ಸಾರಾಂಶ
ರಾಮನಗರ: ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಯೇ ವಿಶ್ವದ ಎಲ್ಲ ಕಲಾ ಪ್ರಾಕಾರಗಳಿಗೆ ಬುನಾದಿ ಎಂದು ಹಿರಿಯ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಣೇಶ್ ಎಲ್.ಭಟ್ ಹೇಳಿದರು.
ರಾಮನಗರ: ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಯೇ ವಿಶ್ವದ ಎಲ್ಲ ಕಲಾ ಪ್ರಾಕಾರಗಳಿಗೆ ಬುನಾದಿ ಎಂದು ಹಿರಿಯ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಣೇಶ್ ಎಲ್.ಭಟ್ ಹೇಳಿದರು.
ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಶಿಲ್ಪಿಗಳಿಗೆ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಸಂಸ್ಥೆಯ ನಿರ್ದೇಶಕ ಶಿವರಾಮ್ ಮಾತನಾಡಿ, ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆನರಾ ಬ್ಯಾಂಕ್, ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅವರವರ ಸಾಮರ್ಥ್ಯ ಅನುಸಾರ ಸಾಲ ಸೌಲಭ್ಯ ಒದಗಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದು ಶಿಲ್ಪ ಕಲೆಯಲ್ಲಿ ಸಾಧನೆ ಮಾಡಿದ ಕಲಾವಿದರನ್ನು 2023 ಮತ್ತು 24 ನೇ ಸಾಲಿನ ಯಶಸ್ವಿ ಸಾಧಕರು ಎಂದು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತ ಯಶಸ್ವಿ ಕಲಾವಿದರು ಶಿಲ್ಪಕಲೆಯ ತಮ್ಮ ಸುಧೀರ್ಘ ಅನುಭವವನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.ಸಂಸ್ಥೆಯ ಶಿಕ್ಷಕರಾದ ಚಂದ್ರಶೇಖರ್, ಸಿದ್ದಪ್ಪ, ನರೇಶ್ ಕುಮಾರ್, ಶಿವಕುಮಾರ್, ವೆಂಕಟೇಶ್, ಲಕ್ಷ್ಮೀ ಉಪಸ್ಥಿತರಿದ್ದರು.3ಕೆಆರ್ ಎಂಎನ್ 2.ಜೆಪಿಜಿ
ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಶಿಲ್ಪಿಗಳಿಗೆ ಆಯೋಜಿಸಲಾಗಿದ್ದ ಕೌಶಲ್ಯಾಭಿವೃದ್ಧಿ ಶಿಬಿರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಗಣೇಶ್ ಎಲ್. ಭಟ್ ಅವರನ್ನು ಸನ್ಮಾನಿಸಲಾಯಿತು.