ಭಾರತಕ್ಕೆ ಆಧ್ಯಾತ್ಮಿಕ ಶಿಕ್ಷಣ ಅವಶ್ಯ

| Published : Nov 07 2023, 01:30 AM IST

ಸಾರಾಂಶ

ನಾವು ಇಂದ್ರೀಯಗಳ ಬೇಕುಗಳನ್ನು ಈಡೇರಿಸುತ್ತ ಅದರ ದಾಸರಾಗಿ ಕೆಲಸ‌ ಮಾಡುತ್ತೇವೆ. ಆದರೇ ಆತ್ಮ‌ ಕೇಳಿರುವುದನ್ನು ಕೊಟ್ಟಿದ್ದೆವೆಯೇ

ಯಲ್ಲಾಪುರ:

ಭಾರತಕ್ಕೆ ಆಧ್ಯಾತ್ಮಿಕ ಶಿಕ್ಷಣ ಅವಶ್ಯವಾಗಿದೆ, ಹಿಂದಿನ ಗುರುಕುಲಗಳ ಶಿಕ್ಷಣ ಜಾರಿಗೆ ಬರಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ನ. 1ರಿಂದ ಪ್ರಾರಂಭವಾಗಿ ನ. 5ರಂದು ನಡೆದ ಸಂಕಲ್ಪ ಉತ್ಸವದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಧ್ಯಾತ್ಮಿಕ ಶಿಕ್ಷಣ ಕುರಿತು ಪ್ರವಚನ ನೀಡಿದರು.ಇಂದಿನ ಶಿಕ್ಷಣ ಪದ್ಧತಿ ಕಂಡರೇ ಕತ್ತಲೆ ಕಳೆಯುತ್ತಿದೆಯೋ ಅಥವಾ ಕತ್ತಲೆ ಮೂಡುತ್ತಿದೆಯೇ ಎನ್ನುವ ಗೊಂದಲ ಮೂಡುತ್ತಿದೆ. ಬೆಳೆಯುವ ಮಗುವಿಗೆ ಪೌಷ್ಟಿಕ ಆಹಾರದ ಜತೆಗೆ ಸಾತ್ವಿಕ ಜ್ಞಾನ ಕೂಡ ಬೇಕು. ಹೊಟ್ಟೆಪಾಡಿಗಾಗಿ ಪಡೆಯುವ ಶಿಕ್ಷಣ ಶಿಕ್ಷಣವಲ್ಲ. ಒಳ್ಳೆಯ ಕೆಲಸ ಮಾಡಿ ಆಹಾರ ಸಂಪಾದಿಸಬೇಕು. ನಮಗೆ ಜ್ಞಾನ ಅರಿವು ಪಡೆಯಲು ಆಹಾರ ಬೇಕು. ಆಧ್ಯಾತ್ಮಿಕ ಶಿಕ್ಷಣದಲ್ಲಿ ಆತ್ಮಕ್ಕೆ ಪ್ರಾಧಾನ್ಯತೆಯಿದೆ. ನಾವು ಇಂದ್ರೀಯಗಳ ಬೇಕುಗಳನ್ನು ಈಡೇರಿಸುತ್ತ ಅದರ ದಾಸರಾಗಿ ಕೆಲಸ‌ ಮಾಡುತ್ತೇವೆ. ಆದರೇ ಆತ್ಮ‌ ಕೇಳಿರುವುದನ್ನು ಕೊಟ್ಟಿದ್ದೆವೆಯೇ ಎಂದು ಪ್ರಶ್ನಿಸಿದರು. ಮಾಜಿ ಶಾಸಕ‌ ಡಿ.ಆರ್. ಪಾಟೀಲ್ ಮಾತನಾಡಿ, ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದರೇ ಸಮಾಜ ನಮಗೆ ಸ್ಪಂದಿಸುತ್ತದೆ. ಹೀಗೆಲ್ಲ ಸಾಧನೆ ಮಾಡಬಹುದು ಎಂದು ನೀರು ಕೊಯ್ಲು ಮತ್ತು ನೀರಿನ ನಿರ್ವಹಣೆಗಾಗಿ ಮ್ಯಾಗ್ಸೆಸ್ಸೇ ಪ್ರಶಸ್ತಿ ಪಡೆದ ಡಾ. ರಾಜೇಂದ್ರ ಸಿಂಗ್ ಅವರಿಂದ ಕಲಿಯಬಹುದು ಎಂದು ಹೇಳಿದರು.ಅಖಿಲ ಹವ್ಯಕ ಮಹಾಸಭೆ ರಾಜ್ಯಾಧ್ಯಕ್ಷ ಗಿರಿಧರ ಕಜೆ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಳ್ಳೆಯ ಸಂಕಲ್ಪ ಮಾಡಬೇಕೆಂಬ ಶಕ್ತಿಯನ್ನು ಸಂಕಲ್ಪ ಉತ್ಸವ ತುಂಬಿದೆ. ಒಳ್ಳೆಯ ನಿರ್ಧಾರ ಕೈಗೊಳ್ಳಬೇಕಾದರೇ, ಸಂಕಲ್ಪ ಉತ್ಸವದಂತಹ ಕಾರ್ಯಕ್ರಮದ ಮೂಲಕ ಶ್ರೇಷ್ಠ ವಿಚಾರ ಮೂಡಿಬರಲು ಸಾಧ್ಯ. ಸುದೀರ್ಘ ಕಾಲ ಸಂಕಲ್ಪ‌ ಉತ್ಸವ ಕಾರ್ಯಕ್ರಮ ಆಯೋಜಿಸುತ್ತಿರುವುದು ಪ್ರಮೋದ ಹೆಗಡೆ ಅವರ ಆಸಕ್ತಿ, ಭಕ್ತಿ ಕಾರಣವಾಗಿದೆ ಎಂದರು.