ಭಾರತ ಈಗ ಭಯೋತ್ಪಾದನೆ ಮುಕ್ತ ದೇಶ- ಮಾಜಿ ಸಚಿವ ಬಿ.ಸಿ. ಪಾಟೀಲ

| Published : May 03 2024, 01:05 AM IST

ಸಾರಾಂಶ

ಭಾರತದಲ್ಲಿ ಆಸಾಧ್ಯವನ್ನು ಸಾಧ್ಯ ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಭಯೋತ್ಪಾದನಾ ಮುಕ್ತ ದೇಶ ಮಾಡಿ, ಭಯೋತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ಭಾರತದಲ್ಲಿ ಆಸಾಧ್ಯವನ್ನು ಸಾಧ್ಯ ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಭಯೋತ್ಪಾದನಾ ಮುಕ್ತ ದೇಶ ಮಾಡಿ, ಭಯೋತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ಹಿರೇಕೆರೂರ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಗುರುವಾರ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಪರ ಮತ ಪ್ರಚಾರ ನಡೆಸಿ ಅವರು ಮಾತನಾಡಿದರುರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು, ಪ್ರಧಾನಿ ನರೇಂದ್ರ ಮೋದಿಯವರ ಜನಪರ ಅಡಳಿತದ ಕಾರ್ಯವೈಖರಿಯನ್ನು ಪ್ರತೀ ಮತದಾರನಿಗೂ ಮನವರಿಕೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.ದೇಶದ ಸುಭದ್ರತೆಗಾಗಿ ಭಾರತಕ್ಕೆ ಮೋದಿ ಅವಶ್ಯ. ಅದರಿಂದ ನರೇಂದ್ರ ಮೋದಿಯವರನ್ನು ಮತ್ತೆ ಈ ದೇಶದ ಪ್ರಧಾನಿಯನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ನ್ಯಾಯವಾದಿ ಬಿ. ಎನ್. ಬಣಕಾರ, ನಾಗರಾಜ ಹುಲ್ಲತ್ತಿ, ಗ್ರಾಪಂ ಸದಸ್ಯ ಹೂವನಗೌಡ ನಿಂಗನಗೌಡ್ರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಜಗದೇಶ್ ದೊಡ್ಡಗೌಡರ್, ಬಸವರಾಜ ಭರಮಗೌಡ್ರ, ಸುರೇಶ ತಡಗಣಿ, ಈಶಪ್ಪ ತಡಗಣಿ, ಈರಪ್ಪ ಬಣಕಾರ, ರವಿಶಂಕರ ಬಾಳಿಕಾಯಿ, ಹನುಮಗೌಡ ಜೋಗಿಹಳ್ಳಿ, ಪ್ರಕಾಶ್ ತಿಮ್ಮಿನಕಟ್ಟಿ, ಮಂಜು ಜೋಗಿಹಳ್ಳಿ, ರಾಮುನಗೌಡ ನಿಂಗನಗೌಡ್ರ, ಗಣೇಶಪ್ಪ ಶಿವನಕ್ಕನವರ್, ಮಂಜು ಪೂಜಾರ್, ರಾಜು ದುಪದಹಳ್ಳಿ, ಕರಬಸಪ್ಪ ಬಣಕಾರ, ಪ್ರವೀಣ ಬಣಕಾರ, ರಾಜಪ್ಪ ಜೋಗಿಹಳ್ಳಿ, ಮಲ್ಲನಗೌಡ ಭರಮಗೌಡ್ರ, ಗ್ರಾಮದ ಮುಖಂಡರು ಪಕ್ಷೆದ ಕಾರ್ಯಕರ್ತರು ಇದ್ದರು,