ಸಾರಾಂಶ
ನರಸಿಂಹರಾಜಪುರಮಹಾತ್ಮಾ ಗಾಂಧೀಜಿಯವರು ಚಿಕ್ಕಮಗಳೂರಿನ ಡಿಸಿ ಕಚೇರಿಯಲ್ಲಿ 1927 ರಲ್ಲಿ ಭಾಷಣ ಮಾಡಿದ್ದರು ಎಂದು ರಾಜ್ಯ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಸ್ಮರಿಸಿದರು.
ಕಾಂಗ್ರೆಸ್ ಪಕ್ಷದಿಂದ ಉಮಾ ಮಹೇಶ್ವರ ಸಭಾ ಭವನದಲ್ಲಿ ಗಾಂಧೀ ಜಯಂತಿ ಹಾಗೂ ಲಾಲ್ ಬಹೂದ್ದೂರ್ ಶಾಸ್ತ್ರಿ ಜನ್ಮ ಜಯಂತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಾತ್ಮಾ ಗಾಂಧೀಜಿಯವರು ಚಿಕ್ಕಮಗಳೂರಿನ ಡಿಸಿ ಕಚೇರಿಯಲ್ಲಿ 1927 ರಲ್ಲಿ ಭಾಷಣ ಮಾಡಿದ್ದರು ಎಂದು ರಾಜ್ಯ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಸ್ಮರಿಸಿದರು..
ಬುಧವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ನಡೆದ 155 ನೇ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 120 ನೇ ಜನ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯವರ ಅಹಿಂಸಾತ್ಮಕ ಪ್ರಥಮ ಹೋರಾಟ ದಕ್ಷಿಣ ಆಪ್ರಿಕಾದಲ್ಲಿ ಪ್ರಾರಂಭವಾಯಿತು. ಸತ್ಯಾಗ್ರಹ, ಅಹಿಂಸೆ, ಅಸಹಕಾರ ಚಳುವಳಿ ಮೂಲಕ ಸ್ವಾತಂತ್ರ ಚಳುವಳಿಗೆ ದುಮಿಕಿದರು.ಈ ದೇಶದ ಸ್ತ್ರೀ ಸ್ವಾತಂತ್ರ,ಸಮಾನತೆಗೆ ಬೆಂಬಲಿಸಿದರು.ಅಂದಿನ ಕಾಲದಲ್ಲೇ ಸಾರ್ವಜನಿಕ ಶೌಚಾಲಯನ್ನು ಸ್ವಚ್ಛ ಮಾಡುವ ಮೂಲಕ ಸ್ವಚ್ಛ ಭಾರತ ಕಲ್ಪನೆ ಮೂಡಿಸಿದ್ದರು. ಗ್ರಾಮಗಳು ಅಭಿವೃದ್ಧಿಯಾದರೆ ಭಾರತ ದೇಶ ಅಭಿವೃದ್ಧಿಯಾಗುತ್ತದೆ ಎಂದು ಗಾಂಧೀಜಿ ಪ್ರಬಲವಾಗಿ ನಂಬಿದ್ದರು. ಇಂದು ಭಾರತ ದೇಶ ಪ್ರಪಂಚದಲ್ಲೇ ಬಲಿಷ್ಠ ರಾಷ್ಟವಾಗಲು ಗಾಂಧೀಜಿಯವರು ಪ್ರತಿಪಾದಿಸಿದ್ದ ಗ್ರಾಮೀಣ ಅಭಿವೃದ್ಧಿಯೇ ಕಾರಣ ಎಂದರು.ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಭಾರತ ದೇಶದ 2 ನೇ ಪ್ರಧಾನಿಯಾಗಿದ್ದರು.1965 ರಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದವರು. ಅವರು ಭಾರತದ ಸೈನಿಕರನ್ನು ಜೈ ದಿವಾನ್ ಹಾಗೂ ಭಾರತದ ರೈತರನ್ನು ಜೈ ಕಿಸಾನ್ ಎಂಬ ಘೋಷಣೆ ಮುಳುಗಿಸಿ ಅವರಿಗೆ ಸ್ಪೂರ್ತಿ ತುಂಬಿದ್ದರು. ಈಗ ಇಡೀ ಪ್ರಪಂಚವೇ ಭಾರತ ದೇಶದತ್ತ ತಿರುಗಿ ನೋಡುತ್ತಿದೆ. ಇಂತಹ ಕಾಲಘಟ್ಟದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಸ್ಪಾರ್ಥಕ್ಕೋಸ್ಕರ ಧರ್ಮದ ವಿಷ ಬೀಜ ಬಿತ್ತಿದರೆ ದೇಶ ಅವನತಿಯತ್ತ ಸಾಗುತ್ತದೆ.ವಿದೇಶಗಳು ಸಹ ಭಾರತ ದೇಶವನ್ನು ಅನುಸರಿಸುತ್ತಿದೆ. ದಕ್ಷಿಣ ಆಪ್ರಿಕದಲ್ಲಿ ಈಗಲೂ ಗಾಂಧಿ ಪ್ರತಿಮೆ ಸ್ಥಾಪಿಸಿದ್ದು ಅಲ್ಲಿ ಗಾಂಧಿ ತತ್ಸವನ್ನು ಅನುಸರಿಸಲಾಗುತ್ತಿದೆ ಎಂದರು. ತಾಲೂಕು ಬಗರ್ ಹುಕಂ ಸಮಿತಿ ಸದಸ್ಯ ಇ.ಸಿ.ಜೋಯಿ ಮಾತನಾಡಿ, ಇಂದು ಕಾಂಗ್ರೆಸ್ ಪಕ್ಷದಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನ ಆಚರಿಸಲಾಗುತ್ತಿದೆ. ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದ್ದೇವೆ. ಮುಂದಿನ ಪೀಳಿಗೆಗೆ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಹಸ್ತಾಂತರಿಸಬೇಕಾಗಿದೆ ಎಂದರು.ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಇದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಉಮಾ ಮಹೇಶ್ವರ ಸಭಾ ಭವನದವರೆಗೆ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮೆರವಣಿಗೆ ನಡೆಸಿದರು.ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಮಹೇಶ್, ಪ್ರಶಾಂತಶೆಟ್ಟಿ ಮಾತನಾಡಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ, ನಗರ ಅಧ್ಯಕ್ಷ ಬಿಳಾಲು ಮನೆ ಉಪೇಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಕೆ.ಎ.ಅಬೂಬಕರ್, ಪಪಂ ಅಧ್ಯಕ್ಷೆ ಸುರೈಯಾ ಭಾನು, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಸುಂದರೇಶ್, ಬಿನು, ಕೈಮರ ಸಾಜು, ಉಮಾ ಕೇಶವ್, ಶೈಲಾ ಮಹೇಶ್, ರತ್ನಮ್ಮ, ಮಾಳೂರು ದಿಣ್ಣೆ ರಮೇಶ್, ಅಂಜುಂ, ಸಮೀರ ನಹೀಂ, ಎಂ.ಆರ್.ರವಿಶಂಕರ್, ವಸೀಂ, ದೇವಂತರಾಜ್, ಕುಮಾರಸ್ವಾಮಿ ಮತ್ತಿತರರು ಇದ್ದರು.