ಸಾರಾಂಶ
ಭಾರತವು ಎಲ್ಲ ಧರ್ಮದವರ ರಾಷ್ಟ್ರ. ಇಲ್ಲಿ ಹಿಂದೂ, ಸಿಖ್, ಕ್ರೈಸ್ತ, ಮುಸ್ಲಿಂ, ಜೈನ್ ಹೀಗೆ ಎಲ್ಲ ಧರ್ಮದವರು ಇದ್ದು, ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳಬೇಕು.
ಹಳಿಯಾಳ: ದೇಶದಲ್ಲಿ ಧರ್ಮ, ಜಾತೀಯ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಅನ್ಯಾಯ, ಶೋಷಣೆಗಳು ಹಿತದೃಷ್ಟಿಯಿಂದ ಮಾರಕವಾಗಿವೆ. ಈ ಬೆಳವಣಿಗೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಭಾನುವಾರ ಸಂಜೆ ಪಟ್ಟಣದ ಹೊಸೂರ ಗಲ್ಲಿಯ ನೂರಾನಿ ಮಸೀದಿಯಲ್ಲಿ ಉದ್ಯಮಿ ಆರ್.ಎಂ. ಬಸರಿಕಟ್ಟಿ ಹಾಗೂ ಪುತ್ರರು ಮತ್ತು ಬಳಗದವರು ಆಯೋಜಿಸಿದ್ದ ರಂಜಾನ್ ಇಫ್ತಾರ ಕೂಟದಲ್ಲಿ ಮಾತನಾಡಿದರು.ಭಾರತವು ಎಲ್ಲ ಧರ್ಮದವರ ರಾಷ್ಟ್ರ. ಇಲ್ಲಿ ಹಿಂದೂ, ಸಿಖ್, ಕ್ರೈಸ್ತ, ಮುಸ್ಲಿಂ, ಜೈನ್ ಹೀಗೆ ಎಲ್ಲ ಧರ್ಮದವರು ಇದ್ದು, ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಕೂಡಿ ಬಾಳಬೇಕೆಂದು ಹೇಳುತ್ತಾ ಬಾಳುತ್ತಾ ಬಂದಿದ್ದಾರೆ ಎಂದರು.
ಇಫ್ತಾರ ಕೂಟದಲ್ಲಿ ಉದ್ಯಮಿ ಆರ್.ಎಂ. ಬಸರಿಕಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಆಲಿಂ ಬಸರಿಕಟ್ಟಿ, ಉಪಾಧ್ಯಕ್ಷ ಇಮ್ತಿಯಾಜ್ ಶೇಖ್, ವಕ್ಫ್ ಸಮಿತಿ ಮಾಜಿ ಜಿಲ್ಲಾಧ್ಯಕ್ಷ ಮಹಮದ್ ಖಯ್ಯಾಂ ಮುಗದ, ಎಂ.ಎ. ಕಾಗದ, ಪುರಸಭಾ ಮಾಜಿ ಅಧ್ಯಕ್ಷ ಖಾಕೇಶಾ ಮಕಾನದಾರ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಪುರಸಭಾ ಸದಸ್ಯ ಫಯಾಜ್ ಶೇಖ್, ಮಾರುತಿ ಕಲಬಾವಿ, ಯೂಸೂಫ್ ಜಂಗೂಬಾಯಿ, ಟಿಪ್ಪರ್ ಮಾಲೀಕರ ಸಂಘದ ಅಧ್ಯಜ್ಷ ರಹಿಸ್ ಕೊಟೂರ, ಫಾರೂಖ್ ಬಾಳೆಕುಂದ್ರಿ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.