- ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಸಮಾವೇಶ ಸಮಾರೋಪ
- - -ದಾವಣಗೆರೆ: ಭಾರತ ಜನಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಸಂಶೋಧನೆಯಲ್ಲಿ 38ನೇ ಸ್ಥಾನವನ್ನು ಪಡೆದಿರುವುದು ಬೇಸರದ ವಿಚಾರವಾದರೂ ಇಂದಿನ ಇಂತಹ ಅರ್ಥಪೂರ್ಣ ಸಮಾವೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದರೆ ಮುಂದೆ ಸಂಶೋಧನಾ ಕ್ಷೇತ್ರದಲ್ಲಿಯೂ ಮುಂಚೂಣಿಗೆ ಬರಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಬಕ್ಕಪ್ಪ ಹೇಳಿದರು.
ನಗರದ ಜೆಜೆಎಂ ಮೆಡಿಕಲ್ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಶನಿವಾರ ಧ.ರಾ.ಮ ವಿಜ್ಞಾನ ಕಾಲೇಜು ಹಾಗೂ ಎ ವಿ ಕಮಲಮ್ಮ ಮಹಿಳಾ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ "ಅನ್ವಯ ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ಹೊಸ ಆವಿಷ್ಕಾರಗಳು " ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಮಾರೋಪ ನುಡಿಗಳನ್ನು ಆಡಿದ ಡಾ.ಎಂ.ಗೋವಿಂದಪ್ಪ, ಈ ವಿಜ್ಞಾನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು, ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚಿನ ಮೆರಗು ತಂದಿರುತ್ತಾರೆಂದು ಸಂತೋಷ ವ್ಯಕ್ತಪಡಿಸಿ, ಇಂದಿನ ಅಂತರರಾಷ್ಟ್ರೀಯ ಸಮಾವೇಶಕ್ಕೆ ಒಟ್ಟು 202 ಸಂಶೋಧನಾ ಲೇಖನಗಳು ಬಂದಿದ್ದು, ಐಎಸ್‌ಬಿಎನ್ ಅಡಿಯಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಗೊಂಡಿರುತ್ತದೆ ಎಂದು ತಿಳಿಸಿದರು.ದಾವಿವಿ ಭೌತಶಾಸ್ತ್ರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ಎನ್.ಕಳಸದ್, ಧರಾಮ ಕಾಲೇಜಿನ ಪ್ರಾಚಾರ್ಯೆ ರೂಪಶ್ರೀ, ಎವಿಕೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಇತರರು ಇದ್ದರು. ಟಿ.ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ದಿವ್ಯಶ್ರೀ ವಿಜೇತ ಸ್ಪರ್ದಾಳುಗಳ ಪಟ್ಟಿ ವಾಚನ ಮಾಡಿದರು. ಡಾ. ಬಿ.ಜೆ.ರುದ್ರೇಶ್ ಸ್ವಾಗತಿಸಿದರೆ, ಡಾ.ಟಿ.ಮಂಜು ರಾಜ್ ವಂದಿಸಿದರು. ಸಂಶೋಧನಾ ಲೇಖನಗಳನ್ನು ಉತ್ತಮವಾಗಿ ಪ್ರಸ್ತುತಪಡಿಸಿದವರಿಗೆ ವಿಶೇಷ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.
- - -
-7ಕೆಡಿವಿಜಿ49:
ದಾವಣಗೆರೆಯಲ್ಲಿ ಶನಿವಾರ ಧ.ರಾ.ಮ ವಿಜ್ಞಾನ ಕಾಲೇಜು ಹಾಗೂ ಎ ವಿ ಕಮಲಮ್ಮ ಮಹಿಳಾ ಕಾಲೇಜು, ದಾವಣಗೆರೆ ವಿವಿ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭ ನಡೆಯಿತು.