ಸಾರಾಂಶ
ಕೊಪ್ಪಳ:
ಭ್ರಷ್ಟಾಚಾರ, ಜಾತೀಯತೆ, ಧರ್ಮಾಂಧತೆ ಹಾಗೂ ಒಡಕುಗಳಿಂದ ಭಾರತ ಸ್ವತಂತ್ರವಾಗಬೇಕಿರುವುದು ಇಂದಿನ ಅಗತ್ಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತ ದೈಹಿಕ ಹಾಗೂ ಮಾನಸಿಕ ಸ್ವಾತಂತ್ರ್ಯ ಗಳಿಸಿದೆ. ಸ್ವಾತಂತ್ರ್ಯ ಸಿಕ್ಕು ಎಂಟು ದಶಕಗಳಾದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ, ಜಾತಿಯತೆ, ಮತಾಂಧತೆ ಹಾಗೂ ಒಡಕುಗಳು. ಇವುಗಳಿಂದ ದೇಶ ಮುಕ್ತವಾದರೆ ವಿಶ್ವಗುರು ಆಗಲು ಸಾಧ್ಯ ಎಂದರು.
ಕೌಶಲ್ಯ ರಹಿತ ಮಾನವ ಸಂಪನ್ಮೂಲ ಭಾರತಕ್ಕೆ ಹೊರಯಾಗುತ್ತಿದೆ. ಯುವಶಕ್ತಿಯ ಸಂಪೂರ್ಣ ಸದುಪಯೋಗವಾಗಬೇಕೆಂದರೆ ಅವರು ಕೌಶಲ್ಯವಂತರಾಗಬೇಕು. ಸರ್ಕಾರಗಳು ವ್ಯಾಪಕವಾಗಿ ಕೌಶಲ್ಯೀಕರಣಕ್ಕೆ ಹಣ ಹೂಡಬೇಕು ಎಂದು ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿದ್ದು ತ್ಯಾಗ ಹಾಗೂ ಬಲಿಯಾನ, ಸ್ವತಂತ್ರ ಹೋರಾಟಗಾರರು ಕಂಡ ಕನಸು ಇಂದಿಗೂ ನನಸಾಗಿಲ್ಲ. ಅವರು ಹಾಕಿಕೊಟ್ಟ ಮಾರ್ಗ ಬಿಟ್ಟು ಬೇರೆ ಮಾರ್ಗ ಹಿಡಿದಿದ್ದು ಇದಕ್ಕೆ ಕಾರಣ. ಹೀಗಾಗಿ ತ್ಯಾಗ ಮತ್ತು ಬಲಿದಾನಗಳಿಗೆ ಅರ್ಥ ಬರಬೇಕೆಂದರೆ ಸ್ವತಂತ್ರ ಹೋರಾಟಗಾರರ ಆದರ್ಶಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದರು.ಪ್ರಮುಖರಾದ ಲಕ್ಷ್ಮೀದೇವಿ ಚಂದ್ರಶೇಖರ, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ವೀರೇಶಗೌಡ ಚಿಕ್ಕಬಗನಾಳ, ಶಿವಕುಮಾರ ಏಣಿಗಿ, ಕರಿಯಪ್ಪ ಹಾಲವರ್ತಿ, ಶಾಂತಕುಮಾರ ದೊಡ್ಡಮನಿ, ಮಹೇಶ ಕಂದಾರಿ, ಮಂಜುನಾಥ ವದಗನಾಳ, ಶರಣಪ್ಪ ಮರ್ಕಟ್, ರಮೇಶ ಡಂಬರಳ್ಳಿ ಇತರರಿದ್ದರು.
ಈ ವೇಳೆ ಜಿಲ್ಲಾ ಜೆಡಿಎಸ್ ಘಟಕದ ಸಾಮಾಜಿಕ ಜಾಲತಾಣವನ್ನು ಸಿ.ವಿ. ಚಂದ್ರಶೇಖರ್ ಉದ್ಘಾಟಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))