ಸಾರಾಂಶ
ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದು, ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ಪ್ರಜಾಪ್ರಭುತ್ವದ ಕುರಿತು ಅರಿವು ಅವಶ್ಯ ಅದರೊಟ್ಟಿಗೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಪ್ರಕ್ರಿಯೆಗಳ ಅರಿವಿರಬೇಕು
ನರಗುಂದ: ಜಗತ್ತಿನಲ್ಲಿ ಭಾರತ ಬಹು ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ ಎಂದು ಪ್ರಾಚಾರ್ಯ ಕೆ.ಎಂ. ಹುದ್ದಾರ ಹೇಳಿದರು.
ಅವರು ಬುಧವಾರ ತಾಲೂಕಿನ ಬನಹಟ್ಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರುಪಪೂ ಶಿಕ್ಷಣ ಇಲಾಖೆ ಗದಗ, ಸರ್ಕಾರಿ ಪದವಿ ಪೂರ್ವ ಕಾಲೇಜು ಬನಹಟ್ಟಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರ ದಿನದ ಅಂಗವಾಗಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ, ಪ್ರಬಂಧ ಹಾಗೂ ಭಿತ್ತಿ ಚಿತ್ರ ಸ್ಪರ್ಧೆಗಳ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದು, ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ಪ್ರಜಾಪ್ರಭುತ್ವದ ಕುರಿತು ಅರಿವು ಅವಶ್ಯ ಅದರೊಟ್ಟಿಗೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಪ್ರಕ್ರಿಯೆಗಳ ಅರಿವಿರಬೇಕು ಎಂದರು.ಗ್ರಾಪಂ ಅಧ್ಯಕ್ಷ ಚಂದ್ರಪ್ಪ ಜಾಧವ್, ಸದಸ್ಯ ಶಿವರಾಜ ಕಲ್ಲಾಪೂರ, ಜಿಲ್ಲಾ ಇಎಲ್ಸಿ ಸಂಯೋಜಕ ಕೆ.ಎಂ. ಮಾಕನ್ನವರ, ಎಚ್.ಎಸ್. ಶಿವಪ್ಪಯ್ಯನಮಠ, ಸುಜಾತ ಮೆಳವಂಕಿ, ನಿರ್ಮಲ ಚಂದ್ರತ್ತನವರ, ಮನ್ಸೂರ್ ಅಲಿ ಹೋಸಫೇಠಖಾಜಿ, ಎಸ್.ಎಸ್. ಪೂಜಾರ, ಎಸ್.ವೈ. ಪಾಟೀಲ ಉಪಸ್ಥಿತರಿದ್ದರು. ಸಿ.ಜಿ. ಖಾನಾಪೂರ ಸ್ವಾಗತಿಸಿದರು. ಬಿ.ಸಿ. ಹನಮಂತಗೌಡ್ರ ನಿರೂಪಿಸಿದರು. ಬಸಮ್ಮ ಪಾಟೀಲ ವಂದಿಸಿದರು.