ಸಾರಾಂಶ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿದ್ಯಾರ್ಥಿಗಳೇ ಆಯೋಜಿಸುವ ಭಾರತದ ಅತಿದೊಡ್ಡ, ಮಣಿಪಾಲ್ ಮ್ಯಾರಥಾನ್-2025 ಫೆ.9ರಂದು ನಡೆಯಲಿದೆ. ಈ ಬಾರಿಯ 7ನೇ ಅವೃತ್ತಿಯ ಈ ಮ್ಯಾರಾಥಾನ್‌ನಲ್ಲಿ ವಿಶ್ವಾದ್ಯಂತದಿಂದ 20,000 ಓಟಗಾರರು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿದ್ಯಾರ್ಥಿಗಳೇ ಆಯೋಜಿಸುವ ಭಾರತದ ಅತಿದೊಡ್ಡ, ಮಣಿಪಾಲ್ ಮ್ಯಾರಥಾನ್-2025 ಫೆ.9ರಂದು ನಡೆಯಲಿದೆ. ಈ ಬಾರಿಯ 7ನೇ ಅವೃತ್ತಿಯ ಈ ಮ್ಯಾರಾಥಾನ್‌ನಲ್ಲಿ ವಿಶ್ವಾದ್ಯಂತದಿಂದ 20,000 ಓಟಗಾರರು ಭಾಗವಹಿಸಲಿದ್ದಾರೆ.ಈ ಬಗ್ಗೆ ಮಾಹೆಯ ಸಹಕುಲಾಧಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಬಾರಿಯ ಮ್ಯಾರಥಾನ್ ‘ಚಲನೆಯಲ್ಲಿ ನಾವೀನ್ಯತೆ: ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನದ ಅಳವಡಿಕೆ’ ಎಂಬ ಘೋಷ ವಾಕ್ಯವನ್ನು ಅಳವಡಿಸಿಕೊಂಡಿದೆ ಎಂದರು.ವರ್ಷದಿಂದ ವರ್ಷಕ್ಕೆ ಮಣಿಪಾಲ್ ಮ್ಯಾರಥಾನ್ ವಿಶ್ವಪ್ರಸಿದ್ಧಿಯಾಗುತ್ತಿದ್ದು, ಈ ವರ್ಷ ಯುಎಸ್‌ಎ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಟರ್ಕಿ, ಇಥಿಯೋಪಿಯಾ, ಕೀನ್ಯಾ, ನಮೀಬಿಯಾ, ಜಪಾನ್, ಉಗಾಂಡಾ, ಮಲಾವಿ, ಕಾಂಗೋ, ಘಾನಾ, ಸುಡಾನ್, ಅಬುಧಾಬಿ, ಯುಎಇ ಮತ್ತು ಆಸ್ಟ್ರೇಲಿಯಾದಿಂದ ಓಟಗಾರರು ಆಗಮಿಸಲಿದ್ದಾರೆ.ವಿಶೇಷ ಎಂದರೆ ಈ ಮ್ಯಾರಥಾನ್‌ನಲ್ಲಿ ಸಮರ್ಥನಂ ಟ್ರಸ್ಟ್‌ನಿಂದ 300ಕ್ಕೂ ಹೆಚ್ಚು ದೃಷ್ಟಿಹೀನರು ಮತ್ತು ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ದೈಹಿಕವಾಗಿ ಅಶಕ್ತರು ಈ ಓಟದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ಬಲ್ಲಾಳ್ ಹೇಳಿದರು.ಈ ವರ್ಷದಿಂದ ‘ಮಣಿಪಾಲ್ ಗ್ಲೋಬಲ್ ವರ್ಚುವಲ್ 5ಕೆ ರನ್’ ಆಯೋಜಿಸಲಾಗಿದೆ. ಇದರಲ್ಲಿ ಪ್ರಪಂಚದಾದ್ಯಂತದ ಓಟಗಾರರು ದೂರದಿಂದಲೇ ಭಾಗವಹಿಸಲು ಅವಕಾಶ ಇದೆ. ಇದು ಈ ಮ್ಯಾರಥಾನ್‌ನ್ನು ಇನ್ನಷ್ಟು ವಿಶ್ವವ್ಯಾಪಿಗೊಳಿಸುತ್ತದೆ ಎಂದವರು ಅಭಿಪ್ರಾಯಪಟ್ಟರು.ಸುದ್ದಿಗೋಷ್ಠಿಯಲ್ಲಿ ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಡಾ.ಶರತ್ ರಾವ್, ಡಾ.ನಾರಾಯಣ ಸಭಾಹಿತ್, ಕುಲಸಚಿವ ಡಾ.ಗಿರಿಧರ ಕಿಣಿ ಉಪಸ್ಥಿತರಿದ್ದರು.