ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌: ಸ್ಪೇನ್‌ ಮೊರಿಲ್ಲೋ ಅದ್ಭುತ ಪ್ರದರ್ಶನ

| Published : Mar 10 2025, 12:22 AM IST

ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌: ಸ್ಪೇನ್‌ ಮೊರಿಲ್ಲೋ ಅದ್ಭುತ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಫಿಂಗ್‌ ಸ್ವಾಮಿ ಫೌಂಡೇಶನ್ ಮತ್ತು ಮಂತ್ರಾ ಸರ್ಫ್‌ ಕ್ಲಬ್ ಆಯೋಜನೆಯಲ್ಲಿ ಡಬ್ಲ್ಯೂಆರ್‌ಕೆ ಡಬ್ಲ್ಯೂಆರ್‌ಕೆ ಸಹಭಾಗಿತ್ವದಲ್ಲಿ ಇನ್‌ಕ್ರೆಡಿಬಲ್ ಇಂಡಿಯಾ ಹಾಗೂ ಕರ್ನಾಟಕ ಟೂರಿಸಂ ಸಹಕಾರದಲ್ಲಿ ಸಸಿಹಿತ್ಲು ಬೀಚ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಎರಡನೇ ದಿನ ಶನಿವಾರ ಎಪಿಪಿ ಡಿಸ್ಟೆನ್ಸ್ ರೇಸ್ (10 ಕಿ.ಮೀ.)ನಲ್ಲಿ ಸ್ಪೇನ್‌ನ ಡಿಫೆಂಡಿಂಗ್ ಚಾಂಪಿಯನ್‌ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸರ್ಫಿಂಗ್‌ ಸ್ವಾಮಿ ಫೌಂಡೇಶನ್ ಮತ್ತು ಮಂತ್ರಾ ಸರ್ಫ್‌ ಕ್ಲಬ್ ಆಯೋಜನೆಯಲ್ಲಿ ಡಬ್ಲ್ಯೂಆರ್‌ಕೆ ಡಬ್ಲ್ಯೂಆರ್‌ಕೆ ಸಹಭಾಗಿತ್ವದಲ್ಲಿ ಇನ್‌ಕ್ರೆಡಿಬಲ್ ಇಂಡಿಯಾ ಹಾಗೂ ಕರ್ನಾಟಕ ಟೂರಿಸಂ ಸಹಕಾರದಲ್ಲಿ ಸಸಿಹಿತ್ಲು ಬೀಚ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಎರಡನೇ ದಿನ ಶನಿವಾರ ಎಪಿಪಿ ಡಿಸ್ಟೆನ್ಸ್ ರೇಸ್ (10 ಕಿ.ಮೀ.)ನಲ್ಲಿ ಸ್ಪೇನ್‌ನ ಡಿಫೆಂಡಿಂಗ್ ಚಾಂಪಿಯನ್‌ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಮಹಿಳಾ ವಿಭಾಗದಲ್ಲಿ ಎಸ್ಪೆರಾಂಜಾ ಬರೆರಾಸ್ ಹಾಗೂ ಪುರುಷರ ವಿಭಾಗದಲ್ಲಿ ಆಂಟೋನಿಯೋ ಮೊರಿಲ್ಲೋ ರೇಸ್‌ನಲ್ಲಿ ಗೆದ್ದಿದ್ದಾರೆ. ಅಂಡರ್‌-15 ಟೆಕ್ನಿಕಲ್ ಡಿಸ್ಟನ್ಸ್ ರೇಸ್ (1.5 ಕಿ.ಮೀ.)ನಲ್ಲಿ ಭಾರತದ ಯುವ ಪ್ಯಾಡ್ಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದು ಎ.ಅನಿಶ್ ಕುಮಾರ್ ಚಾಂಪಿಯನ್ ಪಟ್ಟ ಪಡೆದರೆ, ಅಂಡರ್‌-18 ಟೆಕ್ನಿಕಲ್ ಡಿಸ್ಟನ್ಸ್ ರೇಸ್‌ನಲ್ಲಿ ಇಂಡೋನೇಷ್ಯಾದ ಕೀಫ್ ಅನರ್ಗ್ಯ ಪ್ರನೋಟೋ ವಿಜಯ ಸಾಧಿಸಿದ್ದಾರೆ. ಜೂನಿಯರ್ಸ್‌ ಟೆಕ್ನಿಕಲ್ ಡಿಸ್ಟನ್ಸ್ ರೇಸ್‌ನಲ್ಲಿ ಅಂಡರ್‌-18 ಟೆಕ್ನಿಕಲ್ ಡಿಸ್ಟೆನ್ಸ್ ರೇಸ್‌ನಲ್ಲಿ (5 ಕಿಮೀ) ಇಂಡೋನೇಷ್ಯಾದ ಕೀಫ್ ಅನರ್ಗ್ಯ ಪ್ರನೋಟೋ 38:46:58 ಸಮಯದಲ್ಲಿ ಗುರಿ ಸಾಧಿಸಿ ಪ್ರಥಮ ಸ್ಥಾನ, ಸ್ಥಳೀಯ ಫೇವರಿಟ್ ಮತ್ತು ಡಿಫೆಂಡಿಂಗ್ ಚಾಂಪಿಯನ್ ಆಕಾಶ್ ಪೂಜಾರ್ 39:35:27 ಸಮಯದೊಂದಿಗೆ ದ್ವಿತೀಯ ಸ್ಥಾನ, ರಾಜು ಪೂಜಾರ್ 43:00:59 ಸಮಯದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಅಂಡರ್‌-15 ಟೆಕ್ನಿಕಲ್ ಡಿಸ್ಟೆನ್ಸ್ ರೇಸ್ (1.5 ಕಿಮೀ)ನಲ್ಲಿ ತಮಿಳುನಾಡಿನ ಅನಿಶ್ ಕುಮಾರ್ 10:13:34 ಸಮಯದೊಂದಿಗೆ ಚಾಂಪಿಯನ್ ಪಟ್ಟ ಪಡೆದಿದ್ದಾರೆ. ಸ್ಥಳೀಯ ಪ್ಯಾಡ್ಲರ್ ಪ್ರದೀಪ್ 12:16:37 ಸಮಯದೊಂದಿಗೆ ದ್ವಿತೀಯ ಸ್ಥಾನ, ತಮಿಳುನಾಡಿನ ನಿತೀಶ್ ಕೆ. 13:23:42 ಸಮಯದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಎಪಿಪಿಂ ಡಿಸ್ಟನ್ಸ್ ರೇಸ್ ಮಹಿಳೆಯರ ವಿಭಾಗ (10 ಕಿ.ಮೀ.)ದಲ್ಲಿ ಸ್ಪೇನ್‌ನ ಡಿಫೆಂಡಿಂಗ್ ಚಾಂಪಿಯನ್ ಎಸ್ಪೆರಾಂಜಾ ಬರೆರಾಸ್ ಮತ್ತೊಮ್ಮೆ ತನ್ನ ಸಾಮರ್ಥ್ಯ ಪ್ರದರ್ಶಿಸಿ 52:11:35 ಸಮಯದೊಂದಿಗೆ ಪ್ರಥಮ ಸ್ಥಾನ, ದಕ್ಷಿಣ ಆಫ್ರಿಕಾದ ಚಿಯಾರಾ ವೋಸ್ತರ್ಸ್‌ 57:44:18 ಸಮಯದೊಂದಿಗೆ ದ್ವಿತೀಯ ಸ್ಥಾನ, ಕೊರಿಯಾ‌ದ ಸುಜಿಯೋಂಗ್ ಲಿಮ್ 58:33:37 ಸಮಯದೊಂದಿಗೆ ಮೂರನೇ ಸ್ಥಾನವನ್ನು ಪಡೆದರು. ಭಾರತದ ವಿಜಯಲಕ್ಷ್ಮೀ ಇರುಳಪ್ಪನ್ 1.03:15:29 ಸಮಯದೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಎಪಿಪಿಂ ಡಿಸ್ಟೆನ್ಸ್ ರೇಸ್ ಓಪನ್ ಪುರುಷರ ವಿಭಾಗ (10 ಕಿ.ಮೀ.)ದಲ್ಲಿ ಸ್ಪೇನ್‌ನ ಆಂಟೋನಿಯೋ, 44:53:47 ಸಮಯದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹಂಗರಿಯ ಡೇನಿಯಲ್ ಹಸುಲಿಯೋ 45:34:38 ಸಮಯದೊಂದಿಗೆ ದ್ವಿತೀಯ, ಡೆನ್ಮಾರ್ಕ್‌ನ ಕ್ರಿಶ್ಚಿಯನ್ ಆಂಡರ್ಸನ್ 47:05:46 ಸಮಯದೊಂದಿಗೆ ಮೂರನೇ ಸ್ಥಾನವನ್ನು ಗಳಿಸಿದರು.ಭಾರತೀಯ ಪ್ಯಾಡ್ಲರ್‌ಗಳಲ್ಲಿ ಶೇಖರ್ ಪಚ್ಚೈ 50:32:46 ಸಮಯದೊಂದಿಗೆ ನಾಲ್ಕನೇ ಸ್ಥಾನವನ್ನು, ಮಣಿಕಂಠನ್ ಎಂ. 52:31:23 ಸಮಯದೊಂದಿಗೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.ಡಿಯಾ ಪ್ಯಾಡಲ್ ಫೆಸ್ಟಿವಲ್ 2025 ಅಂತಿಮ ದಿನವಾದ ಭಾನುವಾರ, ಪುರುಷರು, ಮಹಿಳೆಯರು ಮತ್ತು ಜೂನಿಯರ್ ವಿಭಾಗಗಳಲ್ಲಿ ಟಾಪ್ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಪ್ಯಾಡ್ಲರ್‌ಗಳು ಪೈಪೋಟಿ ನಡೆಸಲಿದ್ದಾರೆ.

ಭಾರತವು ಏಷ್ಯನ್ ಗೇಮ್ಸ್‌ನ ಸರ್ಫಿಂಗ್‌ನಲ್ಲಿ ತನ್ನ ಮೊದಲ ಕೋಟಾವನ್ನು ಖಚಿತ ಪಡಿಸಿಕೊಂಡಿದೆ.