ಧರ್ಮ, ಸಂಸ್ಕೃತಿಯ ಗಡಿ ಕಾಯುವ ಭಾರತೀಯ ಕಲೆಗಳು: ಮಂಜುನಾಥ ಹೆಗಡೆ ಸುರಗಿಕೊಪ್ಪ

| Published : Mar 26 2024, 01:00 AM IST

ಧರ್ಮ, ಸಂಸ್ಕೃತಿಯ ಗಡಿ ಕಾಯುವ ಭಾರತೀಯ ಕಲೆಗಳು: ಮಂಜುನಾಥ ಹೆಗಡೆ ಸುರಗಿಕೊಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ತಾಲೂಕಿನ ತ್ಯಾಗಲಿಯ ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದ ಅಂಗವಾಗಿ ಯಕ್ಷಗಾನ ಮತ್ತು ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಲವ-ಕುಶ ಯಕ್ಷಗಾನ ಪ್ರದರ್ಶನಗೊಂಡಿತು.

ಸಿದ್ದಾಪುರ: ಭಾರತೀಯ ಕಲೆಗಳು ಧರ್ಮದ ಹಾಗೂ ಸಂಸ್ಕೃತಿಯ ಗಡಿಕಾಯುತ್ತದೆ. ವೈರಿಗಳ ಎದುರಿನಲ್ಲಿ ಹೋರಾಡಿ ಗೆಲುವು ಸಾಧಿಸಿದಾಗ ಸಿಗುವ ಖುಷಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದಾಗ ಸಿಗುತ್ತದೆ ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್ ಮಂಜುನಾಥ ಹೆಗಡೆ ಸುರಗಿಕೊಪ್ಪ ಹೇಳಿದರು.

ತಾಲೂಕಿನ ತ್ಯಾಗಲಿಯ ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಧನಸಹಾಯ ಯೋಜನೆ ಅಡಿಯಲ್ಲಿ ಸೋಂದಾದ ಶಬರ ಸಂಸ್ಥೆ ಆಯೋಜಿಸಿದ್ದ ಯಕ್ಷಗಾನ ಮತ್ತು ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೋಂದಾ ಶಬರ ಸಂಸ್ಥೆಯ ಸಂಚಾಲಕ ನಾಗರಾಜ್ ಜೋಶಿ ಸೋಂದಾ ಮಾತನಾಡಿ, ಸೈನಿಕರು ದೇಶದ ಗಡಿ ಕಾಯ್ದರೆ ಯಕ್ಷಗಾನ ಕನ್ನಡ ಭಾಷೆಯನ್ನು ಕಾಯುತ್ತಿದ್ದೆ. ಏಕೆಂದರೆ ಅಚ್ಚ ಕನ್ನಡ ಭಾಷೆಯನ್ನು ಬಳಸುವ ಕಲೆ ಎಂದರೆ ಯಕ್ಷಗಾನ ಎಂದರು.

ಉದ್ಯಮಿ ನಾರಾಯಣ ಹೆಗಡೆ ಬುಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿ. ಎಂ. ಹೆಗಡೆ ತ್ಯಾಗಲಿ ಅಧ್ಯಕ್ಷತೆ ವಹಿಸಿದ್ದರು. ಊರಿನ ಹಿರಿಯರಾದ ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ, ನಾರಾಯಣ ನಾಯ್ಕ ಹಂಗಾರಖಂಡ ಉಪಸ್ಥಿತರಿದ್ದರು.

ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆನಂತರ ಶಂಬರ ಸಂಸ್ಥೆಯ ನಾಗರಾಜ ಜೋಶಿ ಸಂಯೋಜನೆಯಲ್ಲಿ ಲವ- ಕುಶ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಅನಿರುದ್ಧ ಬೆಣ್ಣೆಮನೆ, ವಿಘ್ನೇಶ್ವರ ಕೆಸರಕೊಪ್ಪ ಸಹಕರಿಸಿದರು.

ಮುಮ್ಮೇಳದಲ್ಲಿ ರಾಮನಾಗಿ ಅಶೋಕ ಭಟ್ಟ ಸಿದ್ದಾಪುರ, ಶತ್ರುಘ್ನನಾಗಿ ಪ್ರಣವ ಭಟ್ಟ ಸಿದ್ದಾಪುರ, ಲವನಾಗಿ ಪ್ರವೀಣ ತಟ್ಟೀಸರ, ಕುಶನಾಗಿ ಸದಾಶಿವ ಮಲವಳ್ಳಿ, ಚಂದ್ರಸೇನ ಮತ್ತು ವಾಲ್ಮೀಕಿಯಾಗಿ ಜಟ್ಟಿ ಕಡಬಾಳ. ಸೀತೆ ಮತ್ತು ಬ್ರಾಹ್ಮಣನಾಗಿ ಅವಿನಾಶ ಕೊಪ್ಪ ಪಾತ್ರನಿರ್ವಹಿಸಿದರು.