ಸಂವಿಧಾನ ರಕ್ಷಿಸದಿದ್ದರೆ ಭವಿಷ್ಯ ಭಾರತಕ್ಕೆ ಉಳಿಗಾಲವಿಲ್ಲ

| Published : Jan 08 2025, 01:33 AM IST

ಸಂವಿಧಾನ ರಕ್ಷಿಸದಿದ್ದರೆ ಭವಿಷ್ಯ ಭಾರತಕ್ಕೆ ಉಳಿಗಾಲವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಾ ಆಭಿಯಾನ ಕಾರ್ಯಕ್ರಮದಲ್ಲಿಎಂ.ಕೆ.ತಾಜ್ ಫೀರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಾವು ಹುಟ್ಟುವ ಮೊದಲು ಹಾಗೂ ನಂತರಕ್ಕೂ ಸಂವಿಧಾನ ನಮಗೆ ಸೌಲಭ್ಯಗಳ ಕಲ್ಪಿಸಿದೆ. ಸಂವಿಧಾನ ರಕ್ಷಿಸದಿದ್ದರೆ ಭವಿಷ್ಯ ಭಾರತಕ್ಕೆ ಉಳಿಗಾಲವಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಆಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಾ ಆಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಅಂಬೇಡ್ಕರ ಅವರನ್ನು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋಲಿಸಿತು ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದು ಸೋಲಿಸಿದ್ದು ಯಾರು ಎಂಬುದ ಎಲ್ಲರೂ ಅರಿಯಬೇಕೆಂದರು.

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅಲ್ಲ. ಅವರು ಆ ಸಮಯದಲ್ಲಿ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಿ ಅದರಿಂದ ಚುನಾವಣೆಯಲ್ಲಿ ಸ್ಫರ್ಧೆ ಮಾಡಿ ಸೋತಿದ್ದರು. ಈ ಸಮಯದಲ್ಲಿ ಆರ್‌ಎಸ್ಎಸ್ ಸಂಘಟನೆ ಅಂಬೇಡ್ಕರ್ ವಿರುದ್ಧ ಅವರ ಜನಾಂಗದವರನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಂದರ್ಭ ಸೃಷ್ಟಿಸಿ ಮತಗಳು ಚದುರುವಂತೆ ಮಾಡಿದ್ದರು. ಆದರೆ ಅಂಬೇಡ್ಕರ್ ಚುನಾವಣೆಯಲ್ಲಿ ಸೋತ್ತಿದ್ದರೂ, ಪಕ್ಷವನ್ನು ಬಿಟ್ಟಿದ್ದರೂ ಕಾಂಗ್ರೆಸ್ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಂಡು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಕಾನೂನು ಮಂತ್ರಿ ಅವಕಾಶ ಕಲ್ಪಿಸಿತು. ಅಂಬೇಡ್ಕರ್ ಅವರನ್ನು ಗೌರವಯುತವಾಗಾಗಿ ನಡೆಸಿಕೊಂಡ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದರು.

ಅಮಿತಾ ಶಾರವರು ಅಂಬೇಡ್ಕರ್ ರವರ ಹೆಸರನ್ನು ಸ್ಮರಣೆ ಮಾಡುವುದರ ಬದಲು ದೇವರ ಹೆಸರನ್ನು ಸ್ಮರಣೆ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದಿದ್ದಾರೆ. ಹಲವಾರು ಜನಾಂಗವನ್ನು ದೇವಸ್ಥಾನದ ಬಳಗಡೆಯೇ ಬಿಡುತ್ತಿಲ್ಲ, ದೇವರನ್ನು ನೋಡಲು ಬಿಡದವರು ಸ್ವರ್ಗಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಜನತೆಯ ಮನಸ್ಸಿನಲ್ಲಿ ಅಂಬೇಡ್ಕರ್ ಅಚ್ಚಳಿಯದೇ ಉಳಿದಿದ್ದಾರೆ. ಅದನ್ನು ತೆಗೆಯುವ ಕಾರ್ಯವನ್ನು ಈ ರೀತಿ ಮಾತುಗಳಿಂದ ಅಮಿತಾ ಶಾ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಾ ಅಭಿಯಾನವನ್ನು ಪ್ರಾರಂಭ ಮಾಡಿದೆ. ಸಂವಿಧಾನದ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿರುವ ಪಕ್ಷಕ್ಕೆ ಸರಿಯಾದ ಪಾಠ ಕಲಿಸಿ ಜನತೆಗೆ ಸಂವಿಧಾನದ ಬಗ್ಗೆ ತಿಳಿಸುವ ಕಾರ್ಯವನ್ನು ದೆಹಲಿಯಿಂದ ಗ್ರಾಮ ಮಟ್ಟದವರೆಗೂ ನಡೆಸಲಾಗುವುದು ಎಂದರು.

