ಕನಕಭವನ ನಿರ್ಮಾಣಕ್ಕೆ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿರುವ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Aug 18 2024, 01:59 AM IST / Updated: Aug 18 2024, 07:59 AM IST

ಕನಕಭವನ ನಿರ್ಮಾಣಕ್ಕೆ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿರುವ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕುರುಬರ ಸಂಘದ ಪ್ರಸ್ತಾಪಿಸಿರುವಂತೆ ನರಸೀಪುರದಲ್ಲಿ 5 ಕೋಟಿ ರೂಗಳ ವೆಚ್ಚದಲ್ಲಿ ಕನಕ ಭವನವನ್ನು ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಹಂತದಲ್ಲಿ ಎರಡು ಕೋಟಿ ರು. ಗಳ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

  ಟಿ. ನರಸೀಪುರ :  ತಾಲೂಕು ಕುರುಬರ ಸಂಘದ ಪ್ರಸ್ತಾಪಿಸಿರುವಂತೆ ನರಸೀಪುರದಲ್ಲಿ 5 ಕೋಟಿ ರೂಗಳ ವೆಚ್ಚದಲ್ಲಿ ಕನಕ ಭವನವನ್ನು ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಹಂತದಲ್ಲಿ ಎರಡು ಕೋಟಿ ರು. ಗಳ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ದಿ.ಮರಿಗೌಡರ ಸ್ಮಾರಕ ಭವನದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತ್ಯುತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕು ಕೇಂದ್ರದಲ್ಲಿ ಸಮುದಾಯಕ್ಕೆ ಕನಕ ಭವನ ಬೇಕು. ಈ ಸಂಬಂಧ ಈಗಾಗಲೇ 5 ಕೋಟಿ ರು.ಗಳಿಗೆ ಯೋಜನೆ ರೂಪಿಸಿದ್ದು, ಮೊದಲ ಹಂತದಲ್ಲೇ ಮುಖ್ಯಮಂತ್ರಿಗಳೇ 2 ಕೋಟಿ ರು. ಗಳನ್ನು ಬಿಡುಗಡೆ ಮಾಡಿದ್ದಾರೆ ಎಂಬ ಭರವಸೆಯ ಮಾಹಿತಿ ನೀಡಿದರು.

ಸಾಮಾಜಿಕ ಸಮಾನತೆಗಾಗಿ ಜಾತಿ ವ್ಯವಸ್ಥೆಯ ವಿರುದ್ಧ ಶೋಷಿತರಷ್ಟೇ ಅಲ್ಲ ಹಿಂದುಳಿದ ವರ್ಗಗಳು ಕೂಡ ಹೋರಾಟ ಮಾಡಬೇಕು. ಸ್ವಾತಂತ್ರ್ಯ ಭಾರತದಲ್ಲಿ ಸನ್ಮಾನತೆಯ ಬದುಕು ಎಲ್ಲರಿಗೂ ಇರಬೇಕು. ಕೆಚ್ಚೆದೆಯ ವಿರ ಕನ್ನಡಿಗ ಸಂಗೊಳ್ಳಿ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಹೋರಾಟ ನಮ್ಮವರ ಒಳ ಸಂಚಿನಿಂದ ಹುತಾತ್ಮರಾದರು. ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕೆ. ಮಹದೇವ, ಹಿರಿಯ ಮುಖಂಡ, ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಮಾತನಾಡಿದರು.ತಾಪಂ ಮಾಜಿ ಸದಸ್ಯ ಎಂ. ರಮೇಶ್ ಕನಕ ಭವನ ಸೇರಿದಂತೆ ಸಮುದಾಯದ ಪ್ರಮುಖ ಬೇಡಿಕೆಗಳ ಭಿನ್ನವತ್ತಳೆಯನ್ನು ಸಲ್ಲಿಸಿದರು.ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಂಘದ ಕಾರ್ಯಾಧ್ಯಕ್ಷ ಎಂ. ಮಾದೇಶ್, ಹಾಲಿ ನಿರ್ದೇಶಕರಾದ ಎಂ. ಮಲ್ಲಿಕಾರ್ಜುನಸ್ವಾಮಿ, ಟಿ.ಎಸ್. ಪ್ರಶಾಂತ್ ಬಾಬು, ಟಿ.ಎಂ. ನಂಜುಂಡಸ್ವಾಮಿ, ದೊರೆಸ್ವಾಮಿ ಸ್ವಾಮೀಜಿ, ಸಂಘದ ಅಧ್ಯಕ್ಷ ಎಂ.ಎಸ್. ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜು, ಉಪಾಧ್ಯಕ್ಷರಾದ ಎಂ. ವೆಂಕಟೇಶ್, ಸೌಭಾಗ್ಯ, ಶಾಂತಿ ರಾಜು, ಖಜಾಂಚಿ ಮಲ್ಲೇಶ್, ನಿರ್ದೇಶಕರಾದ ಎಂ.ಬಿ.ಚಂದ್ರಶೇಖರ್, ಎಲ್. ಗುರುಮೂರ್ತಿ ಇದ್ದರು.