ಸಾರಾಂಶ
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ 7ನೇ ಡಾ. ಎಂ.ವಿ. ಕಾಮತ್ ಸ್ಮಾರಕ ದತ್ತಿ ಉಪನ್ಯಾಸ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಬಡವರಿಗಾಗಿ ಪ್ರಧಾನಿ ಮೋದಿ ಸರ್ಕಾರದ ವಿತರಣಾ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಆದರೆ ಭಾರತವು ನಿಂತು ಹೋಗಿರುವ ಸ್ಥಿತಿಯಲ್ಲಿ ಸಿಲುಕಿದೆ ಮತ್ತು ಪ್ರಗತಿಯನ್ನು ತೋರಿಸಲು ಯಾವುದೇ ಸಾಧನೆ ಕಾಣಿಸುತ್ತಿಲ್ಲ ಎಂದು ಪ್ರಖ್ಯಾತ ಪತ್ರಕರ್ತ ಶೇಖರ್ ಗುಪ್ತಾ ಹೇಳಿದ್ದಾರೆ.ಅವರು ಇಲ್ಲಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಆಯೋಜಿಸಿದ್ದ 7ನೇ ಡಾ. ಎಂ.ವಿ. ಕಾಮತ್ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು.ಭಾರತವು ಶೇ.7ಕ್ಕಿಂತ ಹೆಚ್ಚಿನ ಬೆಳವಣಿಗೆ ದರದ ಗುರಿಯತ್ತ ಲಕ್ಷ್ಯವಿಡಬೇಕಾದ ಅಗತ್ಯವಿದೆ. ಕಳೆದ ದಶಕದಲ್ಲಿ ಭಾರತದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿಲ್ಲ. ಕಾಂಗ್ರೆಸ್ ಸರ್ಕಾರದ ಆರ್ಥಿಕ ಸುಧಾರಣೆಯನ್ನು ಮುಂದುವರಿಸಲು ಭಾರತ ಇಂದು ವಿಫಲವಾಗಿದೆ. ಸ್ವಯಂ ಪ್ರಶಂಸೆಯನ್ನು ಬಿಟ್ಟು ಆತ್ಮಾವಲೋಕನ ಮಾಡುವ ಅಗತ್ಯವಿದೆ ಎಂದರು.ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಅನಗತ್ಯ ಪ್ರಚೋದನೆ ಮಾಡಲಾಗುತ್ತಿದೆ ಎಂದು ಟೀಕಿಸಿದ ಶೇಖರ್ ಗುಪ್ತಾ, ಸಾರ್ವಜನಿಕ ಶಿಕ್ಷಣದಲ್ಲಿ ತಕ್ಷಣದ ಸುಧಾರಣೆ ಅಗತ್ಯವಿದೆ, ಪ್ರಸ್ತುತ ಶಿಕ್ಷಣದ ಸ್ಥಿತಿ ತೀವ್ರ ಹಿಂಜರಿಕೆಯಲ್ಲಿದೆ ಎಂದು ಅಭಿಪ್ರಾಯಪಟ್ಟರು.ಈ ಕಾರ್ಯಕ್ರಮದಲ್ಲಿ ಮಾಹೆಯ ಸಹ ಉಪಕುಲಪತಿ (ತಾಂತ್ರಿಕ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ್, ಕುಲಸಚಿವ ಡಾ. ಗಿರಿಧರ್ ಕಿಣಿ, ಸಿಓಓ ಡಾ. ರವಿರಾಜ್ ಎನ್.ಎಸ್. ಮತ್ತು ಎಂಐಸಿಯ ನಿರ್ದೇಶಕಿ ಡಾ.ಪದ್ಮರಾಣಿ ಉಪಸ್ಥಿತರಿದ್ದರು.