ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ವಿದೇಶಗಳಿಗೆ ಹೋಲಿಸಿದರೆ ಸಂಸ್ಕೃತಿ, ಸಂಸ್ಕಾರ, ಭಾವೈಕ್ಯತೆ ಹೀಗೆ ಆಚಾರ ವಿಚಾರಗಳ ಅಡಿಯಲ್ಲಿ ನಮ್ಮ ಭಾರತ ದೇಶ ಅತ್ಯಂತ ಶ್ರೀಮಂತವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿ, ಕ್ರೀಡಾ, ಎನ್‌ಸಿಸಿ, ರೆಡ್‌ಕ್ರಾಸ್, ರೇಂಜರ್ಸ, ರೊವರ್ಸ, ಹೊಸ ವಿದಾರ್ಥಿಗಳ ಸ್ವಾಗತ ಹಾಗೂ ವಿವಿಧ ಘಟಕ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಶಕ್ತಿಗೆ ಸಂಸ್ಕಾರದ ಉತ್ಸುಕತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ನಡೆಯುತ್ತಿವೆ. ಶೈಕ್ಷಣಿಕ ವರ್ಷ ಕೊನೆಯಲ್ಲಿರುವುದರಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗದಂತೆ ಈ ಎಲ್ಲ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ಮುಗಿಸಿದೆ. ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗೆ ಮುಷ್ಕರ ನಡೆಸಿದ್ದಾರೆ. ಅವರ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರ ಪ್ರಯತ್ನ ನಡೆಸಿದೆ. ಉಳಿದ ಉಪನ್ಯಾಸಕರ ಕಡೆಯಿಂದ ಪಾಠ ಬೋಧಿಸಿಕೊಂಡು ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸದ್ಯ ಈ ಕಾಲೇಜನ ಎಲ್ಲ ಕೊರ್ಸಗಳಿಗೆ 1700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಖ್ಯೆಗನುಸಾರವಾಗಿ ಸಿಬ್ಬಂದಿ ಇದೆ. ಅದಕ್ಕೆ ಎಲ್ಲ ರೀತಿ ಮೂಲ ಸೌಲಭ್ಯಗಳು ಕೊರತೆ ಆಗದಂತೆ ನಾನು ಶ್ರಮಿಸುತ್ತೇನೆ ಎಂದರು.ವೇಮೂ ಮಹಾಂತಯ್ಯ ಗಚ್ಚಿನಮಠ ಸಾನ್ನಿಧ್ಯವಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿ, ಪ್ರತಿಯೊಬ್ಬರಲ್ಲಿರುವ ವಿವಿಧ ಬಗೆಯ ಪ್ರತಿಭೆ ಗುರುತಿಸಿ, ಅವರ ಕೌಶಲ್ಯವನ್ನು ಮತ್ತೊಬ್ಬರು ತಿಳಿಯುಸುವುದೇ ಈ ಚಟುವಟಿಕೆ ಉದ್ದೇಶ ಎಂದರು. ಸದಸ್ಯರಾದ ಸಿ.ಜಿ. ಹವಾಲ್ದಾರ ಮತ್ತು ಎಸ್.ಜಿ. ಎಮ್ಮಿ ಮಾತನಾಡಿದರು. ಪ್ರಾಚಾರ್ಯ ಸುರೇಶ ಡಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾಲೇಜನಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಇದೆ. ಆ ನಿಮಿತ್ತ ಶಾಸಕರು ಕಾಲೇಜಿಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿ ನೆರವೇರಿಸಿದರು. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಸಿಗುವಂತ ಎಲ್ಲ ಸೌಲಭ್ಯಗಳನ್ನು ಪಡೆದು ಉತ್ತಮ ಫಲಿತಾಂಶ ಪಡೆಯಬೇಕು ಎಂದರು.
ಸದಸ್ಯ ಬಿ.ಎಂ. ಲೈನದ, ರಾಜಶೇಖರ ಬ್ಯಾಳಿ, ದೇವು ಡಂಬಳ, ಸಾವಿತ್ರಿ ತಪೇಲಿ, ಎ.ಜಿ. ಹುಚನೂರ, ಬಸವರಾಜ ಹೊಸಮನಿ, ಭೀಮಪ್ಪ ಕೊಡಗಾನೂರ, ರಾಣಿ ತೋಪಲಕಟ್ಟಿ, ಹನಮಂತ ನಡುವಿನಮನಿ, ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಅಮರೇಶ ನಾಗೂರ, ಶಿವಾನಂದ ಕಂಠಿ, ಆಶಿಫ್ ಬದಾಮಿ ವೇದಿಕೆಯಲ್ಲಿದ್ದರು. ದಾನಮ್ಮ ಮಠದ ನಿರೂಪಿಸಿದರು. ನಿಜೇಶಕುಮಾರ ಡಿ. ವಂದಿಸಿದರು.