ದೇಶದ ಮೇಲಿನ ಅಭಿಮಾನ ಪ್ರತಿಕ್ಷಣವೂ ಹೆಚ್ಚಾಗಬೇಕು. ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತು, ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು.

ಹುಬ್ಬಳ್ಳಿ:

ಸ್ವಾತಂತ್ರ್ಯ ದೊರಕಿರುವುದು ನಮ್ಮ ಜೀವನವನ್ನು ಉತ್ತಮಗೊಳಿಸುವುದಕ್ಕಾಗಿಯೇ ಹೊರತು ದೇಶಾಭಿಮಾನವನ್ನು ಮರೆತು ಬದುಕು ನಡೆಸುವುದಕ್ಕಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ ಅವರು ತಾಲೂಕಿನ ಕಿರೇಸೂರ ಗ್ರಾಮದಿಂದ ನವಲಗುಂದ ಪಟ್ಟಣದ ವರೆಗೆ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ದೇಶದ ಮೇಲಿನ ಅಭಿಮಾನ ಪ್ರತಿಕ್ಷಣವೂ ಹೆಚ್ಚಾಗಬೇಕು. ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತು, ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ದೇಶಭಕ್ತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನದ ಬದುಕಿನ ಭಾಗವಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಕಿರೇಸೂರ ಗ್ರಾಮದಿಂದ ಆರಂಭಗೊಂಡ ರ‍್ಯಾಲಿಯು ಹೆಬಸೂರ, ಕರ್ಲವಾಡ, ಕಾಲವಾಡ, ಆರೇಕುರಹಟ್ಟಿ ಹಾಗೂ ಯಮನೂರ ಮಾರ್ಗವಾಗಿ ಸಂಚರಿಸಿ, ಬಳಿಕ ನವಲಗುಂದ ಪಟ್ಟಣ ಪ್ರವೇಶಿಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ಸಂಚರಿಸಿತು.

ರ‍್ಯಾಲಿಯಲ್ಲಿ ಗಂಗಪ್ಪ ಮನಮಿ, ಷಣ್ಮುಖ ಗುರಿಕಾರ, ಮಂಜುನಾಥ ಗಣಿ, ರೋಹಿತ ಮತ್ತಿಹಳ್ಳಿ, ಸಿದ್ಧನಗೌಡ ಪಾಟೀಲ, ರಾಜುಗೌಡ ಪಾಟೀಲ, ಶಿವಣ್ಣ ಶೆಟ್ಟರ, ಯಲ್ಲಪ್ಪ ಗಣಿ, ಸದಾನಂದ ಗಾಳಪ್ಪನವರ, ಪ್ರಭು ಬುಳಗಣ್ಣನವರ, ಅರುಣ ಮೆಣಸಿನಕಾಯಿ, ದುಂಡಪ್ಪ ಶೆಟ್ಟರ್, ಮಂಜು ಗಡಿಯಣ್ಣನವರ, ಸಂತೋಷ ಜೀವನಗೌಡ್ರ, ಸೋಮು ಪಟ್ಟಣಶೆಟ್ಟಿ, ಫಕ್ಕೀರಪ್ಪ (ಮುತ್ತು) ಚಾಕಲಬ್ಬಿ, ಅಶೋಕ ಮಂಡಗಾಳ, ಸುರೇಶ ಬಣವಿ, ಆನಂದ ಚವಡಿ, ಮಲ್ಲಪ್ಪ ಹಳಕಟ್ಟಿ, ರುದ್ರಪ್ಪ ದುಂಡೂರ, ನಾಗರಾಜ ಕಾಳಿ, ವೀರನಗೌಡ ಪಾಟೀಲ, ಮಂಜು ಗುಡೇನಕಟ್ಟಿ, ಪ್ರವೀಣ ನಾಗರಳ್ಳಿ, ಬಸವರಾಜ ಕಾತರಕಿ ಸೇರಿದಂತೆ ಹಲವರಿದ್ದರು.