ಸಾರಾಂಶ
2047ಕ್ಕೆ ಭಾರತ ಅಗ್ರಗಣ್ಯ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ಯಾರಂಟಿ ಯೋಜನೆಗಳಿಂದ ದೇಶದ ಸರ್ವರಿಗೂ ಅನುಕೂಲಗುತ್ತಿದ್ದು, 2047ಕ್ಕೆ ಭಾರತ ಅಗ್ರಗಣ್ಯ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಪ್ರಧಾನಿ ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ನಾರಾಯಣಸ್ವಾಮಿ ಹೇಳಿದರು.ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲೀಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ 11.8 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರು., ಹೊಗೆಮುಕ್ತ ಅಡುಗೆಮನೆ ಉದ್ದೇಶಕ್ಕಾಗಿ 10 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಎಲ್.ಪಿ.ಜಿ ಸಿಲಿಂಡರ್, ಪ್ರತಿ ತಿಂಗಳು ಜನರಿಗೆ ಉಚಿತ ಪಡಿತರ ಧಾನ್ಯ, 55 ಕೋಟಿ ಜನರಿಗೆ ಪ್ರತಿ ವರ್ಷ 5 ಲಕ್ಷ ರು. ತನಕ ಉಚಿತ ಚಿಕಿತ್ಸೆ, 13.50 ಕೋಟಿಗೂ ಅಧಿಕ ಮನೆಗಳ ನಲ್ಲಿಗೆ ನೀರು ಸಂಪರ್ಕ, ದೇಶದ ಪ್ರತಿ ಮನೆಗೂ ಸುಲಭ ಶೌಚಾಲಯ ನಿರ್ಮಾಣ ಸೇರಿ ಹತ್ತಾರು ಮೋದಿ ಗ್ಯಾರಂಟಿ ಯೋಜನೆಗಳಿಂದ ದೇಶದ ನಾಗರಿಕರಿಗೆ ಅನುಕೂಲವಾಗಿದ್ದು, 2047 ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ತಿಳಿಸಿದರು.ದೇಶದ ಎಲ್ಲೆಡೆ ಉತ್ತಮ ಸಂಪರ್ಕಕ್ಕಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಿದ್ದು, ಪ್ರತಿ ಸಾವಿರ ಜನರಿಗೆ ಒಬ್ಬ ವೈದ್ಯರು ಇರುವದನ್ನು 800 ಜನರಿಗೆ ಒಬ್ಬ ವೈದ್ಯರು ಇರುವ ಹಾಗೆ 750 ಮೆಡಿಕಲ್ ಕಾಲೇಜು ನಿರ್ಮಿಸಿ ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ನಿರ್ಮಿಸಿದ್ದಾರೆ ಎಂದು ಅವರು ನುಡಿದರು.
ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮುಖಂಡರಾದ ಡಾ. ಶರಣಭೂಪಾಲರೆಡ್ಡಿ, ಮಾಜಿ ಅಧ್ಯಕ್ಷರಾದ ದೇವಿಂದ್ರನಾಥ ಕೆ. ನಾದ್, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್ ಮುಂತಾದವರು ಉಪಸ್ಥಿತರಿದ್ದರು.