ಸಾರಾಂಶ
- ಹೋರಾಟಗಾರರ ವೇಷದಲ್ಲಿ ದೇಶಪ್ರೇಮ ಮೆರೆದ ವಿದ್ಯಾರ್ಥಿಗಳು
- - -ಮಲೇಬೆನ್ನೂರು: ಪಟ್ಟಣ ಹಾಗೂ ವಿವಿಧ ಗ್ರಾಮೀಣ ಭಾಗದಲ್ಲಿ ಶುಕ್ರವಾರ ೭೯ನೇ ಸ್ವಾತಂತ್ರ್ಯ ದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುರಸಭೆ ಕಚೇರಿ ಮುಭಾಗದಲ್ಲಿ ಅಧ್ಯಕ್ಷ ಹನುಮಂತಪ್ಪ, ಹಳೇ ವೃತ್ತದಲ್ಲಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಆರಕ್ಷಕ ಠಾಣೆ ಆವರಣದಲ್ಲಿ ಪಿಎಸ್‌ಐ ಹಾರೂನ್ ಅಕ್ತರ್, ಲಯನ್ಸ್ ಭವನದಲ್ಲಿ ಅಧ್ಯಕ್ಷ ಸಿರಿಗೆರೆ ಸಿದ್ದಪ್ಪ, ಬೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿ ಮೇಘರಾಜ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ನಂದಿಗುಡಿ ವಿದ್ಯಾಸಂಸ್ಥೆಯಲ್ಲಿ ವೃಷಭಪುರಿ ಪೀಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಭಾನುವಳ್ಳಿ ಗ್ರಾಮದ ವಿನಾಯಕ ವಿದ್ಯಾಸಂಸ್ಥೆಯಲ್ಲಿ ಕಾರ್ಯದರ್ಶಿ ಪ್ರಭಾವತಿ ಮಂಜುನಾಥ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಕ್ಕಡಗಾತ್ರಿ, ಹರಳಹಳ್ಳಿ, ಮತ್ತು ಬೆಳ್ಳೂಡಿ ಅಂಗನವಾಡಿಗಳಲ್ಲಿ ಮಕ್ಕಳು ಮಹಾತ್ಮರ ವೇಷಹಾಕಿ ದೇಶಪ್ರೇಮ ಮೆರೆದು ಚಿಕ್ಕ ಬಾವುಟ ಹಿಡಿದು ಸಂಭ್ರಮಿಸಿದರು.ಕುಂಬಳೂರಿನ ಸರ್ಕಾರಿ ಪಿಯು ಕಾಲೇಜಲ್ಲಿ ಪ್ರಾಚಾರ್ಯ ಹನುಮಂತಯ್ಯ ಧ್ವಜಾರೋಹಣ ನೆರವೇರಿಸಿದರು. ದಾನಿಗಳಾದ ನ್ಯಾಯವಾದಿ ಬೆನ್ನೂರು ಅಶ್ವಥ್, ಪುರುಷೋತ್ತಮ್, ಪುಷ್ಪ, ಪ್ರತಿಭಾವಂತ ೩೦ ಮಕ್ಕಳನ್ನು ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್. ಕಲ್ಲೇಶ್ ಬಾಬು, ಎಸ್.ಶಾರದಾ, ಬಿ.ರಮೇಶ್, ಸದಾನಂದ, ಡಿ.ಕರಿಬಸಪ್ಪ, ಹಿರಿಯ ಶಿಕ್ಷಕ ಗೋವಿಂದಪ್ಪ, ತೆಲಿಗಿ ಮಂಜುನಾಥ್, ನಾಗವೇಣಿ ವಿಷಯ ಹಂಚಿಕೊಂಡರು. ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ ಭಾಷಣ ಮಾಡಿ ಭೇಷ್ ಎನಿಸಿಕೊಂಡರು. ದಾನಿಗಳು ನೀಡಿದ ಸಮವಸ್ತ್ರ ಮತ್ತು ನೋಟ್‌ಬುಕ್ ಅನ್ನು ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ದಾನಿಗಳ ಭಾವಚಿತ್ರವನ್ನು ಅನಾವರಣ ಮಾಡಲಾಯಿತು.
ಇಲ್ಲಿಗೆ ಸಮೀಪದ ವಿನಾಯಕನಗರ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ೩೫೦೦೦ ಮೊತ್ತ ಶಾಲಾ ನಾಮಫಲಕ ಕೊಡುಗೆಯಾಗಿ ನೀಡಿದರು. ಮುಖ್ಯ ಶಿಕ್ಷಕ ರಾಜೇಂದ್ರಾಚಾರ್ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಫಕ್ಕೀರಪ್ಪ ಗ್ರಾಮಸ್ಥರು ಇದ್ದರು.ಕೊಕ್ಕನೂರು ಗ್ರಾಮದ ಅಂಜನಾದೇವಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಮಕ್ಕಳು ಹೋರಾಟಗಾರರ ವೇಷಗಳನ್ನು ಹಾಕಿ, ೬೦ ಅಡಿಗಳ ಉದ್ದದ ಧ್ವಜದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿಶಿಷ್ಠವಾಗಿ ಸ್ವಾತಂತ್ರ್ಯ ಉತ್ಸವ ಆಚರಿಸಲಾಯಿತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.
- - - (*ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-ಚಿತ್ರ-೧..ಜೆಪಿಜಿ:
ಮಲೇಬೆನ್ನೂರು ಸಮೀಪದ ಕುಂಬಳೂರಿನಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ದಾನಿಗಳು ಸಮವಸ್ತ್ರಗಳನ್ನು ವಿತರಿಸಿದರು. ಪ್ರಾಚಾರ್ಯ ಹನುಮಂತಯ್ಯ ಧ್ವಜಾರೋಹಣ ನೆರವೇರಿಸಿದರು. ದಾನಿಗಳಾದ ನ್ಯಾಯವಾದಿ ಬೆನ್ನೂರು ಅಶ್ವಥ್, ಪುರುಷೋತ್ತಮ್, ಪುಷ್ಪ ಇತರರು ಇದ್ದರು.