ದೇಶದ ಪ್ರತಿಯೊಬ್ಬ ನಾಗರಿಕನು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜಬೃಂಣೆಯಿಂದ ಆಚರಣೆ ಮಾಡಬೇಕು, ಇದು ನಮ್ಮೆಲ್ಲರ ಹೆಮ್ಮಯ ಹಬ್ಬವಾಗಿದೆ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಕೊಡುಗೆಯಾಗಿದೆ ಎಂದು ತಹಸೀಲ್ದಾರ್‌ ಅಂಜುಮ ತಬಸುಮ್‌ ಹೇಳಿದರು.

-ತಾಲೂಕು ಆಡಳಿತದಿಂದ ಸ್ವಾತಂತ್ರ್ಯೋತ್ಸವ । ಧ್ವಜಾರೋಹಣ

-----

ಕನ್ನಡಪ್ರಭ ವಾರ್ತೆ ಜೇವರ್ಗಿ

ದೇಶದ ಪ್ರತಿಯೊಬ್ಬ ನಾಗರಿಕನು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜಬೃಂಣೆಯಿಂದ ಆಚರಣೆ ಮಾಡಬೇಕು, ಇದು ನಮ್ಮೆಲ್ಲರ ಹೆಮ್ಮಯ ಹಬ್ಬವಾಗಿದೆ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಕೊಡುಗೆಯಾಗಿದೆ ಎಂದು ತಹಸೀಲ್ದಾರ್‌ ಅಂಜುಮ ತಬಸುಮ್‌ ಹೇಳಿದರು.

ಶನಿವಾರ ಪಟ್ಟಣದ ಮಿನಿ ವಿಧಾನಸೌದದಲ್ಲಿ ತಾಲೂಕು ಆಡಳಿತ ವತಿಯಿಂದ ೮೦ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ದೇಶದ 80ನೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದೇವೆ ಎಂದರೆ ತ್ಯಾಗ ಬಲಿದಾನ ಮತ್ತು ಸಮರ್ಪಣೆಯ ಸಂಕೇತವಾಗಿದ್ದು, ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಒ ವೀರಣ್ಣ ಕೌಲಗಿ, ಸಿಪಿಐ ಬಾಪುಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪ್ರತಾಪ ಕಟ್ಟಿ, ನೌಕರ ಸಂಘದ ಅಧ್ಯಕ್ಷ ದಾನಪ್ಪಗೌಡ ಹಳಿಮನಿ, ಸಮಾಜ ಕಲ್ಯಾಣಾಧಿಕಾರಿ ಸತೀಶ ಸಂಗನ್, ತಾಲೂಕ ವೈದ್ಯಾಧಿಕಾರಿ ಡಾ.ಉಮೇಶ ಶರ್ಮಾ, ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜಿವಣಗಿ, ಎಪಿಎಂಸಿ ಕಾರ್ಯದರ್ಶಿ ಸುಮಂಗಲಾ ಹೂಗಾರ, ಪಶು ವೈದ್ಯಾಧಿಕಾರಿ ಡಾ. ಶೋಭಾ ಸಜ್ಜನ, ಪಿಎಸ್‌ಐ ಗಜಾನನ ಬಿರೆದಾರ, ಬಸವರಾಜ ತೇಲಕರ್, ಮುಖಂಡರಾದ ಹಳ್ಳೆಪ್ಪಚಾರ್ಯ ಜೋಶಿ, ರಾಜಶೇಖರ ಸೀರಿ, ವಿರೇಶ ಕಂದಗಲ, ಬೆಣ್ಣೆಪ್ಪ ಕೊಂಬಿನ್, ಮೈಹಿಮೂದ್ ನೂರಿ, ಸಂಗಮೇಶ ಕೊಂಬಿನ್, ರವಿಚಂದ್ರ ಗುತ್ತೇದಾರ, ನಿಂಗಪ್ಪ ಪೂಜಾರಿ, ನಾಗರಾಜ ಹಾಲಗೂರ, ಬಸವರಾಜ ಲಾಡಿ ಸೇರಿದಂತೆ ಇತರರು ಇದ್ದರು. ಗುರುಶಾಂತಪ್ಪ ಚಿಂಚೋಳಿ ನಿರುಪಿಸಿದರು.