ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ:ಪಟ್ಟಣದ ಶಿವಯೋಗ ಮಂದಿರ ಸಂಸ್ಥೆಯ ಸೇವಾ ಬಳಗದ ಆಶ್ರಯದಲ್ಲಿ ಶಿವಯೋಗ ಮಂದಿರ ಸಂಸ್ಥೆಯ ಶಾಖಾಮಠದ ಆವರಣದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ಆಧ್ಯಾತ್ಮ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು.ಆದಿಕಾಲದ ಋಷಿಮುನಿಗಳು ನಾಲ್ಕು ವೇದಗಳು, 21 ಆಗಮ, 18 ಪುರಾಣಗಳು, ಉಪನಿಷತ್, ಷಟ್ ದರ್ಶನಗಳು, ವಚನಸಾಹಿತ್ಯ, ಅಬಂಗ, ಕೀರ್ತನೆಗಳು, ತತ್ವ ಗೀತೆಗಳು ದೇಶದ ಆಧ್ಯಾತ್ಮ ಸಂಪತ್ತುಗಳಾಗಿವೆ. ಆದ್ದರಿಂದಲೇ, ಬೇರೆ ದೇಶಗಳು ನಮ್ಮನ್ನು ಗೌರವದಿಂದ ಕಾಣುತ್ತವೆ ಎಂದು ಬಣ್ಣಿಸಿದರು.ನಮ್ಮೊಳಗಿನ ಅರಿವೇ ಆಧ್ಯಾತ್ಮ ಜ್ಞಾನವೇ ಆಧ್ಯಾತ್ಮ. ಆತ್ಮದ ಪರಿಜ್ಞಾನದ ಪರಿಪೂರ್ಣ ತಿಳಿವಳಿಕೆಯನ್ನು ಅರಿತುಕೊಂಡು ನಿತ್ಯ ಸುಖಿಯಾಗಿ ಆನಂದ ಅನುಭವಿಸುವುದೇ ಆಧ್ಯಾತ್ಮ ಎಂದು ಆಧ್ಯಾತ್ಮದ ಪ್ರಕಾರವನ್ನು ವಿವರಿಸಿದರು.ಸಾನ್ನಿಧ್ಯ ವಹಿಸಿದ್ದ ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಯಾರು ಅತ್ಯಂತ ನಿಷ್ಠೆ, ಶ್ರದ್ಧೆ ಮತ್ತು ಸಮಭಾವದಿಂದ ಆಚರಿಸುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ'''' ಎಂದು ಹೇಳಿದರು.
ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷ ಗೌರವ ಮತ್ತು ಮನ್ನಣೆ ಬಂದಿರುವುದು ಆಧ್ಯಾತ್ಮದಿಂದ, ಅಧ್ಯಾತ್ಮದ ಪ್ರವಚನವನ್ನು ನಿಷ್ಠೆಯಿಂದ ಆಲಿಸಿ, ಅಧ್ಯಾತ್ಮದ ಅನುಸಂಧಾನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರದ ಭಕ್ತರು, ಮತ್ತು ಮಹಿಳೆಯರು ಭಾಗವಹಿಸಿದ್ದರು. ಉಜ್ವಲ ಬಸರಿ ಸ್ವಾಗತಿಸಿದರು.