ಬಡತನದಿಂದ ಬಳಲುತ್ತಿದ್ದ ಸುಮಾರು 25 ಕೋಟಿ ಜನರನ್ನು ಬಡತನದಿಂದ ನಿರ್ಮೂಲನೆ ಮಾಡುವಲ್ಲಿ ಸಾಹಸ ಮೆರೆದಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಅವರ ಸಂಕಲ್ಪವನ್ನು ಈಡೇರಿಸಲು ನಾವೆಲ್ಲರೂ ಕೈಜೋಡಿಸಬೇಕು.

ಹುಬ್ಬಳ್ಳಿ:ಭಾರತವು ಅತ್ಯಂತ ಕಷ್ಟದ ಸ್ಥಿತಿಯಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದು, ಅತ್ಯಂತ ಪ್ರಬಲ ರಾಷ್ಟ್ರವನ್ನಾಗಿ ಹಾಗೂ ಜಗತ್ತಿನ 4ನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರುನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ 76ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಒಂದು ತಿಂಗಳು `ಸೇವಾ ಸಂಕಲ್ಪ'''''''' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ದೃಢ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.ಬಡತನದಿಂದ ಬಳಲುತ್ತಿದ್ದ ಸುಮಾರು 25 ಕೋಟಿ ಜನರನ್ನು ಬಡತನದಿಂದ ನಿರ್ಮೂಲನೆ ಮಾಡುವಲ್ಲಿ ಸಾಹಸ ಮೆರೆದಿದ್ದಾರೆ. 2047ರ ವೇಳೆಗೆ `ವಿಕಸಿತ ಭಾರತ'''''''' ನಿರ್ಮಾಣದ ಅವರ ಸಂಕಲ್ಪವನ್ನು ಈಡೇರಿಸಲು ನಾವೆಲ್ಲರೂ ಕೈಜೋಡಿಸಬೇಕು ಎಂದರು.ವಿಶೇಷ ಪ್ರಾರ್ಥನೆ:

ಪ್ರಧಾನಿ ಮೋದಿ ಅವರ 76ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶ ಸೇವೆಯಲ್ಲಿ ಇನ್ನಷ್ಟು ಹೆಚ್ಚಿನ ಶಕ್ತಿಗಾಗಿ ಹುಬ್ಬಳ್ಳಿಯ ಆದರ್ಶ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು.

ಕಾಂಗ್ರೆಸ್‌ನಿಂದ ರಾಷ್ಟ್ರದ್ರೋಹಿಗಳಿಗೆ ಕುಮ್ಮಕ್ಕುಕಾಂಗ್ರೆಸ್‌ ಪಕ್ಷವು ಯಾವಾಗಲೂ ರಾಷ್ಟ್ರದ್ರೋಹಿಗಳು ಮತ್ತು ರಾಷ್ಟ್ರವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರು ಉಮರ್‌ ಖಾಲೀದ್‌ ಬಗ್ಗೆ ನೀಡಿರುವ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿರುವ ಅವರು, ಮುಂಬೈ ದಾಳಿಯನ್ನು ಸ್ಯಾಫ್ರನ್‌ ಟೆರರ್‌ ಎಂದು ಬಿಂಬಿಸಲು ಯತ್ನಿಸಿದ್ದು ಮತ್ತು ಪಾಕಿಸ್ತಾನದ ಪರವಾಗಿ ನಿಂತು ದೇಶದ ಹಿತಾಸಕ್ತಿಗೆ ಧಕ್ಕೆ ತರುವ ದುಷ್ಕೃತ್ಯಗಳನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದರು.ಹರಿಪ್ರಸಾದ್‌ ಅವರು ಜೈಲಿನಲ್ಲಿರುವ ಉಮರ್‌ ಖಾಲೀದ್‌ ಪರವಾಗಿ ಮಾತನಾಡಿದ್ದು, ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕೃತ್ಯವಾಗಿದೆ. ಉಮರ್‌ ಖಾಲೀದ್‌ ''''ನಾನು ಯಾವುದೇ ರೀತಿಯ ರಾಷ್ಟ್ರಕ್ಕೆ, ರಾಷ್ಟ್ರೀಯತೆಗೆ ನ್ಯಾಷಲಿಸ್ಟ್‌ ಅಲ್ಲ ಎಂದು ಹೇಳಿದ್ದಾನೆ. ಭಾರತ ವಿರೋಧಿ ಕಾರ್ಯ ಮಾಡಿ ಇಂದು ಜೈಲಿನಲ್ಲಿದ್ದಾನೆ. ಜೈಲಿನಲ್ಲಿ ಇರುವಂತಹ ದೇಶದ್ರೋಹಿಗಳಿಗೆ ಸಪೋರ್ಟ್‌ ಮಾಡುವ ಮುಖಾಂತರ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ಕುಟುಕಿದರು.ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್‌ ಇದಲ್ಲ. ಈಗಿನದು ನಕಲಿ ಕಾಂಗ್ರೆಸ್‌, ನಕಲಿ ಗಾಂಧಿಗಳು. ಈ ದೇಶದ ಬಗ್ಗೆ ಚಿಂತನೆ, ಇಲ್ಲಿನ ಸಂಸ್ಕೃತಿ ಬಗ್ಗೆ ಕಲ್ಪನೆಯು ಕೂಡ ಇಲ್ಲ. ವಿದೇಶಿ ಶಕ್ತಿಗಳಿಗೆ ಮತ್ತು ದೇಶದ್ರೋಹಿ ಶಕ್ತಿಗಳ ಜೊತೆ ಕಾಂಗ್ರೆಸ್‌ ಕೈಜೋಡಿಸುವ ಕೆಲಸ ಮಾಡುತ್ತಿರುವುದು ಇಂದು ಅವರ ಅಧ್ಯಕ್ಷರ ಹೇಳಿಕೆಯಿಂದ ಮತ್ತೊಮ್ಮೆ ದೃಢಪಟ್ಟಿದೆ ಎಂದು ಹೇಳಿದರು.--