ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಒಂದು ಜಿಲ್ಲೆಗೆ ಬೇಕಾದ ಮೂಲಭೂತ ಸೌಲಭ್ಯಗಳು ಒದಗಿಸಲು ಪ್ರಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ನನಗೆ ಸಚಿವ ಸ್ಥಾನಕ್ಕಿಂತ ಇಂಡಿ ಜಿಲ್ಲೆಯಾಗುವುದು ಮುಖ್ಯ. ಮುಂಬರುವ ದಿನದಲ್ಲಿ ಇಂಡಿ ಜಿಲ್ಲೆ ಮಾಡಲು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಶಾಸಕ ಹಾಗೂ ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಹೃದಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳು ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಮಾಡಿರುವೆ. ರಾಜಕಾರಣ, ಅಧಿಕಾರ ಇಂದು ಇರಬಹುದು, ನಾಳೆ ಇರಲ್ಲಿಕ್ಕಿಲ್ಲ. ನಾನು ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗಿವೆ ಎಂದರು.ಜನಪ್ರತಿನಿಧಿಯಾದವರಿಗೆ ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿ ಇರಬೇಕು. ಅಂದಾಗ ಮಾತ್ರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಇಂಡಿ ಪಟ್ಟಣ ಭವಿಷ್ಯದ ದಿನದಲ್ಲಿ ಯಾವ ರೀತಿಯಾಗಿರಬೇಕೆಂಬ ಚಿಂತನೆ ಮುಖ್ಯವಾಗಿರಬೇಕು. ಅಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.ಪಟ್ಟಣ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದ್ದು, ಹೀಗಾಗಿ ಪಟ್ಟಣದಲ್ಲಿನ ರಸ್ತೆಗಳ ಅಗಲೀಕರಣದ ಜೊತೆಗೆ ಮೆಗಾ ಮಾರುಕಟ್ಟೆಯಂತಹ ಕಟ್ಟಡಗಳು ತಲೆ ಎತ್ತಿದಾಗ ಮಾತ್ರ ಪಟ್ಟಣಕ್ಕೆ ಒಂದು ಮೆರಗು ಬರುತ್ತದೆ. ಆದರೆ, ಅಭಿವೃದ್ಧಿ ಚಿಂತನೆಯನ್ನು ಇಟ್ಟುಕೊಂಡಿರುವ ಪಟ್ಟಣದ ಹೃದಯವಂತ ವ್ಯಾಪಾರಸ್ಥರು, ಸಾರ್ವಜನಿಕರು, ಬುದ್ದಿಜೀವಿಗಳು ನನ್ನ ಮಾತಿಗೆ ಬೆಲೆ ಕೊಟ್ಟು ಅಂಗಡಿಗಳನ್ನು ತೆರುವುಗೊಳಿಸಿ, ರಸ್ತೆ ಅಗಲೀಕರಣಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್. ಕಡಕಭಾವಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಎಇಇ ದಯಾನಂದ ಮಠ, ಕೃಷಿ ಅಧಿಕಾರಿ ಮಹಾದೇಪ್ಪ ಏವೂರ, ತೋಟಗಾರಿಕಾ ಅಧಿಕಾರಿ ಎಚ್.ಎಸ್.ಪಾಟೀಲ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಪುರಸಭೆ ಇಇ ಅಶೋಕ ಚಂದನ್, ಜಾವೀದ ಮೂಮಿನ್, ಮಂಜುನಾಥ ಕಾಮಗೊಂಡ, ಪ್ರಶಾಂತ ಕಾಳೆ, ಮಲ್ಲುಗೌಡ ಬಿರಾದಾರ, ಜೀತಪ್ಪ ಕಲ್ಯಾಣಿ, ಸಂತೋಷ ಪರಶೇನವರ್, ಮಹೇಶ ಹೊನ್ನಬಿಂದಗಿ, ಗುತ್ತಿಗೆದಾರರಾದ ಶಾಂತು ಶಿರಕನಹಳ್ಳಿ, ಎಸ್.ಎಸ್.ಮಠ, ಸುರೇಶ ಶಿವೂರ, ವಿಠ್ಠಲ ಕಂಬಾರ, ಅತೀಕ್ ಮೋಮಿನ್, ಮುಸ್ತಾಕ್ ಇಂಡಿಕರ್, ಪುರಸಭಾ ಸದಸ್ಯರು ಇತರರು ಇದ್ದರು.ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳು ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಮಾಡಿರುವೆ. ರಾಜಕಾರಣ, ಅಧಿಕಾರ ಇಂದು ಇರಬಹುದು, ನಾಳೆ ಇರಲ್ಲಿಕ್ಕಿಲ್ಲ. ನಾನು ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗಿವೆ. ಒಂದು ಜಿಲ್ಲೆಗೆ ಬೇಕಾದ ಮೂಲಭೂತ ಸೌಲಭ್ಯಗಳು ಒದಗಿಸಲು ಪ್ರಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ನನಗೆ ಸಚಿವ ಸ್ಥಾನಕ್ಕಿಂತ ಇಂಡಿ ಜಿಲ್ಲೆಯಾಗುವುದು ಮುಖ್ಯ. ಮುಂಬರುವ ದಿನದಲ್ಲಿ ಇಂಡಿ ಜಿಲ್ಲೆ ಮಾಡಲು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ.
-ಯಶವಂತರಾಯಗೌಡ ಪಾಟೀಲ, ಶಾಸಕರು.