ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಆದರ್ಶ: ಸಿದ್ಧಲಿಂಗ ಸ್ವಾಮೀಜಿ

| Published : Dec 28 2024, 12:48 AM IST

ಸಾರಾಂಶ

ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಆದರ್ಶಪ್ರಾಯವಾದುದು. ಭಾರತ ಪವಿತ್ರರಾಷ್ಟ್ರ. ಅನಾದಿ ಕಾಲದಿಂದಲೂ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ನೀಡುತ್ತಿರುವ ರಾಷ್ಟ್ರ ನಮ್ಮದು ಎಂದು ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ತುಮಕೂರಿನಲ್ಲಿ ವಿವೇಕ ದಶಮಿ: ಭಾವಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಭಾರತೀಯ ಸಂಸ್ಕೃತಿ ವಿಶ್ವಕ್ಕೆ ಆದರ್ಶಪ್ರಾಯವಾದುದು. ಭಾರತ ಪವಿತ್ರರಾಷ್ಟ್ರ. ಅನಾದಿ ಕಾಲದಿಂದಲೂ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ನೀಡುತ್ತಿರುವ ರಾಷ್ಟ್ರ ನಮ್ಮದು ಎಂದು ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ, ಕರ್ನಾಟಕದ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವೇಕ ದಶಮಿ: ಭಾವಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ವಾಮಿ ವಿವೇಕಾನಂದರ ವಿಚಾರ ಸಾರ್ವಕಾಲಿಕವಾಗಿ ಜಗತ್ತಿಗೆ ಪ್ರಸ್ತುತ. ಮಾನವೀಯ ಗುಣಗಳನ್ನು ಜನರಲ್ಲಿ ಬೆಳೆಸಿ ಅವರನ್ನು ದಿವ್ಯರನ್ನಾಗಿ, ಯೋಗ್ಯರನ್ನಾಗಿಸುವ ಮಹತ್ಕಾರ್ಯ ಶ್ರೀ ರಾಮಕೃಷ್ಣಾಶ್ರಮಗಳಿಂದ ಆಗುತ್ತಿದೆ ಎಂದರು.ಧಾರ್ಮಿಕತೆ, ಆಧ್ಯಾತ್ಮಿಕತೆ, ನೈತಿಕತೆ ಮೂಡಿಸಿ ಎಲ್ಲರನ್ನೂ ಸಚ್ಚಾರಿತ್ರ್ಯವಂತರನ್ನಾಗಿಸುವ ಹೊಣೆಗಾರಿಕೆಯಿಂದ ಆಶ್ರಮ ಕಾ ರ್ಯನಿರ್ವಹಿಸುತ್ತಿದೆ ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ರಾಜ್ಯಾಧ್ಯಕ್ಷ ಮೈಸೂರಿನ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌ , ಪ್ರತಿಯೊಬ್ಬರೂ ಸನಾತನ ಸಂಸ್ಕೃತಿಯ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದರು.ಆಂಧ್ರಪ್ರದೇಶದ ನೆಲ್ಲೂರಿನ ರಾಮಕೃಷ್ಣ ಮಿಷನ್‌ ಕಾರ್ಯದರ್ಶಿ ಸ್ವಾಮಿ ಹೃದಾನಂದಜೀ ಮಹಾರಾಜ್‌ ಶ್ರೀರಾಮಕೃಷ್ಣರ ಆದರ್ಶಗಳು ಇಡೀ ಜಗತ್ತಿಗೇ ಮಾರ್ಗದರ್ಶಕವಾದುದು ಎಂದರು.ಮಂಗಳೂರಿನ ರಾಮಕೃಷ್ಣ ಮಿಷನ್ನಿನ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌ರವರು, ಶ್ರೀರಾಮಕೃಷ್ಣರು, ಶ್ರೀಮಾತೆ ಶ್ರೀಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಭಾವಿಸುತ್ತಾ ನಮ್ಮಲ್ಲಿ ಶ್ರದ್ಧಾ ಭಕ್ತಿಗಳು ಜಾಗೃತವಾಗುತ್ತವೆ. ದಿವ್ಯತ್ರಯರ ವಿಚಾರಗಳ ಚಿಂತನ ಮಂಥನದಿಂದ ಅಜ್ಞಾನದ ತೆರೆ ಸರಿಯುತ್ತದೆ ಎಂದರು.ದಿವ್ಯನೇತೃತ್ವವನ್ನು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್‌ ವಹಿಸಿದ್ದರು.ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿಗಳು ವಿವೇಕ ದಶಮಿ: ಭಾವಾವಲೋಕನ ಪುಸ್ತಕದ ಲೋಕಾರ್ಪಣೆಕಾರ್ಯವನ್ನು ನೆರವೇರಿಸಿಕೊಟ್ಟರು. ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌ರವರು, ಸ್ವಾಮಿಗೌತಮಾನಂದಜೀ ಮಹಾರಾಜ್‌ರವರ ಔನ್ನತ್ಯದತ್ತ ಪುಸ್ತಕದ ಲೋಕಾರ್ಪಣೆ ನೆರವೇರಿಸಿಕೊಟ್ಟರು.ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತೀರವರು, ಬೆಂಗಳೂರು ಹಲಸೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್‌ರವರು, ದಾವಣಗೆರೆರಾಮಕೃಷ್ಣ ಮಿಷನ್ನಿನ ಕಾರ್ಯದರ್ಶಿ ಸ್ವಾಮಿತ್ಯಾಗೀಶ್ವರಾನಂದಜೀ ಮಹಾರಾಜ್‌ರವರು ದಿವ್ಯಸಾನ್ನಿಧ್ಯ ವಹಿಸಿದ್ದರು.ವಿಶೇಷ ಆಹ್ವಾನಿತರಾಗಿ ಡಾ.ಎಸ್. ಆರ್.ರಮೇಶ್‌ ಹಾಗೂ ತುಮಕೂರಿನ ಕೈಗಾರಿಕೋದ್ಯಮಿ ಡಾ.ಎಚ್.ಜಿ. ಚಂದ್ರಶೇಖರ್‌ರವರು ಭಾಗವಹಿಸಿದ್ದರು. ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಗತಿಸಿ, ವಂದಿಸಿ, ಪೂಜ್ಯ ಸ್ವಾಮಿ ಪ್ರಕಾಶಾನಂದಜೀ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಸುಮಾರು ಭಕ್ತರು ಭಾಗವಹಿಸಿದ್ದರು.