ಸಾರಾಂಶ
ನೇತ್ರಜ್ಯೋತಿ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಿರಿಯ ವಕೀಲ ಶಾಂತಾರಾಮ ಶೆಟ್ಟಿ ಮತ್ತು ಉಮೇಶ್ ಶೆಟ್ಟಿ ಕಳತ್ತೂರು ಮತ್ತಿತರರು ಪಾಲ್ಗೊಂಡರು.
ಉಡುಪಿ: ನಗರದ ನೇತ್ರಜ್ಯೋತಿ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಶಾಂತಾರಾಮ ಶೆಟ್ಟಿ ಮತ್ತು ಉಮೇಶ್ ಶೆಟ್ಟಿ ಕಲತ್ತೂರು ಉಪಸ್ಥಿತರಿದ್ದರು.
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೌರಿ ಪ್ರಭು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಅತಿಥಿಗಳು ರಾಷ್ಟ್ರಧ್ವಜವನ್ನು ಅರಳಿಸಿ ಗೌರವ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳು ಕಾಲೇಜಿನ ಪ್ರಗತಿ, ಶಿಕ್ಷಣದ ಮಹತ್ವ ಹಾಗೂ ಸ್ವಾತಂತ್ರ್ಯದ ಅರ್ಥಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನು ಆಡಿದರು. ಸ್ವಾತಂತ್ರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಣೆ ಮಾಡಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿಯ ನೃತ್ಯ ಮತ್ತು ಗಾನ ಕಾರ್ಯಕ್ರಮಗಳು ಮನೋರಂಜನೆ ಜೊತೆಗೆ ದೇಶಭಕ್ತಿ ಸಂದೇಶವನ್ನು ಸಾರಿದವು.ಕಾರ್ಯಕ್ರಮವನ್ನು ದ್ವಿತೀಯ ಬಿ.ಎಸ್.ಸಿ. ಆಪ್ಟೊಮೆಟ್ರಿ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ ನಿರೂಪಿಸಿದರು. ಪ್ರಥಮ ಬಿ.ಎಸ್.ಸಿ. ಓಟಿ/ಎಟಿ ವಿಭಾಗದ ವಿದ್ಯಾರ್ಥಿನಿ ಶ್ರೀಮಾ ಶೆಟ್ಟಿ ಸ್ವಾಗತಿಸಿದರು. ದ್ವಿತೀಯ ಬಿ.ಎಸ್.ಸಿ. ಎಂಎಲ್‌ಟಿ ವಿಭಾಗದ ಫಾತಿಮಾ ಇಶ್ರತ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಹಂಚಿಕೊಂಡರು.