ಅಂ.ರಾ. ಸೆಸ್ಟೋ ಕೂಟದಲ್ಲಿ ಭಾರತ ಚಾಂಪಿಯನ್: ಜಿಲ್ಲೆಯ ಶಾಹಿಲ್‌ ಉಸ್ಮಾನ್, ಇರ್ಷಾದ್‌ ಮುಸ್ತಫಾ ಸಾಧನೆ

| Published : Nov 16 2023, 01:15 AM IST

ಅಂ.ರಾ. ಸೆಸ್ಟೋ ಕೂಟದಲ್ಲಿ ಭಾರತ ಚಾಂಪಿಯನ್: ಜಿಲ್ಲೆಯ ಶಾಹಿಲ್‌ ಉಸ್ಮಾನ್, ಇರ್ಷಾದ್‌ ಮುಸ್ತಫಾ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಟೂರ್ನಮೆಂಟ್ ನಲ್ಲಿ ದೇಶಕ್ಕೆ ಬಂಗಾರದ ಪದಕಗಳನ್ನು ತಂದುಕೊಟ್ಟು ಕೊಡಗು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿರುವ ಶಾಹೀಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫ ಬುಧವಾರ ನವದೆಹಲಿಗೆ ಹಿಂತಿರುಗಿ ಬೆಂಗಳೂರಿನ ಮೂಲಕ ಕೊಡಗಿಗೆ ಆಗಮಿಸಿದರು. ಜಿಲ್ಲೆಯ ಹೆಬ್ಬಾಗಿಲು ಮೂಲಕ ಕೊಪ್ಪ ಗೇಟ್‌ಗೆ ತಲುಪುತ್ತಿದ್ದಂತೆ ಕ್ರೀಡಾಭಿಮಾನಿಗಳು ಸಾರ್ವಜನಿಕರು ಸಾಧಕರಿಗೆ ಅದ್ಧೂರಿ ಸ್ವಾಗತ ಕೋರಿದ್ದರು.

ಸುಂಟಿಕೊಪ್ಪ: ಬ್ಯಾಂಕಾಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸೆಸ್ಟೋ ಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫಾ ಭಾರತ ತಂಡವನ್ನು ಪ್ರತಿನಿಧಿಸಿದ್ದು, ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೀಲಂಕಾದ ರತ್ನಪುರದಲ್ಲಿ ನ. 8ರಿಂದ13ರವರೆಗೆ ನಡೆದ ಅಂತಾರಾಷ್ಟ್ರೀಯ ಸೆಸ್ಟೋ ಬಾಲ್ ಚಾಂಪಿಯನ್ ಶಿಪ್‌ನ ಭಾರತ ಪುರುಷರ ತಂಡದ ಥೈಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ದ ಸೆಸ್ಟೋ ಬಾಲ್ ನಲ್ಲಿನ ಚಾಕಚಕ್ಯತೆ ಪ್ರದರ್ಶಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯಾವಳಿಯಲ್ಲಿ ಶಾಹಿಲ್ ಉಸ್ಮಾನ್ ಭಾರತ ತಂಡದ ಕ್ಯಾಪ್ಟನ್ ಆಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಅವರು ಸುಂಟಿಕೊಪ್ಪ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಕೆ.ಎ. ಉಸ್ಮಾನ್ ಅವರ ಪುತ್ರ. ಇರ್ಷಾದ್ ಮುಸ್ತಾಫ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ಗೆ ಪಾತ್ರರಾಗಿದ್ದು ಇವರು ಸುಂಟಿಕೊಪ್ಪದ ದಿವಂಗತ ಜಾವಮನೆ ಮುಸ್ತಫಾ ಅವರ ಪುತ್ರ.

ಈ ಟೂರ್ನಮೆಂಟ್ ನಲ್ಲಿ ದೇಶಕ್ಕೆ ಬಂಗಾರದ ಪದಕಗಳನ್ನು ತಂದುಕೊಟ್ಟು ಕೊಡಗು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿರುವ ಶಾಹೀಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫ ಬುಧವಾರ ನವದೆಹಲಿಗೆ ಹಿಂತಿರುಗಿ ಬೆಂಗಳೂರಿನ ಮೂಲಕ ಕೊಡಗಿಗೆ ಆಗಮಿಸಿದರು. ಜಿಲ್ಲೆಯ ಹೆಬ್ಬಾಗಿಲು ಮೂಲಕ ಕೊಪ್ಪ ಗೇಟ್‌ಗೆ ತಲುಪುತ್ತಿದ್ದಂತೆ ಕ್ರೀಡಾಭಿಮಾನಿಗಳು ಸಾರ್ವಜನಿಕರು ಸಾಧಕರಿಗೆ ಅದ್ಧೂರಿ ಸ್ವಾಗತ ಕೋರಿದ್ದರು.

ಅಲ್ಲಿಂದ ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದಂತೆ ಅಯ್ಯಪ್ಪ ಸ್ವಾಮಿ ವೃತ್ತದ ಬಳಿಯಲ್ಲಿ ಅದ್ಧೂರಿ ಸ್ವಾಗತವನ್ನು ಕ್ರೀಡಾಭಿಮಾನಿಗಳು ಮತ್ತು ಸಾರ್ವಜನಿಕರು ಸ್ವಾಗತ ಕೋರಿದರು.