ಕಾರ್ಕಳ ವಿಜೇತ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಸಮವಸ್ತ್ರ ವಿತರಣೆ

| Published : Aug 20 2025, 02:00 AM IST

ಕಾರ್ಕಳ ವಿಜೇತ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಸಮವಸ್ತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ೭೯ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಕುಕ್ಕುಂದೂರು ಪಂಚಾಯಿತಿ ಸಮಸ್ಯೆ ಶಾಂತಿ ಕಿಣಿ ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಇಲ್ಲಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ೭೯ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಕುಕ್ಕುಂದೂರು ಪಂಚಾಯಿತಿ ಸಮಸ್ಯೆ ಶಾಂತಿ ಕಿಣಿ ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಸಮಾಜಸೇವಕಿ ಶೈನಾ ಗಣೇಶ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ಸಮವಸ್ತ್ರಗಳನ್ನು ಉದ್ಯಮಿಗಳಾದ ಪ್ರವೀಶ್ ಶೆಟ್ಟಿ - ದೀಪ ಪ್ರವೀಶ್ ಶೆಟ್ಟಿ ದಂಪತಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಕಾರ್ಕಳ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿ ಸಂಸ್ಥೆಗೆ ೧೫ ಸಾವಿರ ರು. ದೇಣಿಗೆಯನ್ನು ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಗೌರವಾಧ್ಯಕ್ಷ ಪ್ರಶಾಂತ್ ಶೆಣೈ, ಅಧ್ಯಕ್ಷರಾದ ಅಜಿತ್, ಕಾರ್ಯದರ್ಶಿ ಖಾದರ್, ಕೋಶಾಧಿಕಾರಿ ರಾಜೇಶ್, ಜನಪ್ರಿಯ ರೈಸ್ ಮಿಲ್ ಮಾಲಕ ಮಂಜುನಾಥ್, ಅಂಕಿತಾ ಕಾಮತ್, ವಿಜೇತ ವಿಶೇಷ ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಸಂಸ್ಥೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ವೇದಿಕೆಯಲ್ಲಿ ಹಾಜರಿದ್ದರು.ಸಂಸ್ಥೆಯ ಮ್ಯಾನೇಜಿoಗ್ ಟ್ರಸ್ಟಿ ಹರೀಶ್, ಟ್ರಸ್ಟಿ ಕಿರಣ್ ಶೆಟ್ಟಿ, ಶಾಲಾ ಮಕ್ಕಳು, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳ ಪೋಷಕರು ಶಾಲಾ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಶೇಷ ಶಿಕ್ಷಕಿ ಹರ್ಷಿತಾ ಕಾರ್ಯಕ್ರಮ ನಿರೂಪಿದರು. ಶ್ರೀನಿಧಿ ವಂದಿಸಿದರು.ಕುಕ್ಕುಂದೂರು ಗ್ರಾಪಂ, ಮಂಜುನಾಥ್, ಕಾರ್ಕಳ ಮೊಬೈಲ್ ರಿಟೈಲರ್ ಅಸೋಸಿಯೇಶನ್, ಶಾಂತಿ ಕಿಣಿ ಇವರ ವತಿಯಿಂದ ಸಿಹಿತಿಂಡಿ ವಿತರಿಸಿದರು. ಗಿರೀಶ್ - ಪೂಜಾ ದಂಪತಿ ವಿಶೇಷ ಭೋಜನದ ವ್ಯವಸ್ಥೆ ಮಾಡಿದರು.