ವಿಶ್ವಕ್ಕೆ ಯೋಗ ಪರಿಚಯಿಸಿದ ದೇಶ ಭಾರತ

| Published : Jan 03 2024, 01:45 AM IST

ಸಾರಾಂಶ

ರೋಗ ತಡೆಗಟ್ಟಲು ಬಹಳಷ್ಟು ಸಂಶೋಧನೆ ಮಾಡಿ ಯೋಗ ಒಂದು ದಿವ್ಯ ಔಷದವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರು ಯೋಗ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ. ಇತಂಹ ಧ್ಯಾನ ಯೋಗ ಮಂದಿರ ಕಟ್ಟಿ ಜನರಿಗೆ ಅನುಕೂಲ ಮಾಡಿ ಕೊಟ್ಟು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಗಣ್ಣನವರ ಸೇವೆ ಸ್ಮರಣೀಯ

ಧ್ಯಾನ ಯೋಗ ಮಂದಿರ ಉದ್ಘಾಟನೆಯಲ್ಲಿ ಚನ್ನಮಲ್ಲ ಗುರೂಜಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಯೋಗ ಭಾರತೀಯ ಸಂಸ್ಕೃತಿಯ ಮೂಲ ಬೇರು, ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ದೇಶ ಭಾರತವಾಗಿದೆ ಎಂದು ಜ್ಞಾನ ಗಂಗಾ ಯೋಗಾಶ್ರಮದ ಶ್ರೀ ಚನ್ನಮಲ್ಲ ಗುರೂಜಿ ಹೇಳಿದರು.

ಪಟ್ಟಣದ ಶ್ರೀಸಂಗಣ್ಣ ಟೆಂಗಿನಕಾಯಿಯವರ ಶ್ರೀಸಾಯಿ ಪ್ಯಾಲೇಸ್ ಆವರಣದಲ್ಲಿ ಧ್ಯಾನ ಯೋಗ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ದೇಶದಲ್ಲಿ ಹುಟ್ಟಿದ ನಾವೇ ಯೋಗ ಮಾಡದಿದ್ದರೆ ಹೇಗೆ ಪ್ರತಿನಿತ್ಯ ಯೋಗಕ್ಕಾಗಿ ಒಂದು ಗಂಟೆ ಸಮಯ ಮೀಸಲಿಟ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ರೋಗ ತಡೆಗಟ್ಟಲು ಬಹಳಷ್ಟು ಸಂಶೋಧನೆ ಮಾಡಿ ಯೋಗ ಒಂದು ದಿವ್ಯ ಔಷದವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರು ಯೋಗ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ. ಇತಂಹ ಧ್ಯಾನ ಯೋಗ ಮಂದಿರ ಕಟ್ಟಿ ಜನರಿಗೆ ಅನುಕೂಲ ಮಾಡಿ ಕೊಟ್ಟು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಗಣ್ಣನವರ ಸೇವೆ ಸ್ಮರಣೀಯ ಎಂದರು.

ಈ ಸಂದರ್ಭದಲ್ಲಿ ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು ತುಲಾಭಾರ ಕಾರ್ಯಕ್ರಮ ಜರುಗಿತು.

ಪಟ್ಟಣದ ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಇಟಗಿ-ಚಿಕ್ಕಮ್ಯಾಗೇರಿಯ ಡಾ. ಗುರುಶಾಂತವೀರ ಸ್ವಾಮೀಜಿ, ಹಿಮಾಲಯದಲ್ಲಿ ೬ವರ್ಷಗಳ ಕಾಲ ಯೋಗ ಸಾಧನೆ ಮಾಡಿರುವ ಶ್ರೀ ನಿರಂಜನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಬಸವಲಿಂಗಪ್ಪ ಭೂತೆ, ಬಿ.ಎಂ.ಶಿರೂರ, ಅಂದಪ್ಪ ಜವಳಿ, ಕೆ.ಜಿ. ಪಲ್ಲೇದ, ಶೇಖರಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಅನುಸೂಯ ಟೆಂಗಿನಕಾಯಿ, ಅಮರಪ್ಪ ಕಲಬುರ್ಗಿ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.