ಸಾರಾಂಶ
- ಸುಸಜ್ಜಿತ ಕಚೇರಿ, ಉತ್ತಮ ಪೀಠೋಪಕರಣ, ಮೊಬೈಲ್‌ಗೆ ಆಗ್ರಹ - - - ಚನ್ನಗಿರಿ: ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಮಸ್ಯೆಗಳಿಗೆ ಪರಿಹಾರ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಕ್ಷರ ಮಂಗಳವಾರದ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘಟನೆ ಆದೇಶದಂತೆ 2ನೇ ಹಂತದ ಮುಷ್ಕರಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ,
ಜಿಲ್ಲಾ ಸಂಘದ ಉಪಾಧ್ಯಕ್ಷ ಶಿವಕುಮಾರ್ ಮಾಳಿಗೆರ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಬೇಕಾಗಿದೆ. ಉತ್ತಮ ಗುಣಮಟ್ಟದ ಪೀಠೋಪಕರಣಗಳು ಹಾಗೂ ಗುಣಮಟ್ಟದ ಮೊಬೈಲ್ ಸೌಲಭ್ಯ ಕೊಡಬೇಕು. ಗೂಗಲ್ ಕ್ರೋಮ್ ಬುಕ್ ಹೊಂದಿರುವ ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್‌ಗಳನ್ನು ನೀಡಬೇಕು ಎಂದರು.ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೆಕು. 4 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಕೆ.ಸಿ.ಎಸ್.ಆರ್. ನಿಯಮ ಹಿಂಪಡೆದಿರುವುದರಿಂದ ನೌಕರರ ಜೀವನದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿವೆ. ಕಂದಾಯ ಇಲಾಖೆಯಿಂದ ಹಿಡಿದು ಎಲ್ಲ ಇಲಾಖೆಗಳಲ್ಲಿ ಮಾಡಿರುವಂತೆ ವರ್ಗಾವಣೆ ಮಾರ್ಗಸೂಚಿ ರಚಿಸುವಂತೆ ತಿಳಿಸಿದರು.
ಬೇಡಿಕೆಗಳು ಈಡೇರಿಸದಿದ್ದರೆ ಎಲ್ಲ ಬಗೆಯ ಮೊಬೈಲ್ ಆ್ಯಪ್, ವೆಬ್ ಅಪ್ಲಿಕೇಷನ್‌ಗಳನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸಿ, ಮುಷ್ಕರ ಮುಂದುವರಿಸುವುದಾಗಿ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷೆ ರೇಷ್ಮಾ, ಉಪಾಧ್ಯಕ್ಷ ಕುಮಾರ ನಾಯ್ಕ್, ಗೌರವ ಅಧ್ಯಕ್ಷ ರಾಜನಾಯ್ಕ್, ಚಂದ್ರಪ್ಪ, ತಿಲಕ್ ಕುಮಾರ್, ಗ್ರಾಮ ಆಡಳಿತ ನೌಕರರು ಹಾಜರಿದ್ದರು.
- - - -11ಕೆಸಿಎನ್‌ಜಿ1:ಗ್ರಾಮಾಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಚನ್ನಗಿರಿ ತಾಲೂಕು ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನವೂ ಮುಂದುವರಿಯಿತು.