ಸ್ತ್ರೀ ರೋಗ ತಜ್ಞ ಡಾ. ಜಿ.ಜಿ. ಹೆಗಡೆ ಮಾತನಾಡಿ, ಪ್ರತಿ ವೃತ್ತಿಯಲ್ಲಿ ಧರ್ಮವಿದ್ದರೂ ನಾವು ಮರೆಯುತ್ತಿದ್ದೇವೆ ಎಂದು ಹೇಳಿದರು.ನೀರು ಕೊಯ್ಲು ಮತ್ತು ನೀರಿನ ನಿರ್ವಹಣೆಗಾಗಿ ಮ್ಯಾಗ್ಸೆಸ್ಸೇ ಪ್ರಶಸ್ತಿ ಪಡೆದ ಡಾ. ರಾಜೇಂದ್ರ ಸಿಂಗ್, ಶ್ರೀಮಾತಾ ಸೊಸೈಟಿ ಅಧ್ಯಕ್ಷ ಜಿ.ಎನ್‌. ಹೆಗಡೆ ಹಿರೇಸರ, ಸಂಕಲ್ಪ ಪ್ರಶಸ್ತಿ ಪುರಸ್ಕೃತ ಡಾ. ಕೆ.ಸಿ‌. ನಾಗೇಶ, ಡಾ. ವಿಜಯಕುಮಾರ ಮಠ ಇದ್ದರು.ಇದೇ ವೇಳೆ ಅಖಿಲ ಹವ್ಯಕ ಮಹಾಸಭೆ ರಾಜ್ಯಾಧ್ಯಕ್ಷ ಡಾ. ಗಿರಿಧರ ಕಜೆ, ಉಮ್ಮಚಗಿಯ ಜ್ಯೋತಿರ್ವನಂ ಸಂಸ್ಥಾಪಕ ಡಾ. ಕೆ.ಸಿ. ನಾಗೇಶ ಭಟ್ಟ ಮತ್ತು ಡಾ. ಜಿ.ಜಿ. ಹೆಗಡೆ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸ್ವರ್ಣವಲ್ಲೀ ಮಾತೃವೃಂದದರಿಂದ ಭಜನಾಮೃತ ಪ್ರಸ್ತುತಗೊಂಡಿತು. ಕುಂಬಾಶಿಯ ಕೊಂಡದಕುಳಿ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಚುಡಾಮಣಿ ದರ್ಶನ(ಲಂಕಾದಹನ) ಯಕ್ಷಗಾನ ಪ್ರದರ್ಶಿಸಿತು. ಕಾರ್ಯಕ್ರಮದಲ್ಲಿ ಪದ್ಮಾ ಪ್ರಮೋದ ಹೆಗಡೆ ಗುರು ನಮನ ಸಲ್ಲಿಸಿದರು, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಸ್ವಾಗತಿಸಿದರು, ಪ್ರಸಾದ ಹೆಗಡೆ ಪ್ರಾಸ್ತಾವಿಕಗೈದರು. ಚಂದ್ರಕಲಾ ಭಟ್ಟ ನಿರೂಪಿಸಿದರು. ಡಾ. ರವಿ ಭಟ್ಟ ಬರಗದ್ದೆ ವಂದಿಸಿದರು.ಶಿಕ್ಷಕ ಸುಧಾಕರ‌ ನಾಯಕ, ಶಿಕ್ಷಕಿ ಸ್ವರ್ಣಲತಾ ಪಟಗಾರ ಹಾಗೂ ಸುಭ್ರಾಯ ಭಟ್ ಪ್ರಶಸ್ತಿ ಪತ್ರ ವಾಚಿಸಿದರು.ಯಾವುದು ನಮಗೆ ಸಂತೋಷ ಉಂಟು ಮಾಡುತ್ತದೆ ಅದೇ ಉತ್ಸವ. 36 ವರ್ಷದಿಂದ ಮನಸ್ಸು, ಆತ್ಮ ಸಂತೃಪ್ತಿಪಡಿಸುವ ಉತ್ಸವ ಹಮ್ಮಿಕೊಂಡಿರುವುದು ಬಹು ದೊಡ್ಡ ಸಾಧನೆ. ಒಬ್ಬರ ಸಂಕಲ್ಪ ಊರಿನ‌ ಉತ್ಸವವಾಗಿ ನಾಡಿನ ಉತ್ಸವವಾಗಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.