾವಕ್ಕಳವರ, ಹನಮಂತಪ್ಪ ಗಾಜೇರ, ಸುನೀಲ ಕಟ್ಟಿಮನಿ, ಪೌರ ನೌಕರ ಸಂಘದ ಅಧ್ಯಕ್ಷ ಸುಭಾಷ ಹರಿಜನ, ಪಟ್ಟಣ ಪಂಚಾಯತ್ ಸಿಇಓ ಗದಿಗೇಶ ಶಿರ್ಶಿ, ಮಂಜು ಚಲವಾದಿ, ಸಂತೋಷ ಬಿಳಚಿ, ವೀರೇಶ ದ್ಯಾವಕ್ಕಳವರ, ಬಸವರಾಜ ಕವಲೆತ್ತು, ಅನುರಾಧಾ ಸುಣಗಾರ, ನಿಖಿಲ್ ಅರ್ಕಾಚಾರಿ, ಮಂಜು ಬಿಳಚಿ, ಅಶೋಕ ಬೆಳಕೇರಿ, ರವಿ ಹರಿಜನ, ಎಂ.ಎನ್. ಹರಿಜನ, ನಾಗರಾಜ ಹರಿಜನ, ಚಂದ್ರಪ್ಪ ಎಳೆಹೋಳಿ, ಚಂದ್ರಪ್ಪ ಹರಿಜನ ಮುಂತಾದವರು ಇದ್ದರು.