ದೇವರ ನಾಮಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದೇವಿಯ ಮಹಾತ್ಮೆ ತಿಳಿದವರ ಜನ್ಮ ಪಾವನವಾಗುತ್ತದೆ.
ಲಕ್ಷ್ಮೇಶ್ವರದಲ್ಲಿ ದುರ್ಗಾ ದೌಡ್ 5ನೇ ದಿನದ ಧಾರ್ಮಿಕ ನಡಿಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರದೇವರ ನಾಮಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದೇವಿಯ ಮಹಾತ್ಮೆ ತಿಳಿದವರ ಜನ್ಮ ಪಾವನವಾಗುತ್ತದೆ ಎಂದು ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ಗುರುವಾರ ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ನಡೆಯುತ್ತಿರುವ ದುರ್ಗಾ ದೌಡ್ 5ನೇ ವರ್ಷದ ಧಾರ್ಮಿಕ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧಾರ್ಮಿಕ ಕೇಂದ್ರಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ಎಲ್ಲರನ್ನು ಒಟ್ಟಾಗಿ ಬೆಸೆಯುವ ಧಾರ್ಮಿಕ ಕಾರ್ಯಕ್ರಮಗಳು ಈ ಭಾಗದಲ್ಲಿ ನಿರಂತರವಾಗಲಿ. ಭಕ್ತಿ-ಶ್ರದ್ಧೆಯಿಂದ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದರು.6ನೇ ದಿನದ ದುರ್ಗಾ ದೌಡ್ ಮೆರವಣಿಗೆಯು ಬಸ್ತಿಕೇರಿ ಬನಶಂಕರಿ ದೇವಸ್ಥಾನದಿಂದ ಆರಂಭಗೊಂಡು ಮಲ್ಲಿಕಾರ್ಜುನ ದೇವಸ್ಥಾನ, ಮಾಗಡಿ ಬಸವೇಶ್ವರ ದೇವಸ್ಥಾನ, ಪಾಂಡುರಂಗ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ಸಣ್ಣ ದ್ಯಾಮವ್ವನ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಪರ್ವತ ಮಲ್ಲಯ್ಯನ ಗುಡಿ, ಗೊಲ್ಲಾಳೇಶ್ವರ ದೇವಸ್ಥಾನ, ಕಲ್ಮಠದ ಮುಖಾಂತರ ಸಾಗಿ ಶಿವರುದ್ರಮ್ಮ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.
ದುರ್ಗಾ ದೌಡ್ ಮೆರವಣಿಗೆ ಬರುವ ದಾರಿಯುದ್ದಕ್ಕೂ ಮಹಿಳೆಯರು ರಂಗೋಲಿ ಹಾಕಿ, ತಳಿರು-ತೋರಣ ಕಟ್ಟಿ ಶೃಂಗಾರಗೊಳಿಸಿದ್ದರು. ಮಕ್ಕಳು ವಿವಿಧ ದೇವರ ವೇಷಭೂಷಣದಲ್ಲಿ ಗಮನ ಸೆಳೆದರು.ದುರ್ಗಾ ದೌಡ್ ಸಮಿತಿ ಅಧ್ಯಕ್ಷ ರಾಘವೇಂದ್ರ ಪೂಜಾರ, ಬಸವರಾಜ ಅರಳಿ, ಶಂಕರ ಬಾಳಿಕಾಯಿ, ನೀಲಪ್ಪ ಹತ್ತಿ, ಯಲ್ಲಪ್ಪ ಚಕ್ರಸಾಲಿ, ಶಿವಯೋಗಿ ಅಂಕಲಕೋಟಿ, ಬಸವೇಶ ಮಹಾಂತಶೆಟ್ಟರ, ಪುಲಿಕೇಶಿ ಬಟ್ಟೂರ, ಮಹಾದೇವಪ್ಪ ಅಣ್ಣಿಗೇರಿ, ಈರಣ್ಣ ಉಮಚಗಿ, ತಿಪ್ಪಣ್ಣ ಸಂಶಿ, ಸದಾನಂದ ನಂದೆಣ್ಣವರ, ರವಿ ಲಿಂಗಶೆಟ್ಟಿ. ಶಿವಾನಂದ ಚಕ್ರಸಾಲಿ, ಮಲ್ಲಿಕಾರ್ಜುನ ನೀರಾಲೋಟಿ, ಮಲ್ಲನಗೌಡ ಪಾಟೀಲ, ಪ್ರಕಾಶ ಗುತ್ತಲ, ಶಿವಣ್ಣ ಗಿಡಿಬಿಡಿ, ಈಶಣ್ಣ ಹಾದಿಮನಿ, ಅರುಣಕ್ಕ ಕಣವಿ. ಬೇಬಿ ರುದ್ರಶೆಟ್ಟಿ ಇನ್ನೂ ಅನೇಕರು ಇದ್ದರು.