ಬುದ್ಧ ಗಯಾ ಬೌದ್ಧರಿಗೆ ಉಳಿಸುವಂತೆ ಭಾರತೀಯ ಬೌದ್ಧ ಮಹಾಸಭಾ ಮನವಿ

| Published : Nov 27 2024, 01:05 AM IST

ಬುದ್ಧ ಗಯಾ ಬೌದ್ಧರಿಗೆ ಉಳಿಸುವಂತೆ ಭಾರತೀಯ ಬೌದ್ಧ ಮಹಾಸಭಾ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರದ ಬೌದ್ಧ ಗಯಾದಲ್ಲಿ ಇದುವರೆಗೂ ಬೌದ್ಧರಿಗೆ ಆಡಳಿತ ನೀಡಿಲ್ಲ. ಹೊರತಾಗಿ ನಾಲ್ವರು ಬೌದ್ಧರು ಮತ್ತು ನಾಲ್ವರು ಹಿಂದೂಗಳನ್ನು ಸೇರಿಸಿ ಆಡಳಿತ ಮಂಡಳಿ ಇರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬುದ್ಧ ಗಯಾದ ಮಹಾಬೋಧಿ ಮಹಾ ವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಕೊಳ್ಳೇಗಾಲ ಚೇತವನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿ, ಬುದ್ಧಗಯಾ ಜಗತ್ತಿನ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ. ಆದರೆ, ಇದರ ಆಡಳಿತ ಇದುವರೆಗೂ ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ಬಿಹಾರದ ಬೌದ್ಧ ಗಯಾದಲ್ಲಿ ಇದುವರೆಗೂ ಬೌದ್ಧರಿಗೆ ಆಡಳಿತ ನೀಡಿಲ್ಲ. ಹೊರತಾಗಿ ನಾಲ್ವರು ಬೌದ್ಧರು ಮತ್ತು ನಾಲ್ವರು ಹಿಂದೂಗಳನ್ನು ಸೇರಿಸಿ ಆಡಳಿತ ಮಂಡಳಿ ಇರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಬಿ.ಟಿ.ಕಾಯ್ದೆ -1949 ರದ್ದುಗೊಳಿಸಬೇಕು. ಈ ಮೂಲಕ ಬೌದ್ಧರ ಧಾರ್ಮಿಕ ಹಕ್ಕು ರಕ್ಷಿಸಬೇಕು ಎಂದು ಆಗ್ರಹಿಸಿದರು. ಸಂವಿಧಾನದ ಕಲಂ 25,26 ಮತ್ತು 29ರ ಪ್ರಕಾರ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಬೇಕು ಎಂಬ ನಿಯಮ ಇದೆ. ಎಲ್ಲ ಜಾತಿಗಳ ದೇವಸ್ಥಾನ, ಟ್ರಸ್ಟ್ ಗಳಿಗೆ ಆಯಾ ಜಾತಿಗಳ ಪ್ರಮುಖರು ಆಡಳಿತ ಮಂಡಳಿಗಳಿವೆ. ಆದರೆ ಬುದ್ದಗಯಾದಲ್ಲಿ ಇದರ ವಿರುದ್ಧ ನಡೆ ಇದೆ ಎಂದರು.

ಸಂವಿಧಾನ ವಿರೋಧಿ ಬಿಟಿ ಕಾಯಿದೆ -1949ರ ಅಡಿ ಆಡಳಿತ ಮಂಡಳಿಯೊಳಗೆ ಹಿಂದೂ, ಪುರೋಹಿತರನ್ನು ಸೇರಿಸುವ ಮೂಲಕ ಬೌದ್ಧ ಇತಿಹಾಸ ಮತ್ತು ಸಂಸ್ಕೃತಿ ನಾಶಕ್ಕೆ ಕೈಹಾಕಿದ್ದಾರೆ. ಬುದ್ಧನ ವಿಗ್ರಹದ ಮುಂದೆ ಶಿವಲಿಂಗ ಇದೆ ಎಂದು ಸುಳ್ಳು ಸೃಷ್ಟಿಸಿದ್ದಾರೆ. ಬುದ್ಧ ವಿಹಾರದ ಆವರಣದಲ್ಲಿ ಗಣಪತಿ ವಿಗ್ರಹವಿಟ್ಟಿದ್ದಾರೆ. ಹಲವು ಬೌದ್ಧ ಮೂರ್ತಿಗಳನ್ನು ಹಿಂದೂಕರಣ ಮಾಡಿದ್ದಾರೆ. ಅಲ್ಲಿ ಪಿಂಡದಾನ ಮಾಡಿ ಬೌದ್ಧ ಸಂಸ್ಕೃತಿಯ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಟಿ.ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಯಳಂದೂರಿನ ಮಹಾವನ ಬುದ್ಧ ವಿಹಾರದ ಬುದ್ಧ ರತ್ನ ಬಂತೇಜಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜು, ವಕೀಲರಾದ ಯಲಕ್ಕೂರು ಮಲ್ಲಿಕಾರ್ಜುನ್, ಹಿರಿಯ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ, ಕೃಷ್ಣಯ್ಯ, ಬುದ್ಧ ಮಹೇಶ್, ದಲಿತ ಸಂಘರ್ಷ ಸಮಿತಿಯ ಬೆಳ್ಳಿಯಪ್ಪ, ಸಿ.ಎಂ.ಶಿವಣ್ಣ, ಸುಶೀಲಾ, ಸಿದ್ದರಾಜು, ಶಿಕ್ಷಕ ನಟರಾಜ್, ವಾಸು ಹೊಂಡರಬಾಳು ಹಾಗೂ ಇತರರು ಹಾಜರಿದ್ದರು.

-----------

26ಸಿಎಚ್ಎನ್‌11

ಬುದ್ಧಗಯಾದ ಮಹಾಬೋಧಿ ಮಹಾ ವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.