ಭಾರತ ಧಾರ್ಮಿಕತೆ, ಆಧ್ಯಾತ್ಮಿಕತೆಯ ತವರೂರಾಗಿದೆ-ಚಂದ್ರಕಲಾಜೀ

| Published : Mar 08 2024, 01:51 AM IST

ಭಾರತ ಧಾರ್ಮಿಕತೆ, ಆಧ್ಯಾತ್ಮಿಕತೆಯ ತವರೂರಾಗಿದೆ-ಚಂದ್ರಕಲಾಜೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೇಷ್ಠ ಗುಣಗಳು ಪ್ರಾಪ್ತಿ ಆಗಬೇಕೆಂದರೆ ಅದು ಧ್ಯಾನದಿಂದ ಮಾತ್ರ ಸಾಧ್ಯ. ಬದುಕಿನಲ್ಲಿ ಮೌಲ್ಯಗಳು ಮುಖ್ಯವಾಗಿದೆ ಎಂದು ಕೂಡ್ಲಿಗಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಚಂದ್ರಕಲಾಜೀವರು ಹೇಳಿದರು.

ನರಗುಂದ: ಅಂತರಂಗದ ಜಾಗೃತಿಗಾಗಿಯೇ ಹಬ್ಬಗಳ ಆಚರಣೆ ಈ ದೇಶದಲ್ಲಿ ಜರುಗುತ್ತಿವೆ. ಸಂಸ್ಕಾರವಿಲ್ಲದ ವ್ಯಕ್ತಿ, ಉತ್ತಮ ನಡತೆಯುಳ್ಳ ವ್ಯಕ್ತಿ ಉತ್ತಮ ಬದುಕನ್ನು ನಡೆಸಲಿಕ್ಕೆ ಸಾಧ್ಯವಿಲ್ಲ. ಈಗಿನ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದಲೇ ಉತ್ತಮ ಬದುಕಿಗಾಗಿ ಆಧ್ಯಾತ್ಮಿಕ ಶಿಕ್ಷಣ ಅವಶ್ಯವಿದೆ. ವ್ಯಕ್ತಿಗೆ ರೂಪ ಹೇಗೆ ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯ. ಶ್ರೇಷ್ಠ ಗುಣಗಳು ಪ್ರಾಪ್ತಿ ಆಗಬೇಕೆಂದರೆ ಅದು ಧ್ಯಾನದಿಂದ ಮಾತ್ರ ಸಾಧ್ಯ. ಬದುಕಿನಲ್ಲಿ ಮೌಲ್ಯಗಳು ಮುಖ್ಯವಾಗಿದೆ ಎಂದು ಕೂಡ್ಲಿಗಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಚಂದ್ರಕಲಾಜೀವರು ಹೇಳಿದರು.

ಅವರು ಪಟ್ಟಣದ ಪುರಸಭೆ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ 88ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಆಧ್ಯಾತ್ಮಕತೆ ವಿಷಯದ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಬದುಕನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವುದೇ ಆಧ್ಯಾತ್ಮ. ವೇದ, ಶಾಸ್ತ್ರ, ವೇದಾಂತ ಇವುಗಳನ್ನು ಕಲಿಯುವುದರ ಜೊತೆಗೆ ಸತ್ಯ ಎನ್ನುವುದು ಕೇವಲ ಹೇಳುವುದಲ್ಲ, ಅನುಭವಿಸುವುದಾಗಿದೆ. ಆಧ್ಯಾತ್ಮವು ಗುಣವಂತ ವ್ಯಕ್ತಿಯನ್ನಾಗಿ, ಆದರ್ಶ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಜಗತ್ತಿನಲ್ಲಿ ಎಲ್ಲ ಜಾತಿ ಧರ್ಮದವರನ್ನು ಒಳಗೊಂಡ ಭಾರತ ದೇಶವೇ ನಿಜವಾದ ಆಧ್ಯಾತ್ಮಿಕತೆಯ ದೇಶವಾಗಿದೆ. ಆಧ್ಯಾತ್ಮಿಕತೆಯ ಶಕ್ತಿಯೇ ಭಾರತದ ಶಕ್ತಿಯಾಗಿದೆ ಎಂದು ಹೇಳಿದರು. ಸಭೆಯಲ್ಲಿ ಪ್ರಾಚಾರ್ಯ ಸಂಗಣ್ಣ ಜಕ್ಕಲಿ ಅವರು ಮಾತನಾಡಿ, ಭಗವಂತನ ಸ್ಮರಣೆ ನಿತ್ಯ ನಿರಂತರ ನಡೆದರೆ ದೇಹದಲ್ಲಿನ ಕಲ್ಮಶಗಳು ದೂರವಾಗಿ ಮನುಷ್ಯ ಪರಿಶುದ್ಧ ವ್ಯಕ್ತಿ ಆಗುತ್ತಾನೆ. ಶಿಕ್ಷಣದಲ್ಲೂ ಆಧ್ಯಾತ್ಮಿಕತೆ ಅವಶ್ಯವಿದೆ ಎಂದರು.

ವೇದಿಕೆಯಲ್ಲಿ ಪರಮಾತ್ಮನ ಚಿತ್ರವನ್ನು ಕೆಲವೇ ನಿಮಿಷಗಳಲ್ಲಿ ಬಿಡಿಸಿದ ಕಲಾವಿದ ಪರ್ವತಗೌಡ ಮೂಲಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ರಾಜಯೋಗಿನಿ ಪ್ರಭಕ್ಕನವರು, ನಿವೃತ್ತ ಬಿಇಓ ಮಂಗಳಾ ಪಾಟೀಲ, ಎಸ್. ಎಸ್. ಪಾಟೀಲ, ಸಂಗಣ್ಣ ಕಳಸಾ, ಚನ್ನಪ್ಪ ಕಂಠಿ, ನಿಂಗಣ್ಣ ಗಾಡಿ, ಮಹೇಶಗೌಡ ಪಾಟೀಲ, ವೀರೇಶ ಶಿರೂಂದಮಠ, ಆರ್. ಬಿ .ಪಾಟೀಲ, ಉಮೇಶ ಅರಕೇರಿ, ಜೆ .ಪಿ .ಕಲವಕುರಿ, ಡಾ.ವೀರನಗೌಡ್ರ, ವ್ಹಿ .ಎನ್ .ಕೊಳ್ಳಿಯವರ, ಗಿರೀಶ ಯಾದವ, ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಹಾಗೂ ಪ್ರಾಚಾರ್ಯರು ಇದ್ದರು.