ಸಾರಾಂಶ
ವಿಶ್ವದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ ದೇಶ ಭಾರತ ಎಂದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ವನ್ಯಜೀವಿ ಛಾಯಗ್ರಾಹಕ ಆರ್.ಕೆ.ಮಧು ಹೇಳಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ವಿಶ್ವದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ ದೇಶ ಭಾರತ ಎಂದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ವನ್ಯಜೀವಿ ಛಾಯಗ್ರಾಹಕ ಆರ್.ಕೆ.ಮಧು ಹೇಳಿದರು.ತಾಲೂಕಿನ ಸರ್ಕಾರಿ ಹೊಂಗಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಹೊಂಗಹಳ್ಳಿಯಲ್ಲಿ ವಿಶ್ವ ಹುಲಿ ದಿನಾಚರಣೆಯನ್ನು ಗಿಡಕ್ಕೆ ನೀರೆರೆವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳೆದ ಹುಲಿ ಗಣತಿ ಪ್ರಕಾರ ಪ್ರಪಂಚದಲ್ಲಿ 5574 ಹುಲಿ ಗಳಿವೆ.ಭಾರತ ದೇಶದಲ್ಲಿ 3654 ಹುಲಿ ಗಳಿವೆ.ಕರ್ನಾಟಕದಲ್ಲಿ 563 ಹುಲಿಗಳಿದ್ದರೆ,ಬಂಡೀಪುರ ದಲ್ಲಿ 158 ಹುಲಿಗಳಿವೆ. ಹುಲಿ ಅಂದಾಜು ಸರಾಸರಿ 13 ರಿಂದ 20 ವರ್ಷ ಬದುಕಿರುತ್ತದೆ.ಒಂದು ಹುಲಿ ವಾಸಿಸಲು ಸುಮಾರು 12 ಚದರವರೆಗೆ ಕಾಡು ಬೇಕು.ಈ ಕಾಡಲ್ಲಿ ಕೋಟ್ಯಾಂತರ ಸಕಲ ಜೀವ ರಾಶಿಗಳು ಬದುಕುವ ಮೂಲಕ ಪರಿಸರದಲ್ಲಿ ಸಮತೋಲನ ಕಾಪಾಡುತ್ತವೆ ಎಂದರು.ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ನಮ್ಮ ಗುಂಡ್ಲುಪೇಟೆ ಹುಲಿಗಳ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ ಎಂದರು.
ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ.ಬದುಕಿ ಬದುಕಲು ಬಿಡಿ.ಮಾನವ ಸಂತತಿ ಉಳಿಯ ಬೇಕಾದರೆ ಕಾಡು ಮತ್ತು ಪ್ರಾಣಿಗಳನ್ನು ಸಂರಕ್ಷಣೆ ಮಾಡಲೇಬೇಕು ಎಂದರು.ಸಮಾರಂಭದಲ್ಲಿ ಶಿಕ್ಷಕರಾದ ನಂದಿನಿ,ವಿನೋದ,ಕವಿತ ಹಾಗು ಶಾಲೆಯ ಮಕ್ಕಳು ಹಾಜರಿದ್ದರು.