ಸಾರಾಂಶ
ಭಾರತವು 2047ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರವಾಗುವ ಗುರಿಯತ್ತ ಹೆಜ್ಜೆ ಇಡುತ್ತಿರುವಾಗ, ವಿಶ್ವವಿದ್ಯಾಲಯಗಳ ಪಾತ್ರ ಅತ್ಯಂತ ಮಹತ್ವದಾಗಿದೆ
ಧಾರವಾಡ: ಭಾರತದ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ನವೀನತೆ,ಕಲೆ ಮತ್ತು ಸಂಸ್ಕೃತಿಗಳಲ್ಲಿ ವಿಶ್ವದ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಎ.ಎಂ. ಖಾನ್ ಹೇಳಿದರು.
ಕವಿವಿ ಆವರಣದಲ್ಲಿ ಶುಕ್ರವಾರ 79 ನೇ ಸ್ವಾತಂತ್ರ್ಯದ ಧ್ವಜಾರೋಹಣ ನೆರವೇರಿಸಿದ ಅವರು, ವಿವಿ ದೇಶದ ಉನ್ನತ ಶಿಕ್ಷಣ ಕೇಂದ್ರವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಿದ್ದು, ಇಲ್ಲಿಯ ಸಂಶೋಧನೆಗಳು ಸಮಾಜದ ಸವಾಲುಗಳಿಗೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ. ನಮ್ಮ ತರಗತಿಗಳು ವಿಮರ್ಶಾತ್ಮಕ ಚಿಂತನೆಯಿಂದ ಕೂಡಿರಬೇಕು. ವಿವಿ ಆವರಣವು ಸಂವಾದ, ವೈವಿಧ್ಯತೆ ಮತ್ತು ಗೌರವದ ಕೇಂದ್ರವಾಗಿ ಬೆಳೆಯಬೇಕು ಎಂದರು.ಭಾರತವು 2047ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರವಾಗುವ ಗುರಿಯತ್ತ ಹೆಜ್ಜೆ ಇಡುತ್ತಿರುವಾಗ, ವಿಶ್ವವಿದ್ಯಾಲಯಗಳ ಪಾತ್ರ ಅತ್ಯಂತ ಮಹತ್ವದಾಗಿದೆ. ನಮ್ಮ ಶೈಕ್ಷಣಿಕ ಕಾರ್ಯಗಳು ದೇಶದ ಅವಶ್ಯಕತೆಗಳಿಗೆ ಅನುಗುಣವಾಗಿ ವಿಶೇಷವಾಗಿ ಕೊಡುಗೆ ನೀಡಬೇಕಿದೆ ಎಂದರು.
ಕುಲಸಚಿವ ಡಾ.ಶಂಕರ ವಣಿಕ್ಕಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ.ಕೃಷ್ಣಮೂರ್ತಿ, ಸಿಂಡಿಕೇಟ್ ಸದಸ್ಯರಾದ ರಾಬರ್ಟ್ ದ್ದಾಪೂರಿ, ಮಹೇಶ್ ಹುಲ್ಲನ್ನವರ, ಶ್ಯಾಮ ಮಲ್ಲನಗೌಡರ, ಡಾ. ಬಸವರಾಜ ಗೊರವರ್ ಇದ್ದರು.