ಜ.29ರಿಂದ ಭಾರತೀಯ ಸಂಸ್ಕೃತಿ ಉತ್ಸವ

| Published : Sep 09 2024, 01:34 AM IST

ಸಾರಾಂಶ

ಪಟ್ಟಣದ ರೆವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿಕಾಸ ಪಥ ರಥಯಾತ್ರೆಯ ನಂತರ ಜರುಗಿದ ಸಭೆ

ಕನ್ನಡಪ್ರಭ ವಾರ್ತೆ ಕಮಲಾಪುರ

ಸೆಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ ಮತ್ತು ಭಾರತ ವಿಕಾಸ ಸಂಗಮ ಪ್ರಾರಭವಾಗಿ 21 ವರ್ಷಗಳಾದ ಹಿನ್ನೆಲೆಯಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ ಬೃಹತ್ ಸಮಾವೇಶವನ್ನು ಒಟ್ಟು 240 ಎಕರೆ ಪ್ರದೇಶದಲ್ಲಿ ಪ್ರಕೃತಿ ನಗರ ಬೀರನಹಳ್ಳಿ, ಸೇಡಂ- ಕಲಬುರಗಿ ರಸ್ತಯಲ್ಲಿ ಜ.29ರಿಂದ ಫೆ.6ರ ವರೆಗೆ ಆಯೋಜಿಸಲಾಗಿದೆ ಎಂದು ಸೇಡಂನ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ರೆವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿಕಾಸ ಪಥ ರಥಯಾತ್ರೆಯ ನಂತರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ 50 ವರ್ಷಗಳು ಪೂರೈಸಿವೆ. ಈ ಸುಸಂದರ್ಭದಲ್ಲಿ 2025ರ ಜನೆವರಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಜ.29ರಿಂದ ಫೆ.6ರ ವರೆಗೆ ಈ ಉತ್ಸವ ನಡೆಯಲಿದೆ. ಕೃಷಿ, ಜ್ಞಾನ, ವಿಜ್ಞಾನ, ಕಲಾ, ಮಕ್ಕಳ, ಉದ್ಯಮ, ಸುಜನ್ಯ ಸಾಂಸ್ಕೃತಿಕ, ಯೋಗ ತರಬೇತಿ ಕಾರ್ಯಕ್ರಮಗಳು 240 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ 5 ಸಾವಿರ ಕಲಾವಿದರು ಸೇರಿದಂತೆ ಕಾರ್ಯಕ್ರಮದಲ್ಲಿ 30 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಪ್ರಮುಖರಾದ ಶಾಂತವೀರ ದೆವರು ಕಮಲಾಪುರ, ಪುಂಡಲಿಕರಾವ ಚಿರಡೆ, ಗೋರಕನಾಥ ಶಾಕಪುರ್, ಶಿವರಾಜ್ ಪಾಟೀಲ್, ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಶಿವಕುಮಾರ ದೋಸೆಟ್ಟಿ, ಶಿವಕುಮಾರ ಬೆಂಗಾಳಿ, ಭೀಮಶ್ ಪೂಜಾರಿ, ರವಿಕುಮಾರ ಬಿಕೆ, ಅಮೃತ ಗೌರೆ ಇದ್ದರು.