ಸಂವಿಧಾನ ಎಲ್ಲರಿಗೂ, ಎಲ್ಲಾ ಸಮುದಾಯದವರಿಗೂ ಸೌಲಭ್ಯವನ್ನು ನೀಡಿದೆ. ಮಹಿಳೆಯರಿಗೂ ವಿಶೇಷ ಸ್ಥಾನ ಕಲ್ಪಿಸಿದೆ. ಸಂವಿಧಾನದ ಆಶಯದಿಂದಲೇ ಸಣ್ಣ-ಸಣ್ಣ ಸಮುದಾಯದವರು ಆಧಿಕಾರ ಹಿಡಿಯುವಂತೆ ಆಗಿದೆ. ಜ.26ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ನಂತರ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನ ಮಾಡಿ, ಸ್ವಾತ್ರಂತ್ರ್ಯ ಹೋರಾಟಗಾರನ್ನು ಗೌರವಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಿಸುವಂತೆ ಕೆಪಿಸಿಸಿ ಸೂಚನೆ ನೀಡಿದೆ ಎಂದು ತಾಜ್‍ಪೀರ್ ತಿಳಿಸಿದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಗಾಂಧೀಜಿಯವರನ್ನು ದೂರವಿಟ್ಟರೆ ಮಾತ್ರ ನಮಗೆ ಉಳಿಗಾಲ ಎಂದು ಮನುವಾದಿಗಳು ಅವರನ್ನು ದೂರ ಇಡಲಾಯಿತು. ಬಿಜೆಪಿ ಸಂವಿಧಾನದ ವಿರುದ್ಧ ಹೋರಾಟ ಮಾಡುತ್ತಿದೆ, ಸಂವಿಧಾನದಿಂದಲೇ ನಾವು ಎಂಬ ಸತ್ಯವನ್ನು ಮರೆತಿದೆ. ಅಂಬೇಡ್ಕರ್ ರವರು ಬರೀ ಎಸ್‌ಸಿ, ಎಸ್‌ಟಿಗೆ ಮಾತ್ರ ಮೀಸಲು ಕಲ್ಪಿಸಿಲ್ಲ. ಎಲ್ಲರಿಗೂ ಸಂಬಂಧಪಟ್ಟ ವ್ಯಕ್ತಿಯಾಗಿದ್ದಾರೆ. ಎಲ್ಲರಿಗೂ ಸಮಾನವಾದ ಬದುಕುವ ಹಕ್ಕನ್ನು ನೀಡಿದ್ದಾರೆ. ಎಲ್ಲಾ ವರ್ಗದವರ ಧ್ವನಿಯಾಗಿ ಸಂವಿಧಾನ ಇದೆ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ, ಎಸ್ಎಂಎಲ್ ತಿಪ್ಪೇಸ್ವಾಮಿ, ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾ ಅಧ್ಯಕ್ಷ ಬಿ.ಮಂಜುನಾಥ್, ಪರಿಶಿಷ್ಟ ಜಾತಿಗಳ ವಿಭಾಗದ ಜಿಲ್ಲಾ ಅಧ್ಯಕ್ಷ ಎಸ್.ಜಯ್ಯಣ್ಣ, ಜಿಲ್ಲಾ ಆಲ್ಪಸಂಖ್ಯಾತರ ಅಧ್ಯಕ್ಷ ಸೈಯದ್ ಖುದ್ದುಸ್, ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಎನ್.ಡಿ.ಕುಮಾರ್, ಖಾಸಿಂಆಲಿ, ಲೋಕೇಶ್, ಚೋಟು, ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ ಕೃಷ್ಣಮೂರ್ತಿ ಇದ್ದರು.