ಕುಂದಾಪುರ ಮಾರ್ಕೆಟ್ ಬಾಯ್ಸ್‌ನಿಂದ ಸ್ವಾತಂತ್ರ್ಯ ದಿನಾಚರಣೆ: ರಕ್ತದಾನ ಶಿಬಿರ

| Published : Aug 16 2024, 12:58 AM IST

ಕುಂದಾಪುರ ಮಾರ್ಕೆಟ್ ಬಾಯ್ಸ್‌ನಿಂದ ಸ್ವಾತಂತ್ರ್ಯ ದಿನಾಚರಣೆ: ರಕ್ತದಾನ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಡಿದ ವೀರ ಯೋಧರನ್ನು ಸ್ಮರಿಸಲಾಯಿತು. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡುತ್ತಿರುವ ಮಾರ್ಕೆಟ್ ಬಾಯ್ಸ್‌ನ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮಾರ್ಕೆಟ್ ಬಾಯ್ಸ್ ಕುಂದಾಪುರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ತದಾನ ಶಿಬಿರನ್ನು ಮೀನು ಮಾರ್ಕೆಟ್ ರಸ್ತೆ ಕುಂದಾಪುರದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಆರ್. ರಾಯರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಉಪಾಧ್ಯಾಯಿನಿ ಶಶಿಕಲಾ ಬೀಜೂರ್ ಅವರು ಧ್ವಜಾರೋಣ ನೆರವೇರಿಸಿ, ಶುಭ ಹಾರೈಸಿದರು ಮತ್ತು ಸ್ವತಂತ್ರ ದಿನಾಚರಣೆಯ ಮಹತ್ವ ಮತ್ತು ದೇಶದ ನಾಗರಿಕರ ಜವಾಬ್ದಾರಿಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಡಿದ ವೀರ ಯೋಧರನ್ನು ಸ್ಮರಿಸಲಾಯಿತು. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡುತ್ತಿರುವ ಮಾರ್ಕೆಟ್ ಬಾಯ್ಸ್‌ನ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು. ಗೌರವ ಅತಿಥಿಗಳಾಗಿ ಚಿಲ್ಡ್ರನ್ಸ್ ಫ್ಯಾಷನ್ ಕುಂದಾಪುರದ ಮಾಲೀಕರಾದ ಆನಂದ್ ರಾವ್ ಕೆರಾಡಿ ಆಗಮಿಸಿದ್ದರು. ಮಾರ್ಕೆಟ್ ಬಾಯ್ಸ್ ಅಧ್ಯಕ್ಷ ನಟೇಶ್ ಉಪಸ್ಥಿತರಿದ್ದರು.

ಈ ಸಂದರ್ಭ ಆಗಮಿಸಿದ ಎಲ್ಲ ಸಾರ್ವಜನಿಕರಿಗೆ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಲಾಯಿತು. ಮಾರ್ಕೆಟ್ ಬಾಯ್ಸ್ ಸದಸ್ಯರಾದ ಸುಧೀರ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಧ್ವಜಾರೋಹಣದ ನಂತರ ಮಾರ್ಕೆಟ್ ಬಾಯ್ಸ್ ಸದಸ್ಯರು ಮತ್ತು ರಾಯಲ್ಸ್ ಕ್ಲಬ್ ಕುಂದಾಪುರ ಇದರ ಜಂಟಿ ಆಶ್ರಯದೊಂದಿಗೆ ಸಾರ್ವಜನಿಕ ಆಸ್ಪತ್ರೆ ಕುಂದಾಪುರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು ಇದರಲ್ಲಿ ಸಾಕಷ್ಟು ಮಂದಿ ರಕ್ತದಾನಿಗಳು ಪಾಲ್ಗೊಂಡರು.