ಸಾರಾಂಶ
- ಕರ್ನಾಟಕ ರಾಜ್ಯ ಮುಕ್ತ ವಿವಿ ಸಮಾಜಶಾಸ್ತ್ರ ವಿಭಾಗದ ಹಾಗೂ ಬಿ.ವಿ. ಕಾರಂತ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಆರ್. ಸಂತೋಷ್ ನಾಯಕ್---
ಕನ್ನಡಪ್ರಭ ವಾರ್ತೆ ಮೈಸೂರುನಾಣ್ಯಗಳ ಮೂಲಕ ನಾಗರಿಕತೆಯ ಇತಿಹಾಸವನ್ನು ಅರಿಯಲು ಮತ್ತು ಮಾನವ ಸಮಾಜದ ವಿಕಾಸವನ್ನು ಅರಿಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಸಮಾಜಶಾಸ್ತ್ರ ವಿಭಾಗದ ಹಾಗೂ ಬಿ.ವಿ. ಕಾರಂತ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಆರ್. ಸಂತೋಷ್ ನಾಯಕ್ ತಿಳಿಸಿದರು.
ನಗರದ ಹಾರ್ಡ್ವೀಕ್ ಶಾಲೆಯ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಆಯೋಜಿಸಿದ್ದ ಪ್ರಸಿದ್ಧ ನಾಣ್ಯ ಶಾಸ್ತ್ರಜ್ಞರು ಮತ್ತು ಸಂಗ್ರಹಕಾರ ಪಿ.ಕೆ. ಕೇಶವಮೂರ್ತಿ ಅವರ ಅಪೂರ್ವ ನಾಣ್ಯ ಮತ್ತು ನೋಟು, ಸ್ಟಾಂಪ್ ಗಳ 157ನೇ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಈ ಪ್ರದರ್ಶನದಲ್ಲಿ ಕ್ರಿ.ಪೂ. 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್ ಮಾರ್ಕ್, ನಾಣ್ಯಗಳು, ಗ್ರೀಕ್, ರೋಮನ್, ಕುಷಾನರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಭಾರತದ ನಾಣ್ಯಗಳು. ಮೊಘಲ್ ಸಾಮ್ರಾಜ್ಯದ ಆಕ್ಟರ್, ಜಹಾಂಗೀರ್, ಷಹಜಹಾನ್, ಔರಂಗಜೇಬ್, ಮುಂತಾದವರ ನಾಣ್ಯಗಳು. ಮೈಸೂರು, ಬಿಜಾಪುರ, ತಿರುವಾಂಕೂರು, ಹೈದರಾಬಾದ್, ಕಲ್, ಬರೋಡ, ಗ್ವಾಲಿಯರ್, ಮೇವಾರ ಮುಂತಾದ ಭಾರತೀಯ ಸಂಸ್ಥಾನಗಳ ನಾಣ್ಯಗಳು. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ, ಪೋರ್ಚಗೀಸರ ಮತ್ತು ಸ್ವತಂತ್ರ ಭಾರತದ ನಾಣ್ಯಗಳು ಹಾಗೂ ನೋಟುಗಳು, ಚಲಾವಣೆಯಿಂದ ಹಿಂತೆಗೆದುಕೊಂಡ ಐದು ನೂರು, ಸಾವಿರ ರೂಪಾಯಿ ನೋಟು.
ಸ್ಮರಣಾರ್ಥ ಬಿಡುಗಡೆಯಾದ ಹಲವು ದೇಶ-ವಿದೇಶಗಳ ವೈವಿಧ್ಯಮಯ ನಾಣ್ಯ ನೋಟುಗಳ ಅದ್ಭುತ ಪ್ರದರ್ಶನ. ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು. ವಿದೇಶಗಳ ಚಿನ್ನದಿಂದ ಮಾಡಿದ ನೋಟುಗಳು, ಇತ್ತೀಚಿನ ಪ್ಲಾಸ್ಟಿಕ್ ನೋಟು. ಮುದ್ರರಾಕ್ಷಸನ ಹಾವಳಿಯ ದೋಷವುಳ್ಳ ವಿಚಿತ್ರ ಆಕಾರದ ನಾಣ್ಯ, ನೋಟುಗಳ ನೂರಾರು ವರ್ಷಗಳ ಅಪೂರ್ವ ಸಂಗ್ರಹವನ್ನು ಶಾಲೆಯ ಮಕ್ಕಳು ಹಾಗೂ ಸಾರ್ವಜನಿಕರು ನೋಡಿ ಮಾಹಿತಿ ಪಡೆದರು.