ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನಲ್ಲಿ, ಬದಲಾಗುತ್ತಿರುವ ಜಗತ್ತಿನಲ್ಲಿ ಸೋಂಕುಕಾರಕ ರೋಗಗಳ ಸವಾಲಿನ ಕುರಿತ ಜಾಗತಿಕ ಮಟ್ಟದ, ಭಾರತದ ದ್ವಿತೀಯ ‘ನೇಚರ್’ ಸಮಾವೇಶವು ಅ. 14ರಿಂದ 16ರವರೆಗೆ ಸಂಪನ್ನಗೊಂಡಿತು. ಯುರೋಪಿನ ಸ್ಪ್ರಿಂಗರ್ ನೇಚರ್ ಪ್ರಕಾಶನ ಸಂಸ್ಥೆಯ ‘ನೇಚರ್’ ನಿಯತಕಾಲಿಕೆ ಸಹಯೋಗದೊಂದಿಗೆ ಮಾಹೆಯು ಸಮಾವೇಶವನ್ನು ಸಂಯೋಜಿಸಿತ್ತು.
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನಲ್ಲಿ, ಬದಲಾಗುತ್ತಿರುವ ಜಗತ್ತಿನಲ್ಲಿ ಸೋಂಕುಕಾರಕ ರೋಗಗಳ ಸವಾಲಿನ ಕುರಿತ ಜಾಗತಿಕ ಮಟ್ಟದ, ಭಾರತದ ದ್ವಿತೀಯ ‘ನೇಚರ್’ ಸಮಾವೇಶವು ಅ. 14ರಿಂದ 16ರವರೆಗೆ ಸಂಪನ್ನಗೊಂಡಿತು. ಯುರೋಪಿನ ಸ್ಪ್ರಿಂಗರ್ ನೇಚರ್ ಪ್ರಕಾಶನ ಸಂಸ್ಥೆಯ ‘ನೇಚರ್’ ನಿಯತಕಾಲಿಕೆ ಸಹಯೋಗದೊಂದಿಗೆ ಮಾಹೆಯು ಸಮಾವೇಶವನ್ನು ಸಂಯೋಜಿಸಿತ್ತು.ಭಾರತ ಮತ್ತು ವಿಶ್ವದ ಪ್ರಮುಖ ಸಂಶೋಧಕರು ಹಾಗೂ ತಜ್ಞರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಸಾಂಕ್ರಾಮಿಕ ರೋಗಗಳ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎದುರಾಗುತ್ತಿರುವ ಹೊಸ ಸವಾಲುಗಳ ಕುರಿತು ಚರ್ಚಿಸಿದರು.
ಈ ಸಮಾವೇಶದ ಯಶಸ್ಸಿನ ಕುರಿತು ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ‘ಸಾಂಕ್ರಾಮಿಕ ರೋಗಗಳು ಸಂಕೀರ್ಣ ಸವಾಲುಗಳನ್ನು ಮುಂದಿಡುತ್ತವೆ. ಅವುಗಳನ್ನು ಎದುರಿಸಲು ವೈಜ್ಞಾನಿಕ ಸಹಯೋಗ, ನಿರಂತರ ಸಂಶೋಧನೆ ಮತ್ತು ಜ್ಞಾನ ವಿನಿಮಯ ಅಗತ್ಯ. ಈ ಹಿನ್ನೆಲೆಯಲ್ಲಿ ಅರ್ಥಪೂರ್ಣ ವೈಜ್ಞಾನಿಕ ಸಂವಾದಕ್ಕೆ ವೇದಿಕೆ ಕಲ್ಪಿಸಲು ಹಾಗೂ ಸಾರ್ವಜನಿಕ ಸ್ವಾಸ್ಥ್ಯದ ಪ್ರಗತಿಗೆ ನೆರವಾಗುವ ಚರ್ಚೆಗಳನ್ನು ಬೆಂಬಲಿಸಲು ನೇಚರ್ ನೊಂದಿಗೆ ಸಹಭಾಗಿತ್ವ ವಹಿಸಿರುವುದು ನಮಗೆ ಅಭಿಮಾನದ ಸಂಗತಿಯಾಗಿದೆ‘ ಎಂದಭಿಪ್ರಾಯಪಟ್ಟರುನೇಚರ್ ಹೆಲ್ತ್ನ ಹಿರಿಯ ಸಂಪಾದಕ ಲಾರೆನ್ಸೊ ರಿಟೊ ಅವರು ಮಾತನಾಡಿ, ‘ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ವಿಶೇಷವಾದ ಜ್ಞಾನ ಅಗತ್ಯ. ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಂಶೋಧಕರನ್ನು ನೇಚರ್ ಸಮ್ಮೇಳನವು ಒಂದೆಡೆ ಸೇರಿಸಿದೆ. ಮಾಹೆಯೊಂದಿಗೆ ನೇಚರ್ ಸಹಭಾಗಿತ್ವ ಮುಂದುವರಿಸಲು ಅಭಿಮಾನವೆನಿಸುತ್ತದೆ” ಎಂದಿದ್ದಾರೆ.ಜಾನ್ಸ್ ಹಾಪ್ಕಿನ್ಸ್ ವಿವಿಯ ಲಾರೆನ್ ಗಾರ್ಡ್ನರ್, ಮೆಕ್ಗಿಲ್ ವಿವಿಯ ಮಧುಕರ್ ಪೈ, ವಿಟ್ವಾಟರ್ಸ್ರಾಂಡ್ ವಿವಿಯ ಶಬೀರ್ ಎ. ಮಧಿ, ಎರಾಸ್ಮಸ್ ವಿವಿಯ ಮರಿಯನ್ ಕೂಪ್ಮನ್ಸ್ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಸೂಕ್ಷ್ಮಜೀವಿ ನಿರೋಧಕತೆ ಮತ್ತು ಹೊಸ ಚಿಕಿತ್ಸೆಗಳ ಅಭಿವೃದ್ಧಿ, ಕ್ಲೆಬ್ಸಿಯೆಲ್ಲಾ ನ್ಯುಮೋನಿಯೆ ಮತ್ತು ಕ್ಷಯರೋಗದ ಚಿಕಿತ್ಸಾ ಕ್ರಮಗಳು, ಎಚ್ವಿವಿ ಪರೀಕ್ಷೆ ಮತ್ತು ಹೊಸ ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳ ಅಭಿವೃದ್ಧಿ ಮತ್ತು ದೀರ್ಘಕಾಲ ರಕ್ಷಣೆ ನೀಡುವ ಕ್ರಮಗಳು, ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ರೋಗಗಳ ನಡುವಿನ ಸಂಬಂಧ, ಮಕ್ಕಳ ಅಪೌಷ್ಟಿಕತೆ ಮತ್ತು ‘ಒನ್ ಹೆಲ್ತ್’ ದೃಷ್ಟಿಕೋನದಿಂದ ಸೂಕ್ಷ್ಮಜೀವಿ ನಿರೋಧಕತೆ ಕುರಿತು ಚರ್ಚಿಸಲಾಯಿತು.